ಚಿಕ್ಕಬಳ್ಳಾಪುರ : ದಿನಾಂಕ 04 ರಿಂದ 05ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ದಲ್ಲಿ ನಡೆಯಲಿರುವ ೫೯ನೇ ರಾಜ್ಯಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಗೆ ದಿನಾಂಕ ೨೮-೧೨-೨೦೨೪ನೇ ಶನಿವಾರ ಬೆಳಿಗ್ಗೆ ೧೧ ಗಂಟೆಗೆ ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಸರ್ ಎಂ.ವಿ.ಕ್ರೀಡಾ0ಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಮರ್ಥ್ ಜಿ.ಎಂ., ಸಿರಿವಂತ್ ಆರ್.ವಿ., ಸುಧಾಕರ್ ಇ.ಟಿ., ಆರ್ಯನ್.ಎಸ್., ಶ್ರೀನಿವಾಸ್.ಎನ್, ವರ್ಷಿತ್ ಎಂ.ಗೌಡ, ಹಿತೇಶ್‌ಗೌಡ, ಅಜಯ್, ತೌಸಿಕ್‌ಪಾಷ, ದೀಕ್ಷಿತ ಎಸ್.ಎನ್., ಪ್ರಣತಿ.ಪಿ, ಪ್ರಿಯಾ ವಿ.ಜಿ., ಅಕ್ಷಯ ರವರು ಆಯ್ಕೆ ಯಾಗಿದ್ದು ತಂಡದ ತರಬೇತಿದಾರರಾಗಿ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಪ್ರಧಾನಕಾರ್ಯದರ್ಶಿ ಮಂಚನಬಲೆ ಶ್ರೀನಿವಾಸ್, ಸಂಸ್ಥೆಯ ಪದಾಧಿಕಾರಿಗಳಾದ ಭೋರಯ್ಯ, ಗಂಗಾಧರ್, ತಂಡದ ವ್ಯವಸ್ಥಾಪಕರಾಗಿ ಸಿ.ಕೆ.ಚನ್ನಕೃಷ್ಣಪ್ಪ ತೆರಳುತ್ತಿದ್ದಾರೆ.
ಆಯ್ಕೆಯಾದ ಕ್ರೀಡಾಪಟುಗಳು ರಾಜ್ಯಮಟ್ಟದ ಕ್ರೀಡೆಯಲ್ಲಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ತಂದು ಜಿಲ್ಲೆಗೆ ಕೀರ್ತಿ ತರಲೆಂದು ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ.ವಿ.ನವೀನ್‌ಕಿರಣ್ ಶುಭ ಹಾರೈಸಿದರು.
ಇದನ್ನೂ ಓದಿ: sportsnews