Sunday, 11th May 2025

ದ.ಆಫ್ರಿಕಾ- ವಿಂಡೀಸ್ ತಂಡಗಳ ಮುಖಾಮುಖಿ ನಾಳೆ

ದುಬೈ: ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ಮುಖಾಮುಖಿಯಾಗಲಿವೆ.

ಮೊದಲ ಪಂದ್ಯಗಳಲ್ಲಿ ಸೋತು ನಿರಾಸೆಗೆ ಒಳಗಾಗಿರುವ ಎರಡೂ ತಂಡಗಳು ಈ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಒತ್ತು ನೀಡಲು ಮುಂದಾಗುವ ಸಾಧ್ಯತೆ ಇದೆ.

ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ 55 ರನ್‌ಗಳಿಗೆ ಪತನಗೊಂಡಿದ್ದರೆ ದಕ್ಷಿಣ ಆಫ್ರಿಕಾ 118 ರನ್‌ ಗಳಿಸಿ ಎದು ರಾಳಿಗಳಿಗೆ ಮಣಿದಿತ್ತು. ಕಗಿಸೊ ರಬಾಡ, ಆನ್ರಿಚ್ ನಾರ್ಕಿಯಾ, ತಬ್ರೇಜ್ ಮತ್ತು ಕೇಶವ್ ಮಹಾರಾಜ್ ಅವರ ಬೌಲಿಂಗ್‌ನಲ್ಲಿ ಯಾವುದೇ ತಂಡದ ಬ್ಯಾಟರ್‌ಗಳನ್ನು ನಿಯಂತ್ರಿಸುವಷ್ಟು ಮೊನಚು ಇದೆ.

ಎರಡು ಬಾರಿ ಪ್ರಶಸ್ತಿ ಗೆದ್ದಿರುವ ವೆಸ್ಟ್ ಇಂಡೀಸ್ ತಂಡದಲ್ಲಿ ಕ್ರಿಸ್ ಗೇಲ್ ಹೊರತುಪಡಿಸಿ ಬೇರೆ ಯಾರಿಗೂ ಮೊದಲ ಪಂದ್ಯದಲ್ಲಿ ಮಿಂಚಲು ಆಗಲಿಲ್ಲ. ಆರಂಭದಲ್ಲಿ ಅನುಭವಿಸಿದ ಆಘಾತದಿಂದ ತಂಡವನ್ನು ಮೇಲೆತ್ತಲು ಆ ಪಂದ್ಯದಲ್ಲಿ ಯಾರೂ ಮುಂದಾಗಲಿಲ್ಲ.

ಹಿಂದಿನ 5 ಪಂದ್ಯಗಳ ಫಲಿತಾಂಶ

ದಕ್ಷಿಣ ಆಫ್ರಿಕಾ

ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ ಸೋಲು

ಶ್ರೀಲಂಕಾ ವಿರುದ್ಧ 10 ವಿಕೆಟ್ ಗೆಲುವು

ಶ್ರೀಲಂಕಾ ವಿರುದ್ಧ 9 ವಿಕೆಟ್ ಗೆಲುವು

ಶ್ರೀಲಂಕಾ ವಿರುದ್ಧ 28 ರನ್‌ ಗೆಲುವು

ಐರ್ಲೆಂಡ್ ವಿರುದ್ಧ 49 ರನ್‌ ಗೆಲುವು

ವೆಸ್ಟ್ ಇಂಡೀಸ್

ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಸೋಲು

ಪಾಕಿಸ್ತಾನ ಎದುರು ಫಲಿತಾಂಶವಿಲ್ಲ

ಪಾಕಿಸ್ತಾನ ಎದುರು ಫಲಿತಾಂಶವಿಲ್ಲ

ಪಾಕಿಸ್ತಾನ ಎದುರು 7 ರನ್ ಸೋಲು

ಪಾಕಿಸ್ತಾನ ಎದುರು ಫಲಿತಾಂಶವಿಲ್ಲ

 

Leave a Reply

Your email address will not be published. Required fields are marked *