Tuesday, 13th May 2025

ವಾಂಡರರ್ಸ್‌ನಲ್ಲಿ ಕಡೆಗೂ ಗೆದ್ದ ಹರಿಣ, ಸರಣಿ ಸಮಬಲ

ಜೋಹಾನ್ಸ್‌ಬರ್ಗ್‌: ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಏಳು ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿದೆ. ದಕ್ಷಿಣ ಆಫ್ರಿಕಾ ಗೆಲುವಿಗೆ 240 ರನ್‌ಗಳ ಅಗತ್ಯವಿತ್ತು, ಪಂದ್ಯದ ನಾಲ್ಕನೇ ದಿನದಂದು ಮೂರು ವಿಕೆಟ್‌ಗಳ ನಷ್ಟಕ್ಕೆ ಈ ಸಾಧನೆ ಮಾಡಿದೆ.
ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ತಂಡವನ್ನು ಮುಂಚೂಣಿಯಿಂದ ಮುನ್ನಡೆಸಿದರು ಮತ್ತು ಅಜೇಯ 96 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.

ನಾಲ್ಕನೇ ದಿನ ದಕ್ಷಿಣ ಆಫ್ರಿಕಾ ಎರಡು ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ ಇನ್ನಿಂಗ್ಸ್ ಆರಂಭಿಸಿತು. ಆದರೆ, ದಿನದ ಎರಡೂ ಆರಂಭಿಕ ಅವಧಿಯ ಆಟ ಮಳೆ ಯಿಂದಾಗಿ ಕೊಚ್ಚಿಹೋಯಿತು. ಆದರೆ ಕೊನೆಯ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ಅಗತ್ಯ ರನ್ ಗಳಿಸಿತು. ವಾಂಡರರ್ಸ್‌ನ ಈ ಮೈದಾನದಲ್ಲಿ ಭಾರತಕ್ಕೆ ಇದು ಮೊದಲ ಸೋಲು.