Monday, 12th May 2025

ಶ್ರೀಲಂಕಾಗೆ ನಾಲ್ಕು ವಿಕೆಟ್ ಗೆಲುವು: ಸರಣಿ ಸಮಬಲ

ಕೊಲಂಬೊ: ಪ್ರೇಮ್ ದಾಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಶ್ರೀಲಂಕಾ ನಾಲ್ಕು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಉಭಯ ತಂಡಗಳು 1-1 ಅಂಕಗಳೊಂದಿಗೆ ಸಮಬಲ ಸಾಧಿಸಿವೆ.

ಪ್ರಮುಖ ಆಟಗಾರರ ಅಲಭ್ಯತೆ ನಡುವೆಯೂ ಗೆಲುವಿಗಾಗಿ ಅಂತಿಮ ಹಂತದವರೆಗೂ ಹೋರಾಡಿದ ಭಾರತದ ಯುವ ಪಡೆ 2ನೇ ಟಿ20 ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡಕ್ಕೆ 4 ವಿಕೆಟ್‌ಗಳಿಂದ ಶರಣಾಯಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತು. ನಾಯಕ ಶಿಖರ್ ಧವನ್ (40 ರನ್, 42 ಎಸೆತ, 5 ಬೌಂಡರಿ), ಋತುರಾಜ್ ಗಾಯಕ್ವಾಡ್ (21 ರನ್, 18 ಎಸೆತ, 1 ಬೌಂಡರಿ) ಹಾಗೂ ಕನ್ನಡಿಗ ದೇವದತ್ ಪಡಿಕಲ್ (29 ರನ್, 23 ಎಸೆತ, 1 ಬೌಂಡರಿ, 1 ಸಿಕ್ಸರ್) ಉಪಯುಕ್ತ ದೇಣಿಗೆಯಿಂದ 5 ವಿಕೆಟ್‌ಗೆ 132 ರನ್ ಪೇರಿಸಿತು.

ಭಾರತ ನೀಡಿದ 132 ರನ್ ಗಳ ಗುರಿ ಬೆನ್ನಟ್ಟಿದ್ದ ಶ್ರೀಲಂಕಾ ತಂಡ ಧನಂಜಯ ಡಿಸಿಲ್ವ (40*ರನ್, 34 ಎಸೆತ, 1 ಬೌಂಡರಿ, 1 ಸಿಕ್ಸರ್) ಕಡೇ ಹಂತದಲ್ಲಿ ತೋರಿದ ಏಕಾಂಗಿ ನಿರ್ವಹಣೆ ಲವಾಗಿ 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 133 ರನ್‌ಗಳಿಸಿ ಜಯದ ನಗೆ ಬೀರಿತು. ಶ್ರೀಲಂಕಾ ತಂಡದ ಪರ ಅವಿಷ್ಕಾ ಫರ್ನಾಂಡೋ 11, ಮಿನೊದ್ ಬಾನುಕಾ 36, ಸದೀರಾ ಸಮರ ವಿಕ್ರಮ 8, ದಾಸೂನ್ ಶಾನಕಾ 3, ಧನಂಜಯ ಡಿ ಸಿಲ್ವಾ 40 , ವಾನಿಂದು ಹಸರಂಗ 15, ರಮೇಶ್ ಮೆಂಡಿಸ್ 2, ಚಾಮಿಕಾ ಕರುಣರತ್ನೆ 12 ರನ್ ಗಳಿಸುವ ಮೂಲಕ ಶ್ರೀಲಂಕಾ ಆರು ವಿಕೆಟ್ ನಷ್ಟಕ್ಕೆ 133 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.

ಶ್ರೀಲಂಕಾ ಪರ 40 ರನ್ ಗಳಿಸಿದ ಧನಂಜಯ ಡಿ ಸಿಲ್ವಾ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

Leave a Reply

Your email address will not be published. Required fields are marked *