Sunday, 11th May 2025

ಮೊಹಮ್ಮದ್ ಶಮಿಗೆ ಕೋವಿಡ್ -19 ಪಾಸಿಟಿವ್ ದೃಢ

ನವದೆಹಲಿ: ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್‌ ಮೊಹಮ್ಮದ್ ಶಮಿಗೆ ಕೋವಿಡ್ -19 ಪಾಸಿಟಿವ್ ದೃಢವಾಗಿದ್ದು,

ಸೆ.20 ರಿಂದ ಮೊಹಾಲಿಯಲ್ಲಿ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ T20 ಸರಣಿಯಿಂದ ಹೊರಗುಳಿಯಲಿದ್ದಾರೆ. ಅವರ ಬದಲಿಗೆ ವೇಗಿ ಉಮೇಶ್ ಯಾದವ್ ಅವರನ್ನು ಟೀಂಗೆ ಸೇರಿಸಿಕೊಳ್ಳಲಾಗಿದೆ.

ಶಮಿಗೆ ಕೋವಿಡ್‌ ಪಾಸಿಟಿವ್‌ ದೃಢಪಟ್ಟಿರುವ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ. ʻರೋಗಲಕ್ಷಣಗಳು ಸೌಮ್ಯವಾಗಿರುವುದರಿಂದ ಚಿಂತಿಸಬೇಕಾಗಿಲ್ಲ. ಅವರು ಪ್ರತ್ಯೇಕವಾಗಿದ್ದಾರೆ. ಅವರು ಗುಣಮುಖವಾದ ಬಳಿಕ ತಂಡಕ್ಕೆ ಮತ್ತೆ ಸೇರಲು ಸಾಧ್ಯ ವಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

‘ದಕ್ಷಿಣ ಆಫ್ರಿಕಾ ವಿರುದ್ಧದ ಮುಂದಿನ ಸರಣಿಗೆ ಶಮಿ ಸೇರಿಕೊಳ್ಳುತ್ತಾರೆ ಎಂದು ನಿರೀಕ್ಷಿ ಸುತ್ತಿದ್ದೇವೆ. ಆ ಸರಣಿ ಪ್ರಾರಂಭಕ್ಕೆ ಇನ್ನೂ 10 ದಿನಗಳಿವೆ. ಅದಕ್ಕೂ ಮುನ್ನ ಶಮಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.