Tuesday, 13th May 2025

ಕ್ರಿಕೆಟ್ ದೇವರಿಗೆ ಇಂದು 48ನೇ ಹುಟ್ಟುಹಬ್ಬದ ಸಂಭ್ರಮ

ಮುಂಬೈ: ಕ್ರಿಕೆಟ್‌ ರಂಗದಲ್ಲಿ ’ಕ್ರಿಕೆಟ್ ದೇವರು’ ಎಂದೇ ಖ್ಯಾತಿ ಪಡೆದಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಶನಿವಾರ 48ನೇ ಹುಟ್ಟುಹಬ್ಬ ಆಚರಿಸಿಕೊಂಡರು.

ಸಚಿನ್ ತೆಂಡೂಲ್ಕರ್ 1989 ನವೆಂಬರ್ 15ರಂದು ಟೆಸ್ಟ್‌ ಕ್ರಿಕೆಟ್‌ ನಲ್ಲಿ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಕೇವಲ 16ನೇ ವಯಸ್ಸಿನಲ್ಲಿ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಸಚಿನ್ ತೆಂಡೂಲ್ಕರ್ ಹಲವಾರು  ದಾಖಲೆ ಗಳ ಸರದಾರ.

ಏಕದಿನ ಕ್ರಿಕೆಟ್ ನಲ್ಲಿ 463 ಪಂದ್ಯಗಳನ್ನಾಡಿರುವ ಸಚಿನ್ 18426 ರನ್ ಗಳನ್ನು ಬಾರಿಸಿದ್ದು, ಇದುವರೆಗೂ ಈ ದಾಖಲೆಯನ್ನು ದಾಖಲೆಯಾಗುಯೇ ಉಳಿದಿದೆ. ಏಕದಿನ ಕ್ರಿಕೆಟ್ ನಲ್ಲಿ 49 ಶತಕಗಳನ್ನು ಸಿಡಿಸಿ, ಅತಿ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ 1973 ಏಪ್ರಿಲ್ 24ರಂದು ಮುಂಬೈನಲ್ಲಿ ಜನಿಸಿದರು.

ಇಂದು ಸಾಮಾಜಿಕ ಜಾಲತಾಣದಲ್ಲಿ ಮಾಜಿ ಕ್ರಿಕೆಟಿಗರು ಹಾಗೂ ಯುವ ಕ್ರಿಕೆಟಿಗರು ಸಚಿನ್ ತೆಂಡೂಲ್ಕರ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *