Wednesday, 14th May 2025

ಅಪಘಾತ: ಕ್ರಿಕೆಟ್‌ ಅಂಪಾಯರ್‌ ರೂಡಿ ಕೊಯೆರ್ಟ್ಜೆನ್ ಸಾವು

ಜೋಹಾನ್ಸ್‌ಬರ್ಗ್‌: ವಿಶ್ವ ಕ್ರಿಕೆಟ್‌ನ ಜನಪ್ರಿಯ ಮುಖ ದಕ್ಷಿಣ ಆಫ್ರಿಕಾದ ಅಂಪೈರ್ ರೂಡಿ ಕೊಯೆರ್ಟ್ಜೆನ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ದಕ್ಷಿಣ ಆಫ್ರಿಕಾದ ರಿವರ್ಸ್ ಡೇಲ್ ಎಂಬ ಪ್ರದೇಶದಲ್ಲಿ ಮಂಗಳವಾರ ಅಪಘಾತ ಸಂಭವಿಸಿದೆ. ನೆಲ್ಸನ್ ಮಂಡೇಲಾ ಕೊಲ್ಲಿಯ ಡಿಸ್ಪ್ಯಾಚ್ ನಿವಾಸಿ 73 ವರ್ಷದ ಕೊಯೆರ್ಟ್ಜೆನ್ ಗಾಲ್ಫ್ ವಾರಾಂತ್ಯದ ನಂತರ ಕೇಪ್ಟೌನ್‌ನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಅವರ ಮಗ ರುಡಿ ಕೊಯೆರ್ಟ್ಜೆನ್ ಜೂನಿಯರ್ ಅಲ್ಗೋವಾ, ತಮ್ಮ ತಂದೆ ನಿಧನರಾದ ಸುದ್ದಿಯನ್ನ ದೃಢಪಡಿಸಿದ್ದಾರೆ.

ಚಿಕ್ಕಂದಿನಿಂದಲೂ ಕ್ರಿಕೆಟ್ ಉತ್ಸಾಹಿಯಾಗಿದ್ದ ರೂಡಿ ಕೊಯೆರ್ಟ್ಜೆನ್ ದಕ್ಷಿಣ ಆಫ್ರಿಕಾದ ರೈಲ್ವೆಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುವಾಗ ಲೀಗ್ ಕ್ರಿಕೆಟ್ ಆಡಿದರು. ಅವರು 1981ರಲ್ಲಿ ಅಂಪೈರ್ ಆದರು ಮತ್ತು ಹನ್ನೊಂದು ವರ್ಷಗಳ ನಂತರ ಪೋರ್ಟ್ ಎಲಿಜಬೆತ್ʼನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡ ಪಂದ್ಯದಲ್ಲಿ ಅಂಪೈರಿಂಗ್ ಪಾದಾರ್ಪಣೆ ಮಾಡಿದರು.