ದುಬಾಯಿ: ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡದ ಸವಾಲನ್ನು ಬೆನ್ನತ್ತಿರುವ ಸನ್‌ರೈಸ್ ತಂಡವು ಒಂದು ವಿಕೆಟ ಕಳೆದುಕೊಂಡು 25 ರನ್ ಗಳಿಸಿತ್ತು. ನಾಯಕ ಡೇವಿಡ್ ವಾರ್ನರ್ ರನೌಟ್ ಆದರು.
ಇದಕ್ಕೂ ಮುನ್ನ ಕನ್ನಡಿಗ, ತಮ್ಮ ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ದೇವದತ್ ಪಡಿಕ್ಕಲ್ ಹಾಗೂ ಮಿ.360 ಖ್ಯಾತಿಯ ಹರಿಣ ಆಟಗಾರ ಎಬಿಡಿ ವಿಲಿರ‍್ಸ್ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡ ನಿಗದಿತ ಓವರುಗಳಲ್ಲಿ ಐದು ವಿಕೆಟ್ ಕಳೆದುಕೊಂಡು 164 ರನ್ ಪೇರಿಸಿತು.
ದುಬೈ ಅಂತಾರಾಷ್ಟಿçÃಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 13ನೇ ಐಪಿಎಲ್‌ನ ಮೂರನೇ ಪಂದ್ಯದಲ್ಲಿ ಸನ್‌ರೈರ‍್ಸ್ ಹೈದರಾ ಬಾದ್ ತಂಡ ಟಾಸ್ ಗೆದ್ದು, ಆರ್‌ಸಿಬಿ ತಂಡವನ್ನು ಬ್ಯಾಟಿಂಗಿಗೆ ಆಹ್ವಾನಿಸಿತು. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿ ಕೊಂಡ ಬೆಂಗಳೂರು ತಂಡಕ್ಕೆ ಆರಂಭಿಕರಾದ ದೇವದತ್ ಪಡಿಕ್ಕಲ್ ಹಾಗೂ ಆರನ್ ಫಿಂಚ್ ಅರ್ಧಶತಕದ ಅಡಿಪಾಯ ಹಾಕಿದರು.
ದೇವದತ್ ಎಂಟು ಬೌಂಡರಿ ನೆರವಿನಿಂದ ತಮ್ಮ ಮೊದಲ ಅರ್ಧಶತಕ (56) ಬಾರಿಸಿದರೆ, ಎಬಿಡಿ ವಿಲಿರ‍್ಸ್ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 51 ರನ್ ಬಾರಿಸಿ, ರನೌಟಿಗೆ ಬಲಿಯಾದರು. ನಾಯಕ ವಿರಾಟ್ ಕೊಹ್ಲಿ 14 ರನ್ನಿಗೆ ಸಾಕೆನಿಸಿಕೊಂಡರು. ಸನ್ರೆöÊಸ್ ತಂಡದ ಟಿ.ನಟರಾಜನ್, ವಿಜಯ್ ಶಂಕರ್ ಹಾಗೂ ಅಭಿಷೇಕ್ ಶರ್ಮಾ ತಲಾ ಒಂದು ವಿಕೆಟ್ ಕಬಳಿಸಿದರು.