Wednesday, 14th May 2025

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಪಿಆರ್ ಶ್ರೀಜೇಶ್, ದೀಪಿಕಾ ನಾಮನಿರ್ದೇಶನ

ನವದೆಹಲಿ: ಭಾರತದ ಮಾಜಿ ಮಹಿಳಾ ಆಟಗಾರ್ತಿ ದೀಪಿಕಾ ಹಾಗೂ ಹಾಕಿ ತಂಡದ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಹಾಕಿ ಇಂಡಿಯಾ ನಾಮನಿರ್ದೇಶನ ಮಾಡಲಾಗಿದೆ.

ಹರ್ಮನ್ ಪ್ರೀತ್ ಸಿಂಗ್, ವಂದನಾ ಕಟಾರಿಯಾ ಮತ್ತು ನವಜೋತ್ ಕೌರ್ ಅವರನ್ನ ಅರ್ಜುನ ಪ್ರಶಸ್ತಿಗೆ ನಾಮ ನಿರ್ದೇಶನ ಹಾಗೂ  ಜೀವಮಾನ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿಗಾಗಿ, ಹಾಕಿ ಇಂಡಿಯಾ ಭಾರತದ ಮಾಜಿ ನಾಯಕರಾದ ಡಾ. ಆರ್.ಪಿ.ಸಿಂಗ್ ಮತ್ತು ಎಂ.ಎಸ್.ಎಂ.ಸಿ.ಎಚ್. ಸಾಂಗ್ಗೈ ಇಬೆಮ್ಹಾಲ್ ಅವರನ್ನು ಶಿಫಾರಸು ಮಾಡಿದೆ. ತರಬೇತುದಾರರಾದ ಬಿಜೆ ಕರಿಯಪ್ಪ ಮತ್ತು ಸಿಆರ್ ಕುಮಾರ್ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಪರಿಗಣನೆಯ ಅವಧಿ ಜನವರಿ 1, 2017 ರಿಂದ ಡಿಸೆಂಬರ್ 31,2020 ರ ನಡುವೆ ಇದೆ. ಆರ್ ಶ್ರೀಜೇಶ್ ಹಾಕಿ ಚಾಂಪಿಯನ್ಸ್ ಟ್ರೋಫಿ ಬ್ರೆಡಾ 2018 ರಲ್ಲಿ ಭಾರತದ ಬೆಳ್ಳಿ ಪದಕ ಗೆದ್ದಿದ್ದು, 2018ರ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಪಡೆದಿದೆ. ಎಫ್‌ಐಎಚ್ ಪುರುಷರ ಸರಣಿ ಫೈನಲ್ಸ್ ಭುವನೇಶ್ವರ ಒಡಿಶಾ 2019 ರಲ್ಲಿ ಚಿನ್ನದ ಪದಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಶ್ರೀಜೇಶ್ 2015ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2017ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದೀಪಿಕಾ ಭಾರತೀಯ ಮಹಿಳಾ ಹಾಕಿ ತಂಡದ ಪ್ರಮುಖ ಭಾಗವಾಗಿದ್ದರು. ಇದು 2018ರ ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2018ರಲ್ಲಿ ಬೆಳ್ಳಿ ಪದಕವನ್ನ ಗೆದ್ದಿತು.

Leave a Reply

Your email address will not be published. Required fields are marked *