Monday, 12th May 2025

ಮಹಿಳಾ ODI ವಿಶ್ವಕಪ್‌: ಅರ್ಹತಾ ಪಂದ್ಯ ರದ್ದು

ಹರಾರೆ: ಆಫ್ರಿಕನ್ ಪ್ರದೇಶದಲ್ಲಿ ಹೊಸ ರೂಪಾಂತರ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ, ಹರಾರೆಯಲ್ಲಿ ಮುಂದಿನ ವರ್ಷದ ಮಹಿಳಾ ODI ವಿಶ್ವಕಪ್‌ಗಾಗಿ ನಡೆಯುತ್ತಿರುವ ಅರ್ಹತಾ ಪಂದ್ಯವನ್ನು ಐಸಿಸಿ ಶನಿವಾರ ರದ್ದುಗೊಳಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪಾಂತರ ಪತ್ತೆ ಹಚ್ಚಿದ ಬಳಿಕ ಪ್ರಪಂಚದಾದ್ಯಂತ ಉಂಟಾಗಿರುವ ಭಯವನ್ನು ಆಫ್ರಿಕನ್ ದೇಶಗಳಿಂದ ಬರುವವರ ಪ್ರಯಾಣ ನಿರ್ಬಂಧಗಳನ್ನು ಅನೇಕ ದೇಶದಲ್ಲಿ ಹೇರಲಾಗಿದೆ. ಹೀಗಾಗಿ, ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ.

ಒಂಬತ್ತು-ತಂಡಗಳ ಪಂದ್ಯಾವಳಿಯ ಪ್ರಾಥಮಿಕ ಲೀಗ್ ಹಂತದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.