Wednesday, 14th May 2025

ಪ್ರೊ ಕಬಡ್ಡಿ ಲೀಗ್ : ‘ಕೂ’ ಗೆ ಸೇರಿದ ಬೆಂಗಳೂರು ಬುಲ್ಸ್

ಬಹುಭಾಷಾ ಮೈಕ್ರೋ ಬ್ಲಾಗಿಂಗ್ ಆಪ್ ಮೂಲಕ ಕನ್ನಡಿಗರೊಂದಿಗೆ ಕನ್ನಡದಲ್ಲೇ ಸಂವಾದಿಸಲಿದೆ ಬೆಂಗಳೂರು ಬುಲ್ಸ್

ಬೆಂಗಳೂರು: ಇನ್ನೇನು ಕಬ್ಬಡಿ ಹಬ್ಬ ಶುರುವಾಗಲಿದೆ, ಇದೆ ವೇಳೆ ಸ್ಥಳೀಯ ಭಾಷೆಗಳಲ್ಲಿ ಅಭಿಮಾನಿ ಗಳೊಂದಿಗೆ ಬೆರೆಯಲು ಅತ್ಯಂತ ಭರವಸೆಯ ಪ್ರೊ ಕಬಡ್ಡಿ ಲೀಗ್ ತಂಡಗಳಲ್ಲಿ ಒಂದಾದ ಬೆಂಗಳೂರು ಬುಲ್ಸ್ ಇತ್ತೀಚೆಗೆ ಭಾರತದ ಬಹು-ಭಾಷಾ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ಅನ್ನು ಸೇರಿದೆ.

ತಮ್ಮ ಅಧಿಕೃತ ಹ್ಯಾಂಡಲ್ @bengalurubullsofficial ನಿಂದ ಕೂ ಮಾಡಿದ್ದು, ತಂಡವು ತಮ್ಮ ಸ್ಟಾರ್ ಆಟಗಾರರೊಬ್ಬರು ತೂಕ ಎತ್ತುವ ವೀಡಿಯೊ ವನ್ನು ಹಂಚಿಕೊಂಡಿದೆ. ಲೀಗ್‌ನ ಎಂಟನೇ ಸೀಸನ್‌ಗೆ ಬೆಂಗ ಳೂರು ಬುಲ್ಸ್ ಆಟಗಾರರು ಸಜ್ಜಾಗುತ್ತಿದ್ದು, ಇದೇ ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ.

ಬೆಂಗಳೂರು ಬುಲ್ಸ್ , “ನಾವು ನಿಂಗೆ ಗೆಲ್ಲೋಕೆ ಕೊಡಲ್ಲ! ಇದು ನಿಜವಾದ ಯುದ್ಧವಾಗಿದೆ ಮತ್ತು ಮೃಗದ ರೀತಿ ನಮ್ಮ ಗೂಳಿಗಳು ಸಿದ್ಧವಾಗುತ್ತಿದ್ದಾರೆ!’

ವೃತ್ತಿಪರತೆಯ ಹೊಸ ಹಂತಗಳನ್ನು ಒಳಗೊಳ್ಳುವ ಹಾಗೂ ಉದಯೋನ್ಮುಖ ಆಟಗಾರರು ಮತ್ತು ಅಭಿಮಾನಿ ಗಳಲ್ಲಿ ಮಹತ್ವಾಕಾಂಕ್ಷೆ ರೂಪಿಸುವ ಮೂಲಕ ಪ್ರೊ ಕಬಡ್ಡಿ ಲೀಗ್ ಸ್ಥಳೀಯ ಆಟವಾದ ಕಬಡ್ಡಿಗೆ ಹೆಚ್ಚು ಆಕರ್ಷಣೆಯನ್ನು ತಂದಿದೆ. ಇತ್ತೀಚೆಗೆ, ಯು ಮುಂಬಾ, ಯುಪಿ ಯೋದ್ಧ, ಪುಣೇರಿ ಪಲ್ಟನ್, ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟಾನ್ಸ್‌ನಂತಹ ಇತರ ಪ್ರೊ ಕಬಡ್ಡಿ ಲೀಗ್ ತಂಡಗಳು ಕೂಡ ಕೂಗೆ ಸೇರಿವೆ. ಈ ಜನಪ್ರಿಯ ತಂಡಗಳ ಉಪಸ್ಥಿತಿಯು ಸ್ವಯಂ ಅಭಿವ್ಯಕ್ತಿ ವೇದಿಕೆಯಾದ ಕೂ ನಲ್ಲಿ ತೀವ್ರ ಚಟುವಟಿಕೆಯನ್ನು ಸೃಷ್ಟಿಸಲಿದೆ ಮತ್ತು ಬಳಕೆದಾರರಿಗೆ ಕ್ರೀಡಾ ತಲ್ಲೀನತೆ ಅನುಭವ ವನ್ನು ನೀಡುತ್ತದೆ.