Monday, 12th May 2025

ಹುಟ್ಟುಹಬ್ಬದ ಸಂಭ್ರಮದಲ್ಲಿ ’ದಾದಾ’

ಮುಂಬೈ: ಟೀಂ ಇಂಡಿಯಾ ಕಂಡ ಶ್ರೇಷ್ಠ ನಾಯಕ, ಸದ್ಯ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಗುರುವಾರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

49ನೇ ವರ್ಷಕ್ಕೆ ಕಾಲಿಟ್ಟ ಸೌರವ್ ಗಂಗೂಲಿ 2000 ಇಸವಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಟೀಂ ಇಂಡಿಯಾ ಅವಮಾನ ಅನುಭವಿಸಿದ್ದ ಸಮಯದಲ್ಲಿ ತಂಡದ ಚುಕ್ಕಾಣಿ ಹಿಡಿದು ಹೊಸ ಅಧ್ಯಾಯ ಬರೆದರು. ಟೀಂ ಇಂಡಿಯಾ ಕಂಡ ಕ್ರಾಂತಿಕಾರಿ ನಾಯಕ.

ಆಗಿನ ಯುವ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಜಹೀರ್ ಖಾನ್, ಮಹೇಂದ್ರ ಸಿಂಗ್ ಧೋನಿ, ಹರ್ಭಜನ್ ಸಿಂಗ್, ವೀರೆಂದ್ರ ಸೆಹವಾಗ್, ಮೊಹಮ್ಮದ್ ಕೈಫ್, ಆಶೀಶ್ ನೆಹ್ರಾ ಮುಂತಾದವರು ಸೌರವ್ ಗಂಗೂಲಿ ನಾಯಕತ್ವದಲ್ಲೇ ಟೀಂ ಇಂಡಿಯಾ ಪ್ರವೇಶ ಪಡೆದಿದ್ದರು.

ತಂಡದ ಹಿತಕ್ಕಾಗಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡ ಕೀರ್ತಿ ಸೌರವ್ ಗಂಗೂಲಿಗೆ ಸೇರುತ್ತದೆ. ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ವೀರೆಂದ್ರ ಸೆಹವಾಗ್ ರನ್ನು ಟೆಸ್ಟ್ ಕ್ರಿಕೆಟ್’ನಲ್ಲಿ ಆರಂಭಿಕರನ್ನಾಗಿ ಮಾಡಿ, ದಿಲ್ಲಿ ಕ್ರಿಕೆಟಿಗ ವೃತ್ತಿ ಜೀವನದ ದಿಕ್ಕನ್ನೇ ಬದಲಿಸಿದರು. ಮುಂದೆ ಸೆಹವಾಗ್ ಟೆಸ್ಟ್ ನಲ್ಲಿ ಎರಡು ತ್ರಿಶತಕ ಬಾರಿಸಿ ದರು.

ಎಡಗೈ ಬ್ಯಾಟ್ಸಮನ್ ಆಗಿದ್ದ ಸೌರವ್ ಗಂಗೂಲಿ ಏಕದಿನ ಕ್ರಿಕೆಟ್ ನಲ್ಲಿ 11,363 ರನ್ ಗಳು ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ 7212 ರನ್ ಗಳಿಸಿದ್ದಾರೆ.

Leave a Reply

Your email address will not be published. Required fields are marked *