ನವದೆಹಲಿ: ಆಸ್ಟ್ರೇಲಿಯಾ ವಿರುದ್ದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಅವರನ್ನು ವಿಶ್ವಕಪ್ ವಿಜೇತ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ (Yuvraj Singh) ಬೆಂಬಲಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಅಂತ್ಯವಾಗಿದ್ದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ 190 ರನ್‌ಗಳನ್ನು ಕಲೆ ಹಾಕಿದ್ದರೆ, ರೋಹಿತ್ ಶರ್ಮಾ ಅವರು ಕೇವಲ 31 ರನ್‌ಗಳಿಗೆ ಸೀಮಿತರಾಗಿದ್ದರು. ಭಾರತ ತಂಡ ಟೆಸ್ಟ್ ಸರಣಿ ಸೋಲಲು ಈ ಇಬ್ಬರ ವೈಫಲ್ಯ ಕೂಡ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಈ ಸರಣಿಯಲ್ಲಿ ಟೀಮ್ ಇಂಡಿಯಾ 1-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ.
“ನಾವು ನಮ್ಮ ಶ್ರೇಷ್ಠ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬಗ್ಗೆ ಮಾತನಾಡುತ್ತಿದ್ದೇವೆ, ಅವರು ಬಗ್ಗೆ ಕೆಟ್ಟದಾಗಿ ನಾವು ಮಾತನಾಡುತ್ತಿದ್ದೇವೆ. ಅವರು ಈ ಹಿಂದೆ ಏನು ಸಾಧನೆ ಮಾಡಿದ್ದಾರೆಂಬುದನ್ನು ಜನರು ಮರೆತಿದ್ದಾರೆ. ಪ್ರಸ್ತುತ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಈ ಇಬ್ಬರೂ ಕೂಡ ಸೇರುತ್ತಾರೆ. ಸರಿ, ಅವರು ಸೋತಿದ್ದಾರೆಂದು ನಾವು ಭಾವಿಸೋಣ. ಆದರೆ, ಅವರು ಒಳ್ಳೆಯ ಕ್ರಿಎಕಟ್ ಆಡಲಿಲ್ಲವೆ? ಅವರು ನಮಗಿಂತ ಜಾಸ್ತಿ ನೋವಿನಲ್ಲಿದ್ದಾರೆ,” ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ.
Yuvraj Singh talking about Virat Kohli and Rohit Sharma and replies to all the critics. (PTI).
— Tanuj Singh (@ImTanujSingh) January 7, 2025
– He said "Rohit & Kohli are my Brothers. My job is to support my family and my brother. They will bounce back". ❤️pic.twitter.com/RQ08bgtD7g
“ಗೌತಮ್ ಗಂಭಿರ್ ಕೋಚ್, ಅಜಿತ್ ಅಗರ್ಕರ್ ಸೆಲೆಕ್ಟರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬುಮ್ರಾ ಅವರು ಪ್ರಸ್ತುತ ಕ್ರಿಕೆಟ್‌ನ ಅತ್ಯುತ್ತಮ ಮನಸಿನವರಾಗಿದ್ದಾರೆ. ಹಾಗಾಗಿ ಭಾರತೀಯ ಕ್ರಿಕೆಟ್‌ನ ಭವಿಷ್ಯ ಏನೆಂದು ಅವರೇ ನಿರ್ಧರಿಸಬೇಕಾಗಿದೆ,” ಎಂದು 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ಆಲ್‌ರೌಂಡರ್ ಹೇಳಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವಕ್ಕೆ ಯುವಿ ಬೆಂಬಲ
ಕಳೆದ ಕೆಲವು ತಿಂಗಳುಗಳಲ್ಲಿ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾಕಷ್ಟು ಹಿನ್ನಡೆಯನ್ನು ಅನುಭವಿಸಿದೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 0-3 ಅಂತತರದಲ್ಲಿ ಭಾರತ ತಂಡ ಸೋಲು ಅನುಭವಿಸಿತ್ತು. ಟೆಸ್ಟ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ ಭಾರತ ತವರಿನಲ್ಲಿ ಕಿವೀಸ್ ಎದುರು ಸೋಲು ಅನುಭವಿಸಿದಂತಾಗಿತ್ತು. ಇದಾದ ಬಳಿಕ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿಯೂ ಟೀಮ್ ಇಂಡಿಯಾ 1-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಅದರಲ್ಲಿಯೂ ವಿಶೇಷವಾಗಿ ಭಾರತ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ ಕಳೆದ 15 ಇನಿಂಗ್ಸ್‌ಗಳಲ್ಲಿ ಗಳಿಸಿರುವುದು ಕೇವಲ 164 ರನ್‌ಗಳು ಮಾತ್ರ. ಇದರ ಹೊರತಾಗಿಯೂ ರೋಹಿತ್ ಶರ್ಮಾ ಅವರನ್ನು ಯುವರಾಜ್ ಸಿಂಗ್ ಬೆಂಬಲಿಸಿದ್ದಾರೆ.
Shubman Gill: ʻಶುಭಮನ್ ಗಿಲ್‌ಗೆ ಏಕೆ ಇಷ್ಟೊಂದು ಅವಕಾಶ?-ಬಿಸಿಸಿಐಗೆ ಕೆ ಶ್ರೀಕಾಂತ್ ಪ್ರಶ್ನೆ!
“ಇದು ದೊಡ್ಡ ಸಂಗತಿ ಎಂದು ನಾನು ಭಾವಿಸುತ್ತೇನೆ. ತಮ್ಮ ಫಾರ್ಮ್ ಸರಿಯಿಲ್ಲವೆಂದು ತಂಡದಿಂದ ಹೊರಗುಳಿದಿರುವ ನಾಯಕರನ್ನು ನಾನು ಎಂದಿಗೂ ನೋಡಿಯೇ ಇಲ್ಲ. ಇದು ರೋಹಿತ್ ಶರ್ಮಜಾ ಅವರ ಅದ್ಭುತ ವ್ಯಕ್ತಿತ್ವವನ್ನು ತೋರಿಸುತ್ತದೆ. ತಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ತಂಡಕ್ಕೆ ಮೊದಲ ಪ್ರಾಶಸ್ತ್ಯವನ್ನು ನೀಡಿದ್ದಾರೆ. ಅವರು ನನಗೆ ಅನಿಸಿದ ಹಾಗೆ ಶ್ರೇಷ್ಠ ನಾಯಕ. ತಂಡ ಸೋಲಲಿ ಅಥವಾ ಗೆಲ್ಲಲಿ ಅವರು ಎಂದಿಗೂ ಅದ್ಭುತ ನಾಯಕ. ಅವರ ನಾಯಕತ್ವದಲ್ಲಿ ನಾವು ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಡಿದ್ದೇವೆ ಹಾಗೂ ಟಿ20 ವಿಶ್ವಕಪ್ ಅನ್ನು ಗೆದ್ದಿದ್ದೇವೆ. ಇದರ ಜೊತೆಗೆ ನಾವು ಸಾಕಷ್ಟು ಸಾಧಿಸಿದ್ದೇವೆ,” ಎಂದು ಮಾಜಿ ಆಲ್‌ರೌಂಡರ್ ಶ್ಲಾಘಿಸಿದ್ದಾರೆ.
ಈ ಸುದ್ದಿಯನ್ನು ಓದಿ: Mohammed Shami: ʻಈ ವೇಗಿ ಆಡಿದ್ದರೆ ಭಾರತದ ಕಥೆ ಬೇರೆ ರೀತಿ ಇರುತ್ತಿತ್ತುʼ-ರವಿ ಶಾಸ್ತ್ರಿ!