Sunday, 11th May 2025

ಜಯ್‌ ಶಾ ಹೇಳಿಕೆಗೆ ಪಿಸಿಬಿ ತೀಕ್ಷ್ಣ ಪ್ರತಿಕ್ರಿಯೆ

ಮುಂಬೈ : 2023ರಲ್ಲಿ ನಡೆಯಲಿರುವ ಏಷ್ಯಾಕಪ್‌ಗೆ ಭಾರತ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಜಯ್ ಶಾ ಹೇಳಿದ್ದು, ಆ ಬಳಿಕ ಇದೀಗ ಪಾಕಿಸ್ತಾನದಿಂದ ಉತ್ತರ ಸಿಕ್ಕಿದೆ.

ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವ ಕಪ್‌ನಿಂದ ತನ್ನ ಹೆಸರನ್ನ ಹಿಂತೆಗೆದುಕೊಳ್ಳುವುದಾಗಿ ಪಾಕಿಸ್ತಾನ ಹೇಳಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ ಅವರಿಗೆ ಸಂಬಂಧಿಸಿದ ಮೂಲಗಳು ಭಾರತದ ಈ ಹೇಳಿಕೆಯ ಬಳಿಕ ಪಾಕಿಸ್ತಾನವು ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳಲು ಸಿದ್ಧವಾಗಿದೆ. ಏಷ್ಯಾಕಪ್‌ಗಾಗಿ ಪಾಕಿಸ್ತಾನಕ್ಕೆ ಬರದಿರುವ ಭಾರತದ ನಿರ್ಧಾರದ ಮೇಲೆ, 2023ರಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಿಂದಲೂ ತನ್ನ ಹೆಸರನ್ನ ಹಿಂಪಡೆಯ ಬಹುದು ಎಂದು ಪಿಸಿಬಿ ಹೇಳಿದೆ.

ಆದರೆ, ಶಾ ಹೇಳಿಕೆ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಅಕ್ಟೋಬರ್ 23 ರಂದು T20 ವಿಶ್ವಕಪ್ 2022ರಲ್ಲಿ ಮೆಲ್ಬೋರ್ನ್‌ನಲ್ಲಿ ಎರಡೂ ತಂಡಗಳು ಪರಸ್ಪರ ಮುಖಾಮುಖಿ ಯಾಗುವ ಬಗ್ಗೆ ಎರಡು ಕ್ರಿಕೆಟ್ ಮಂಡಳಿಗಳ ನಡುವಿನ ಈ ಮಾತಿನ ಯುದ್ಧ ನಡೆಯುತ್ತಿದೆ.

ಮಂಗಳವಾರ ಮುಂಬೈನಲ್ಲಿ ಬಿಸಿಸಿಐ ಎಜಿಎಂ ನಡೆದಿದ್ದು, 2023ರಲ್ಲಿ ನಡೆಯಲಿರುವ ಏಷ್ಯಾಕಪ್‌ಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಮಂಡಳಿಯ ಕಾರ್ಯದರ್ಶಿ ಜಯ್ ಶಾ ಸ್ಪಷ್ಟ ಪಡಿಸಿದ್ದಾರೆ.

ಇದಾದ ಬಳಿಕ ಪಾಕಿಸ್ತಾನದ ಪಾಳಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಭಾರತ ಮತ್ತು ಪಾಕಿಸ್ತಾನ ಪರಸ್ಪರ ಯಾವುದೇ ದ್ವಿಪಕ್ಷೀಯ ಸರಣಿಗಳನ್ನ ಆಡುವುದಿಲ್ಲ ಎಂದಿದೆ.

ಏಷ್ಯಾ ಕಪ್ 2023 ಪಾಕಿಸ್ತಾನದಲ್ಲಿ ನಡೆಯಲಿದೆ, ಹಾಗೆಯೇ 2025ರ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ. 2023ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿರುವಾಗ, ಈ ಪಂದ್ಯಾವಳಿಯನ್ನ ಬಹಿಷ್ಕರಿಸುವುದಾಗಿ ಪಾಕಿಸ್ತಾನ ಹೇಳಿದೆ.