Tuesday, 13th May 2025

ಮ್ಯಾಕ್ಸ್‌ವೆಲ್‌ ಆಗಮನ: ಆರ್‌ಸಿಬಿ ಇನ್ನಷ್ಟು ಬಲಿಷ್ಠ

ಮುಂಬೈ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಐಪಿಎಲ್‌ನ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌  ಅವರ ಸೇವೆ ಲಭ್ಯವಾಗಲಿದೆ ಎಂದು ತಂಡದ ಮುಖ್ಯ ಕೋಚ್‌ ಮೈಕ್‌ ಹೆಸ್ಸನ್‌ ಹೇಳಿದ್ದಾರೆ.

ಬೆಂಗಳೂರು ಏ.9ರಂದು ಮುಂಬೈ ಇಂಡಿಯನ್ಸ್‌ ಸವಾಲನ್ನು ಎದುರಿಸಲಿದೆ.

ಮ್ಯಾಕ್ಸ್‌ವೆಲ್‌ ಅವರು ಕ್ರಿಕೆಟ್‌ ಆಸ್ಟ್ರೇಲಿಯ ತನ್ನ ಒಪ್ಪಂದಕ್ಕೆ ಸಹಿ ಹಾಕಿದ ಆಟಗಾರರಿಗೆ ವಿಧಿಸಿದ ನಿರ್ಬಂಧದ ಕಾರಣವಾಗಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯಕ್ಕೆ ಲಭ್ಯರಾಗಲಿಲ್ಲ.

ಮ್ಯಾಕ್ಸ್‌ವೆಲ್‌ ಪಾಕಿಸ್ತಾನ ಪ್ರವಾಸದಲ್ಲಿರುವ ಆಸ್ಟ್ರೇಲಿಯ ತಂಡದಲ್ಲಿ ಇಲ್ಲದಿದ್ದರೂ ಅವರು ಐಪಿಎಲ್‌ನಲ್ಲಿ ಆಡಲು ಏ.6ರವರೆಗೆ ಕಾಯಬೇಕಾಗಿದೆ. ಏ.6ರ ಬಳಿಕವಷ್ಟೇ ಆಸ್ಟ್ರೇಲಿಯ ಆಟಗಾರರು ಐಪಿಎಲ್‌ನಲ್ಲಿ ಆಡಲು ಅವಕಾಶವಿದೆ.

ಕ್ರಿಕೆಟ್‌ ಆಸ್ಟ್ರೇಲಿಯದ ಸೂಚನೆಯಂತೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿದ ಆಟಗಾರರು ಏ.6ರ ಮೊದಲು ಐಪಿಎಲ್‌ನಲ್ಲಿ ಆಡಲು ಲಭ್ಯರಿಲ್ಲ.

ಹೀಗಾಗಿ ಮ್ಯಾಕ್ಸ್‌ವೆಲ್‌ ಆರ್‌ಸಿಬಿಯ ಏ.9ರ ಪಂದ್ಯಕ್ಕೆ ಲಭ್ಯರಿರಲಿದ್ದಾರೆ ಎಂದು ಹೆಸ್ಸನ್‌ ಸ್ಪಷ್ಟಪಡಿಸಿದ್ದಾರೆ.