Tuesday, 13th May 2025

ಕುಶಲ್ ಮೆಂಡಿಸ್’ಗೆ ಎದೆನೋವು: ಆಸ್ಪತ್ರೆಗೆ ದಾಖಲು

ಢಾಕಾ: ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ವೇಳೆ ಶ್ರೀಲಂಕಾ ಕ್ರಿಕೆಟಿಗ ಕುಶಲ್ ಮೆಂಡಿಸ್ ಅವರಿಗೆ ಎದೆ ನೋವು ಕಾಣಿಸಿಕೊಂಡು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭೋಜನ ವಿರಾಮಕ್ಕೆ ಮುನ್ನ ಕೊನೆಯ ಓವರ್‌ನಲ್ಲಿ ಮೆಂಡಿಸ್‌ಗೆ ಅನಾ ರೋಗ್ಯ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ವೈದ್ಯಕೀಯ ಸಿಬ್ಬಂದಿ ಪರೀಕ್ಷಿಸಿದೆ. ಬಳಿಕ, ಎದೆ ಹಿಡಿದುಕೊಂಡೇ ಹೊರಗೆ ತೆರಳಿದ್ದಾರೆ.

ಮೆಂಡೀಸ್ ಅವರನ್ನು ಹೆಚ್ಚಿನ ತಪಾಸಣೆಗೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ವೈದ್ಯ ಹೊಸೈನ್ ಚೌಧರಿ ತಿಳಿಸಿದ್ದಾರೆ.

ನಿರ್ಜಲೀಕರಣ ಸಮಸ್ಯೆ ಆಗಿರಬಹುದು. ಅದೇ ಅವರ ಅನಾರೋಗ್ಯಕ್ಕೆ ಕಾರಣವಾಗಿರಬಹುದು. ವೈದ್ಯಕೀಯ ಪರೀಕ್ಷೆಗಳು ಮುಗಿದ ಬಳಿಕವಷ್ಟೇ ಈ ಬಗ್ಗೆ ಸ್ಪಷ್ಟವಾಗಿ ಹೇಳಬಹುದು ಎಂದು ಹೇಳಿದ್ದಾರೆ. ಕುಶಲ್ ಮೆಂಡಿಸ್ ಸ್ಥಾನಕ್ಕೆ ಕಮಿಂದು ಮೆಂಡಿಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.