Tuesday, 13th May 2025

ವೆಸ್ಟ್ ಇಂಡೀಸ್ ಆಲ್ರೌಂಡರ್ ಕೀರನ್ ಪೊಲಾರ್ಡ್ ನಿವೃತ್ತಿ

ಟ್ರಿನಿಡಾಡ್‌: ವೆಸ್ಟ್ ಇಂಡೀಸ್ ಆಲ್ರೌಂಡರ್ ಕೀರನ್ ಪೊಲಾರ್ಡ್ ಅವರು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿರುವುದಾಗಿ ಬುಧವಾರ ಘೋಷಿಸಿದ್ದಾರೆ.

ಈ ಕುರಿತು 34 ವರ್ಷದ ಟ್ರಿನಿಡಾಡಿಯನ್ ಕ್ರಿಕೆಟಿಗ ಘೋಷಣೆ ಮಾಡಿದ್ದಾರೆ.

ಪೊಲಾರ್ಡ್ 123 ಏಕದಿನ ಮತ್ತು 101 ಟೆಸ್ಟ್ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನ ಪ್ರತಿನಿಧಿಸಿದ್ದಾರೆ. ಪೊಲಾರ್ಡ್ ಎಂದಿಗೂ ತಮ್ಮ ದೇಶಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡಿಲ್ಲ.

ಟ್ರಿನಿಡಾಡಿಯನ್ ಆಗಿರುವ ಪೊಲಾರ್ಡ್ ಕ್ರಿಕೆಟ್ ಉತ್ತಮ ಅಲ್‌ರೌಂಡರ್‌ಗಳಲ್ಲಿ ಒಬ್ಬರು. ಉಪಯುಕ್ತ ಮಧ್ಯಮ ವೇಗದ ಬೌಲರ್ ಕೂಡ ಆಗಿದ್ದಾರೆ. 2009ರ ಚಾಂಪಿಯನ್ಸ್ ಲೀಗ್ ಟಿ20ಯಲ್ಲಿ ಅವರ ಗಮನಾರ್ಹ ಪ್ರದರ್ಶನ ಅವರನ್ನ ರಾಷ್ಟ್ರವ್ಯಾಪಿ ಮನೆಮಾತಾಗಿಸಿತು.