Wednesday, 14th May 2025

ಕಿಡಂಬಿ ಶ್ರೀಕಾಂತ್’ಗೆ ವಿಶ್ವ ಚಾಂಪಿಯನ್‌ ಟೈಟಲ್‌ ಜಸ್ಟ್ ಮಿಸ್‌

Kidambi Srikanth

ಹುಯೆಲ್ವಾ: ಭಾರತದ ಕಿಡಂಬಿ ಶ್ರೀಕಾಂತ್ ಅವರು ಸ್ವಲ್ಪದರಲ್ಲಿ BFW ವಿಶ್ವ ಚಾಂಪಿಯನ್‌ಶಿಪ್ ಟೈಟಲ್‌ ಮುಡಿಗೇರಿಸಿಕೊಳ್ಳುವ ಸುವರ್ಣಾವಕಾಶ ಕಳೆದು ಕೊಂಡಿದ್ದಾರೆ.

ಫೈನಲ್ ಪಂದ್ಯದಲ್ಲಿ ವಿಶ್ವದ 22ನೇ ಶ್ರೇಯಾಂಕದ ಸಿಂಗಾಪುರದ ಲೊ ಕಿಯೊನ್ ಯೊ ಎದುರು 15-21, 20-22 ನೇರ ಸೆಟ್ ಗಳಿಂದ ಕಿಡಂಬಿ ಪರಾಭವ ಗೊಂಡರು.

42 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 15ನೇ ಶ್ರೇಯಾಂಕದ ಶ್ರೀಕಾಂತ್ ವಿರುದ್ದ ನಿರ್ಣಾಯಕ ಕ್ಷಣಗಳಲ್ಲಿ ಎದುರಾಳಿ ಮೇಲುಗೈ ಸಾಧಿಸಿದರು. ಇದರಿಂದ ಶ್ರೀಕಾಂತ್ ರಜತ ಪದಕಕ್ಕೆ ತೃಪ್ತಿಪಟ್ಟು ಕೊಳ್ಳಬೇಕಾಯಿತು. ವೃತ್ತಿ ಜೀವನದ ಮೊದಲ ಪ್ರಶಸ್ತಿಯನ್ನು ಕಿಯೋನ್ ಗೆದ್ದುಕೊಂಡರು. ಸಾಧನೆ ಮಾಡಿದ ಮೊದಲ ಸಿಂಗಾಪುರದ ಶಟ್ಲರ್ ಎಂಬ ಇತಿಹಾಸ ನಿರ್ಮಿಸಿದರು.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದಿಂದ ಚಿನ್ನ ಗೆದ್ದ ಏಕೈಕ ಭಾರತೀಯ ಆಟಗಾರ್ತಿ ಪಿವಿ ಸಿಂಧು. ಎರಡು ಬಾರಿ ಬೆಳ್ಳಿ ಗೆದ್ದಿರುವ ಸಿಂಧು, 2019ರಲ್ಲಿ ವಿಜೇತೆ ಯಾಗಿ ಇತಿಹಾಸ ನಿರ್ಮಿಸಿದ್ದರು.