Sunday, 11th May 2025

ಐಪಿಎಲ್ 2023ರ ಜಿಯೋ ಸಿನಿಮಾ ರಾಯಭಾರಿಯಾಗಿ ರೋಹಿತ್ ಶರ್ಮಾ ಆಯ್ಕೆ

ನವದೆಹಲಿ: ಜಿಯೋಸಿನಿಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ನಡೆಯುತ್ತಿರುವ ಆವೃತ್ತಿಗೆ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಜಿಯೋಸಿನಿಮಾದ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ.

ಡಿಜಿಟಲ್ ಸ್ಟ್ರೀಮಿಂಗ್ ನಮ್ಮ ಲಕ್ಷಾಂತರ ವೀಕ್ಷಕರಿಗೆ ನವೀನ ಮತ್ತು ಅನನ್ಯ ಅನುಭವವನ್ನು ನೀಡುತ್ತದೆ ಎಂದು ಭಾವಿಸುತ್ತೇವೆ’ ಎಂದು ಜಿಯೋಸಿನಿಮಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಯೋಸಿನಿಮಾ ಶೀಘ್ರದಲ್ಲೇ ರೋಹಿತ್ ಶರ್ಮಾ ಅವರನ್ನೊಳಗೊಂಡ ಪ್ರೋಮೋಗಳು ಮತ್ತು ಜಾಹೀರಾತು ಪ್ರಚಾರಗಳೊಂದಿಗೆ ಹೊರಬರಲಿದೆ.

ಜಿಯೋಸಿನಿಮಾ ಮತ್ತು ಮುಂಬೈ ಇಂಡಿಯನ್ಸ್ ಎರಡೂ ರಿಲಯನ್ಸ್ ಗ್ರೂಪ್ ಒಡೆತನದಲ್ಲಿದೆ.

ಜಿಯೋಸಿನಿಮಾ ತನ್ನ ರಾಯಭಾರಿಗಳಾಗಿ ಸಚಿನ್ ತೆಂಡೂಲ್ಕರ್, ಸೂರ್ಯಕುಮಾರ್ ಯಾದವ್, ಎಂಎಸ್ ಧೋನಿ ಮತ್ತು ಸ್ಮೃತಿ ಮಂದಾನ ಅವರ ಹೆಸರನ್ನು ಸಹ ಹೊಂದಿದೆ.