Sunday, 11th May 2025

ಇಂಗ್ಲೆಂಡ್ ಸರಣಿ ನಂತರ ಜೂಲನ್ ಕ್ರಿಕೆಟ್‌ನಿಂದ ನಿವೃತ್ತಿ

ನವದೆಹಲಿ: ಟೀಂ ಇಂಡಿಯಾದ  ಮಹಿಳಾ ತಂಡದ ಹಿರಿಯ ವೇಗಿ ಜೂಲನ್ ಗೋಸ್ವಾಮಿ ಇಂಗ್ಲೆಂಡ್ ಸರಣಿಯ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ.

ಸೆಪ್ಟೆಂಬರ್ 24 ರಂದು ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದ ನಂತರ ನಿವೃತ್ತಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯಾಗಿ 39 ರ ಹರೆಯದ ಜೂಲನ್ ತನ್ನ ವೃತ್ತಿಜೀವನ ವನ್ನು ಕೊನೆಗೊಳಿಸಲಿದ್ದಾರೆ. ಅವರು ಪ್ರಸ್ತುತ ಮೂರು ಸ್ವರೂಪಗಳಲ್ಲಿ 352 ವಿಕೆಟ್‌ಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಈ ವರ್ಷದ ಆರಂಭದಲ್ಲಿ, ಜೂಲನ್ ಅವರ ದೀರ್ಘಕಾಲದ ಸಹ ಆಟಗಾರ್ತಿ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಬಿಸಿಸಿಐ ಶುಕ್ರವಾರ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಭಾರತ ಮಹಿಳಾ ಟಿ20 ಮತ್ತು ಏಕದಿನ ಸರಣಿಗೆ ತಂಡವನ್ನು ಪ್ರಕಟಿಸಿದ್ದು, ಮೂರು ಪಂದ್ಯಗಳ ಟಿ 20 ಸರಣಿಯು ಸೆಪ್ಟೆಂಬರ್ 10 ರಂದು ಪ್ರಾರಂಭವಾಗಲಿದ್ದು, ಏಕದಿನ ಸರಣಿಯು ಸೆಪ್ಟೆಂಬರ್ 18 ರಂದು ಪ್ರಾರಂಭವಾಗಲಿದೆ.