Monday, 12th May 2025

ಐರ್ಲೆಂಡ್ ಪ್ರವಾಸಕ್ಕೆ ವೇಗಿ ಜಸ್ಪ್ರೀತ್ ಬುಮ್ರಾ..!

ನವದೆಹಲಿ: ಗಾಯದಿಂದಾಗಿ ಭಾರತ ತಂಡದಿಂದ ಹೊರಗುಳಿದಿರುವ ವೇಗಿ ಜಸ್ಪ್ರೀತ್ ಬುಮ್ರಾ ಐರ್ಲೆಂಡ್ ಪ್ರವಾಸದ ವೇಳೆ ಮರಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಏಷ್ಯಾಕಪ್‌ಗೆ ಮುಂಚಿತವಾಗಿ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮೈದಾನಕ್ಕೆ ಮರಳುವ ನಿರೀಕ್ಷೆಯಿದೆ. ಮುಂದಿನ ಏಕದಿನ ಮತ್ತು ಟಿ 20 ಸರಣಿಗಳಿಗೆ ಬಲಿಷ್ಠ ಬೌಲಿಂಗ್ ಪಡೆಯೊಂದಿಗೆ ಭಾರತ ಕಣಕ್ಕಿಳಿಯಲಿದೆ. ಬೆನ್ನು ನೋವಿನಿಂದ ಚೇತರಿಸಿ ಕೊಳ್ಳುತ್ತಿರುವ ಬುಮ್ರಾ ಆಗಸ್ಟ್‌ನಲ್ಲಿ ಭಾರತದ ಐರ್ಲೆಂಡ್ ಪ್ರವಾಸದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ವಿಶ್ವ ಕಪ್​ಗೂ ಮುನ್ನ ಗಾಯಕ್ಕೆ ಜಸ್ಪ್ರೀತ್ ಬುಮ್ರಾ ತುತ್ತಾದರು. ಐಸಿಸಿ ಮೆಗಾ ಈವೆಂಟ್‌ಗೆ ಆಸ್ಟ್ರೇಲಿಯಾಕ್ಕೆ ಮೆನ್​ ಇನ್​ ಬ್ಲೂ ತೆರಳುವ ಮುನ್ನ ಭಾರತಕ್ಕೆ ಇದು ದೊಡ್ಡ ನಷ್ಟವಾಗಿತ್ತು. ಅವರ ಗಾಯವು ಉಲ್ಬಣಗೊಂಡಿತು, ಇದರಿಂದಾಗಿ ಅವರು ಏಷ್ಯಾ ಕಪ್ 2022 ರ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು.

ಸಪ್ಟೆಂಬರ್​ನಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬಂದಿದ್ದಾಗ ಆಡಿದ ಪಂದ್ಯವೇ ಕೊನೆಯದ್ದಾಗಿತ್ತು. ಇದಾದ ನಂತರ ಗಾಯಗೊಂಡ ಅವರು ಶಸ್ತ್ರಚಿಕಿತ್ಸೆಗೆ ಒಳಗಾದದರು.