Saturday, 10th May 2025

IPL AUCTION 2025: ನಾಳೆ ಮೆಗಾ ಹರಾಜು; ಸಂಪೂರ್ಣ ಮಾಹಿತಿ ಇಲ್ಲಿದೆ

ದುಬೈ: 18ನೇ ಆವೃತ್ತಿಯ ಐಪಿಎಲ್‌(IPL AUCTION 2025) ಆಟಗಾರರ ಮೆಗಾ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದ್ದು, ಭಾನುವಾರ ಮತ್ತು ಸೋಮವಾರ ಸೌದಿ ಅರೇಬಿಯದ ಜೆಡ್ಡಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಎಲ್ಲ 10 ಫ್ರಾಂಚೈಸಿಗಳು ಜೆಡ್ಡಾ ತಲುಪಿದೆ. ಪ್ರಮುಖ ಆಟಗಾರರನ್ನು ಖರೀದೀಸಲು ಮಾಸ್ಟರ್​ ಪ್ಲ್ಯಾನ್​ ರಚಿಸಿವೆ.

ಮೆಗಾ ಹರಾಜಿನಲ್ಲಿ ಒಟ್ಟು 577 ಮಂದಿ ಆಟಗಾರರು ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ. ಹರಾಜಿಗೆ 1,574 ಮಂದಿ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದರು. ಆದರೆ ಬಿಸಿಸಿಐ 577 ಮಂದಿ ಆಟಗಾರರ ಹೆಸರು ಶಾರ್ಟ್‌ಲಿಸ್ಟ್ ಮಾಡಿದೆ. ಈ ಪೈಕಿ 367 ಮಂದಿ ಭಾರತೀಯರಾದರೆ, 210 ಕ್ರಿಕೆಟಿಗರು ವಿದೇಶೀಯರು. 81 ಆಟಗಾರರು 2 ಕೋಟಿ ರೂ., 27 ಕ್ರಿಕೆಟಿಗರು 1.5 ಕೋಟಿ ರೂ. ಮೂಲ ಬೆಲೆ ಹೊಂದಿದ್ದಾರೆ. ಶ್ರೇಯಸ್‌ ಅಯ್ಯರ್‌, ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌, ಅರ್ಷದೀಪ್‌ ಸಿಂಗ್‌ ಬಂಪರ್‌ ಮೊತ್ತದ ನಿರೀಕ್ಷೆಯಲ್ಲಿದ್ದಾರೆ.

ನೇರ ಪ್ರಸಾರ

ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ಹರಾಜಿನ ನೇರ ಪ್ರಸಾರವನ್ನು ಕ್ರಿಕೆಟ್ ಅಭಿಮಾನಿಗಳು ವೀಕ್ಷಿಸಬಹುದಾಗಿದೆ. ಜತೆಗೆ ವೈಕಾಂ18 ಹಾಗೂ ರಿಲಯನ್ಸ್‌, ಡಿಜಿಟಲ್ ಹಕ್ಕು ಪಡೆದಿರುವುದರಿಂದಾಗಿ ಜಿಯೋ ಸಿನಿಮಾ ಆ್ಯಪ್​ ಮೂಲಕವೂ ಆಟಗಾರರ ಹರಾಜು ಪ್ರಕ್ರಿಯೆಯನ್ನು ವೀಕ್ಷಿಸಬಹುದಾಗಿದೆ.

ತಂಡಗಳ ಬಳಿ ಇರುವ ಮೊತ್ತ

1. ಪಂಜಾಬ್‌ ಕಿಂಗ್ಸ್‌-110.5 ಕೋಟಿ ರೂ.

2. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು- 83 ಕೋಟಿ ರೂ.

3. ಡೆಲ್ಲಿ ಕ್ಯಾಪಿಟಲ್ಸ್‌-73 ಕೋಟಿ ರೂ.

4. ಲಕ್ನೋ ಸೂಪರ್‌ ಜೈಂಟ್ಸ್‌-69 ಕೋಟಿ ರೂ.

5. ಗುಜರಾತ್‌ ಟೈಟಾನ್ಸ್‌- 69 ಕೋಟಿ ರೂ.

6. ಮುಂಬೈ ಇಂಡಿಯನ್ಸ್‌- 55 ಕೋಟಿ ರೂ.

7. ರಾಜಸ್ಥಾನ್‌ ರಾಯಲ್ಸ್‌-41ಕೋಟಿ ರೂ.

8. ಸನ್‌ರೈಸರ್ಸ್‌ ಹೈದರಾಬಾದ್‌-45 ಕೋಟಿ ರೂ.

9. ಚೆನ್ನೈ ಸೂಪರ್‌ ಕಿಂಗ್ಸ್‌-55 ಕೋಟಿ ರೂ.

10. ಕೋಲ್ಕತ್ತಾ ನೈಟ್‌ ರೈಡರ್ಸ್‌-51 ಕೋಟಿ ರೂ.

ಇದನ್ನೂ ಓದಿ IPL 2025 Auction: ಐಪಿಎಲ್‌ ಹರಾಜಿನಲ್ಲಿ ರಾಜ್ಯದ 24 ಆಟಗಾರರು ಭಾಗಿ

ಪ್ರತಿ ತಂಡಕ್ಕೆ ಉಳಿದಿರುವ ಸ್ಲಾಟ್‌ಗಳು

ಚೆನ್ನೈ ಸೂಪರ್‌ ಕಿಂಗ್ಸ್‌: 20 ಆಟಗಾರರು

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 22 ಆಟಗಾರರು

ಸನ್‌ರೈಸರ್ಸ್‌ ಹೈದರಾಬಾದ್‌: 20 ಆಟಗಾರರು

ಮುಂಬೈ ಇಂಡಿಯನ್ಸ್‌: 20 ಆಟಗಾರರು

ದಿಲ್ಲಿ ಕ್ಯಾಪಿಟಲ್ಸ್‌: 21 ಆಟಗಾರರು

ರಾಜಸ್ಥಾನ್‌ ರಾಯಲ್ಸ್‌: 19 ಆಟಗಾರರು

ಪಂಜಾಬ್‌ ಕಿಂಗ್ಸ್‌: 23 ಆಟಗಾರರು

ಕೋಲ್ಕತ್ತಾ ನೈಟ್‌ ರೈಡರ್ಸ್‌:19 ಆಟಗಾರರು

ಗುಜರಾತ್‌ ಟೈಟಾನ್ಸ್‌: 20 ಆಟಗಾರರು

ಲಕ್ನೋ ಸೂಪರ್‌ ಜೈಂಟ್ಸ್‌: 20 ಆಟಗಾರರು