Sunday, 11th May 2025

INDvsBAN : ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಆಯ್ಕೆ, ಮಯಾಂಕ್‌ಗೆ ಮೊದಲ ಕರೆ

INDvsENG

ನವದೆಹಲಿ : ಪ್ರವಾಸಿ ಬಾಂಗ್ಲಾದೇಶ ವಿರುದ್ಧದ (INDvsBAN) ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಪ್ರಕಟಿಸಿದೆ. ಅಕ್ಟೋಬರ್ 6 ರಿಂದ ಗ್ವಾಲಿಯರ್‌ನಲ್ಲಿ ಪ್ರಾರಂಭವಾಗುವ ಮೂರು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಭಾರತವು ಬಾಂಗ್ಲಾದೇಶವನ್ನು ಎದುರಿಸಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ನಲ್ಲಿ ತನ್ನ ಉಜ್ವಲ ಮಾರಕ ವೇಗದ ಬೌಲಿಂಗ್ ಮೂಲಕ ಬ್ಯಾಟರ್‌ಗಳನ್ನು ಬೆಚ್ಚಿ ಬೀಳಿಸಿದ್ದ ವೇಗದ ಬೌಲರ್ ಮಯಾಂಕ್ ಯಾದವ್ ಟೀಮ್ ಇಂಡಿಯಾಗೆ ಮೊದಲ ಬಾರಿಗೆ ಕರೆ ಪಡೆದುಕೊಂಡಿದ್ದಾರೆ.

ಎಲ್‌ಎಸ್‌ಜಿ ತಂಡದ ಪರ ಆಡಿದ್ದ ಯಾದವ್ ನಾಲ್ಕು ಪಂದ್ಯಗಳಿಂದ 12.14 ಸರಾಸರಿಯಲ್ಲಿ ಏಳು ವಿಕೆಟ್‌ಗಳನ್ನು ಪಡೆದಿದ್ದರು. ಅವರ 6.98 ಬೌಲಿಂಗ್‌ ಎಕಾನಮಿ ಹೊಂದಿದ್ದರು. ಪಿಬಿಕೆಎಸ್ ವಿರುದ್ಧ ಲಕ್ನೋದ 21 ರನ್‌ಗಳ ಗೆಲುವಿನಲ್ಲಿ 22 ವರ್ಷದ ಆಟಗಾರ ನಾಲ್ಕು ಓವರ್‌ಗಳಲ್ಲಿ 3 ವಿಕೆಟ್‌ ಪಡೆದು 27 ರನ್‌ ಮಾತ್ರ ನೀಡುವ ಟಿ 20 ವೈಭವಕ್ಕೆ ತಮ್ಮ ಆಗಮನ ಘೋಷಿಸಿದ್ದರು. ಪರಿಣಾಮವಾಗಿ, ಯಾದವ್ ತಮ್ಮ ಐಪಿಎಲ್ ಚೊಚ್ಚಲ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಆರ್ಸಿಬಿ ವಿರುದ್ಧದ ತಮ್ಮ ಮುಂದಿನ ನೆಟ್ ಪಂದ್ಯದಲ್ಲಿ ಅವರು ನಾಲ್ಕು ಓವರ್‌ಗಳಲ್ಲಿ 14 ರನ್‌ಗಳಿಗೆ 3 ವಿಕೆಟ್ ಉರುಳಿಸಿದ್ದರು. ಅವರ ಬೌಲಿಂಗ್‌ನಿಂದಾಗಿ ಆರ್‌ಸಿಬಿ 28 ರನ್‌ಗಳಿಂದ ಎಲ್‌ಎಸ್‌ಜಿ ವಿರುದ್ಧ ಸೋತಿತ್ತು.

ಇದನ್ನೂ ಓದಿ: IPL 2025: ಬಿಸಿಸಿಐನಿಂದ ಐಪಿಎಲ್​ ರಿಟೇನ್ ನಿಯಮ ಬಹುತೇಕ ಅಂತಿಮ; ಯಾವ ತಂಡಕ್ಕೆ ಲಾಭ?

ಸೂರ್ಯಕುಮಾರ್ ಯಾದವ್ ತಂಡದ ನಾಯಕರಾಗಿದ್ದು, ಅಭಿಷೇಕ್‌ ಶರ್ಮಾ ಮತ್ತೆ ಅವಕಾಶ ಪಡೆದಿದ್ದಾರೆ. ಸಂಜು ಸ್ಯಾಮ್ಸನ್ ಮೊದಲ ಆಯ್ಕೆಯ ವಿಕೆಟ್‌ ಕೀಪರ್ ಆಗಿದ್ದು ಜಿತೇಶ್‌ ಶರ್ಮಾ ಎರಡನೇ ವಿಕೆಟ್‌ ಕೀಪರ್ ಆಗಿದ್ದಾರೆ. ಹಾಂಡ್ಯ, ಪರಾಗ್‌, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ ತಂಡದಲ್ಲಿದ್ದಾರೆ. ಸ್ಪಿನ್ನರ್ ಜಿತೇಶ್ ಶರ್ಮಾ ಭಾರತ ತಂಡಕ್ಕೆ ರೀ ಎಂಟ್ರಿ ಪಡೆದಿದ್ದಾರೆ.

ಬಾಂಗ್ಲಾದೇಶ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಅರ್ಷ್ದೀಪ್ ಸಿಂಗ್, ಹರ್ಷಿತ್ ರಾಣಾ, ಮಯಾಂಕ್ ಯಾದವ್.