Monday, 12th May 2025

Rahul Dravid : ಭಾರತದ ಕ್ರಿಕೆಟ್‌ ಪವರ್ ಆಗುವುದಕ್ಕೆ ಕಾರಣ ಏನೆಂದು ವಿವರಿಸಿದ ರಾಹುಲ್ ದ್ರಾವಿಡ್‌

Rahul Dravid

ನವದೆಹಲಿ: ಭಾರತದ ಕ್ರಿಕೆಟ್‌ನ ಪವರ್ ಹೌಸ್‌ ಎನಿಸಿಕೊಳ್ಳುವುದಕ್ಕೆ ಕಾರಣ ಏನೆಂಬುದನ್ನು ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ (Rahul Dravid) ವಿವರಿಸಿದ್ದಾರೆ. ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್‌ನ 50 ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ದ್ರಾವಿಡ್, ಪ್ರಸ್ತುತ ವ್ಯವಸ್ಥೆಯು ವಿಶ್ವದ “ಅತ್ಯಂತ ಶಕ್ತಿಶಾಲಿ” ಶಕ್ತಿಯಾಗಿ ಬೆಳೆಯುವಂತೆ ಮಾಡಿದೆ ಎಂದು ಹೇಳಿದ್ದಾರೆ. ಮೊದಲು ನಗರ ಕೇಂದ್ರಿತವಾಗಿದ್ದ ಕ್ರಿಕೆಟ್ ವ್ಯವಸ್ಥೆ ಈಗ ಹಳ್ಳಿಗಳಿಗೂ ವ್ಯಾಪಿಸಿದೆ. ಎಲ್ಲೆಡೆಯಿಂದ ಪ್ರತಿಭೆಗಳು ಬರುತ್ತಿವೆ. ಹೀಗಾಗಿ ಭಾರತ ಶಕ್ತಿಶಾಲಿ ದೇಶವಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದ್ದಾರೆ.

ಭಾರತದ ಟಿ 20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದ್ರಾವಿಡ್ “ಇಂದು ಭಾರತೀಯ ಕ್ರಿಕೆಟ್ ಅನ್ನು ನೋಡಿದರೆ ಅತ್ಯಂತ ಪ್ರಬಲವಾಗಿದೆ. ಅತ್ಯಂತ ಶಕ್ತಿಯುತವಾಗಿದೆ. ಇದಕ್ಕೆ ಒಂದು ದೊಡ್ಡ ಕಾರಣವೆಂದರೆ ಪ್ರತಿಭೆಗಳು ಎಲ್ಲೆಡೆಯಿಂದ, ದೇಶದಾದ್ಯಂತದಿಂದ ಬರುತ್ತಿರುವುದು”ಎಂದು ದ್ರಾವಿಡ್ ಹೇಳಿದರು.

ಜಿ.ಆರ್.ವಿಶ್ವನಾಥ್ ಅವರಂತಹ ಹಿಂದಿನ ತಲೆಮಾರಿನ ಕ್ರಿಕೆಟಿಗರು ಅಥವಾ ಅವರ ಆರಂಭಿಕ ದಿನಗಳಲ್ಲಿ ಕ್ರಿಕೆಟ್‌f ಪ್ರತಿಭೆಗಳು ಮುಖ್ಯವಾಗಿ ದೊಡ್ಡ ನಗರಗಳಿಂದ ಬರುತ್ತಿರುವುದನ್ನು ಗಮನಿಸಿದ್ದರು. ಹಿಂದೆ ಆಟಗಾರರು ಅವಕಾಶಗಳಿಗಾಗಿ ನಗರಕ್ಕೆ ಸ್ಥಳಾಂತರಗೊಳ್ಳುವ ಅಗತ್ಯವಿತ್ತು. ಆದರೆ ಇಂದು ಕ್ರಿಕೆಟ್ ದೇಶದ ಪ್ರತಿಯೊಂದು ಭಾಗಕ್ಕೂ ತಲುಪಿದೆ ಎಂದು ಹೇಳಿದರು.

ದೇಶೀಯ ಕ್ರಿಕೆಟ್ ಬಗ್ಗೆ ಪ್ರತಿಕ್ರಿಯಿಸಿದ ದ್ರಾವಿಡ್, “ನೀವು ರಣಜಿ ಟ್ರೋಫಿಯ ಗುಣಮಟ್ಟವನ್ನು ನೋಡಿದರೆ ಗೊತ್ತಾಗುತ್ತದೆ. ಇಂದು ದಕ್ಷಿಣ ವಲಯದಲ್ಲಿ ಆರಾಮವಾಗಿ ಸೋಲಿಸುತ್ತೇವೆ ಎಂದು ಹೇಳಲು ಯಾವುದೇ ತಂಡವಿಲ್ಲ. ದ್ರಾವಿಡ್ ಅವರ ಪ್ರಕಾರ, ಬೆಳೆಯುತ್ತಿರುವ ಸ್ಪರ್ಧಾತ್ಮಕತೆ ಮತ್ತು ಪ್ರತಿಭೆಯ ಸಮಾನ ವಿತರಣೆಗೆ ಈ ಬದಲಾವಣೆಗೆ ಕಾರಣ ಎಂದು ಹೇಳಿದರು.

ಇದನ್ನೂ ಓದಿ: Paris Paralympics : ಪ್ಯಾರಾಲಿಂಪಿಕ್ಸ್‌ನಲ್ಲಿ 29 ಪದಕಗಳನ್ನು ಬಾಚಿಕೊಂಡು ಐತಿಹಾಸಿಕ ಸಾಧನೆ ಮಾಡಿದ ಭಾರತದ ಅಥ್ಲೀಟ್‌ಗಳು

ದೇಶಾದ್ಯಂತ ಯುವ ಕ್ರಿಕೆಟಿಗರಿಗೆ ಕ್ರೀಡೆಯನ್ನು ಪ್ರವೇಶಿಸಲು ಕ್ಲಬ್ ಕ್ರಿಕೆಟ್ ಮೂಲಸೌಕರ್ಯವೇ ಕಾರಣ ಎಂದು ಹೇಳಿದರು. ಉತ್ತಮ ಮೂಲಸೌಕರ್ಯಗಳು ಆಯ್ದ ನಗರಗಳಿಗೆ ಸೀಮಿತವಾಗಿಲ್ಲ ಎಂಬುದೇ ಇದರ ಯಶಸ್ವಿನ ಗುಟ್ಟು ಎಂದು ಹೇಳಿದರು.

“ಅಭ್ಯಾಸದ ನಂತರ, ಎಚ್ಎಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ನಮಗೆ ಎರಡು ಮೊಟ್ಟೆಗಳು ಮತ್ತು ಒಂದು ಸಣ್ಣ ಲೋಟ ಹಾಲನ್ನು ನೀಡುತ್ತಿದ್ದೆ. ನಾನು ಯಾವಾಗಲೂ ಆ ಲೋಟ ಹಾಲು ಮತ್ತು ಆ ಮೊಟ್ಟೆಗಳಿಗಾಗಿ ಅಲ್ಲಿಗೆ ಹೋಗುತ್ತಿದ್ದೆ “ಎಂದು ದ್ರಾವಿಡ್ ಹೇಳಿದರು.

Leave a Reply

Your email address will not be published. Required fields are marked *