ನವದೆಹಲಿ: ರೋಹಿತ್ ಶರ್ಮಾ ಅವರು ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಇನ್ನೂ ಸ್ಪಷ್ಟವಾಗಿ ಹೇಳದಿದ್ದರೂ ಸಹ ಟೆಸ್ಟ್ ನಾಯಕತ್ವ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಹೆಚ್ಚುತ್ತಿದೆ. ಪರ್ತ್ ಟೆಸ್ಟ್ನಲ್ಲಿ (IND vs AUS) ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರೂ, ಭಾರತೀಯ ಡ್ರೆಸ್ಸಿಂಗ್ ರೂಮ್ನಲ್ಲಿ ಹಲವು ಆಟಗಾರರು ನಾಯಕತ್ವದ ಪಾತ್ರವನ್ನು ನಿರ್ವಹಿಸಲು ಉತ್ಸುಕರಾಗಿದ್ದರು ಎಂದು ವರದಿಯಾಗಿದೆ.
ಭಾರತ ತಂಡ 2023-25ರ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯದಿದ್ದರೆ ಆಸ್ಟ್ರೇಲಿಯಾ ಪ್ರವಾಸದ ನಂತರ ರೋಹಿತ್ ಶರ್ಮಾ ಅವರ ಟೆಸ್ಟ್ ವೃತ್ತಿಜೀವನವು ಅಂತ್ಯಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಆದರೆ ಭಾರತ ಟೆಸ್ಟ್ ತಂಡ ನಾಯಕತ್ವದ ರೇಸ್ನಲ್ಲಿ ಜಸ್ಪ್ರೀತ್ ಬುಮ್ರಾ ಮಾತ್ರವಿಲ್ಲ. ಇನ್ನೂ ಹಲವು ಹಿರಿಯ ಆಟಗಾರರು ಕೂಡ ಇದ್ದಾರೆಂದು ವರದಿಯಾಗಿದೆ.
ಆಸ್ಟ್ರೇಲಿಯಾದಲ್ಲಿ ಭಾರತದ ಕಳಪೆ ಪ್ರದರ್ಶನದ ನಡುವೆ ಹಿರಿಯ ಆಟಗಾರರೊಬ್ಬರು ‘ಮಿಸ್ಟರ್ ಫಿಕ್ಸ್-ಇಟ್’ ಎಂದು ಬಿಂಬಿಸುತ್ತಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಭಾರತ ಟೆಸ್ಟ್ ತಂಡದ ನಾಯಕತ್ವಕ್ಕಾಗಿ ಮಧ್ಯಂತರ ಆಯ್ಕೆಯಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳಲು ಸಿದ್ಧನಾಗಿದ್ದಾನೆಂದು ಹಿರಿಯ ಆಟಗಾರ ಬೇಡಿಕೆ ಇಟ್ಟಿದ್ದಾರೆಂದು ಹೇಳಲಾಗುತ್ತಿದೆ. ಯುವ ಆಟಗಾರರ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು, ವರದಿಯಲ್ಲಿ ಈ ಹಿರಿಯ ಆಟಗಾರ ಯಾರೆಂದು ಬಹಿರಂಗವಾಗಿಲ್ಲ.
IND vs AUS: ಸಿಡ್ನಿ ಟೆಸ್ಟ್ನಲ್ಲಿ ಗಾಯಾಳು ಮಿಚೆಲ್ ಸ್ಟಾರ್ಕ್ ಆಡ್ತಾರಾ? ಅಲೆಕ್ಸ್ ಕೇರಿ ಹೇಳಿದ್ದಿದು!
ಯಾವ ಆಟಗಾರ ಹಂಗಾಮಿ ನಾಯಕನಾಗಲು ಬಯಸುತ್ತಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಆ ಆಟಗಾರ ತಂಡದ ಹಿರಿಯ ಆಟಗಾರರಲ್ಲಿ ಒಬ್ಬರು ಎಂಬುದು ಖಚಿತವಾಗಿದೆ. ಆದರೆ, ತಂಡದಲ್ಲಿ ಹಿರಿಯರ ಸಂಖ್ಯೆ ತೀರಾ ಕಡಿಮೆ. ರೋಹಿತ್ ಶರ್ಮಾ ಈಗಾಗಲೇ ನಾಯಕರಾಗಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಮರಳುವುದು ಅಸಾಧ್ಯದ ಮಾತು. ಇವರನ್ನು ಹೊರತುಪಡಿಸಿ, ಹಿರಿಯ ಆಟಗಾರರಲ್ಲಿ ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಮಾತ್ರ ಇದ್ದಾರೆ.
ಭಾರತ ಟೆಸ್ಟ್ ತಂಡದ ನಾಯಕತ್ವದ ರೇಸ್ನಲ್ಲಿ ಜಸ್ಪ್ರೀತ್ ಬುಮ್ರಾ
ದೀರ್ಘಾವಧಿಯ ನಿಟ್ಟಿನಲ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ಜಸ್ಪ್ರೀತ್ ಬುಮ್ರಾ ಅತ್ಯುತ್ತಮ ಆಯ್ಕೆಯಾಗಿದೆ. ವೇಗದ ಬೌಲರ್ ಪರ್ತ್ನಲ್ಲಿ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದರು ಹಾಗೂ ಗೆಲ್ಲಿಸಿದ್ದರು. ಜಸ್ಪ್ರೀತ್ ಬುಮ್ರಾ ಭಾರತದ ಮುಂದಿನ ಟೆಸ್ಟ್ ನಾಯಕನಾದರೆ, ಕೆಎಲ್ ರಾಹುಲ್ ಅಥವಾ ರಿಷಬ್ ಪಂತ್ ಕೂಡ ತಂಡದ ಉಪನಾಯಕರಾಗಬಹುದು.
1-0 ಹಿನ್ನಡೆ ಅನುಭವಿಸಿರುವ ಭಾರತ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯಲ್ಲಿ ನಾಲ್ಕು ಪಂದ್ಯಗಳು ಮುಗಿದಿವೆ. ಇದರಲ್ಲಿ ಭಾರತ ತಂಡ ಮೊದಲನೇ ಟೆಸ್ಟ್ ಗೆದ್ದಿದ್ದರೆ, ಮೂರು ಮತ್ತು ನಾಲ್ಕನೇ ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು. ಇದಕ್ಕೂ ಮುನ್ನ ನಡೆದಿದ್ದ ಎರಡನೇ ಟೆಸ್ಟ್ ಡ್ರಾನಲ್ಲಿ ಅಂತ್ಯ ಕಂಡಿತ್ತು. ಸದ್ಯ ಭಾರತ ತಂಡ ಸರಣಿಯಲ್ಲಿ 1-2 ಹಿನ್ನಡೆಯನ್ನು ಅನುಭವಿಸಿದೆ. ಐದನೇ ಟೆಸ್ಟ್ ಜನವರಿ 3 ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಆರಂಭವಾಗಲಿದೆ.
ಈ ಸುದ್ದಿಯನ್ನು ಓದಿ: Gautam Gambhir: ನನಗೂ ಸಾಕಾಯಿತು… ಡ್ರೆಸ್ಸಿಂಗ್ ರೂಮ್ನಲ್ಲಿ ಕೋಚ್ ಗಂಭೀರ್ ರೋಷಾವೇಶ