ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಸರ್ಫರಾಝ್ ಖಾನ್ (Sarfaraz Khan) ಅವಕಾಶ ನೀಡದ ಬಗ್ಗೆ ಭಾರತೀಯ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ನಿರೂಪಕ ಸಂಜಯ್ ಮಾಂಜ್ರೇಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಟೆಸ್ಟ್ ಸರಣಿಯಲ್ಲಿ ಸರ್ಫರಾಝ್ ಖಾನ್ ಬದಲು ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಸ್ಥಾನ ನೀಡಲಾಗಿತ್ತು. ಆದರೆ, ಕೆಎಲ್ ರಾಹುಲ್ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದರು.
ದೇಶಿ ಕ್ರಿಕೆಟ್‌ನಲ್ಲಿ ಸರ್ಫರಾಝ್ ಖಾನ್ ರನ್ ಹೊಳೆ ಹರಿಸಿದ್ದರು. ಆ ಮೂಲಕ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆದಿದ್ದರು. ಅದರಂತೆ ಇಂಗ್ಲೆಂಡ್ ವಿರುದ್ದ 2024ರ ಆರಂಭದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಸರ್ಫರಾಝ್ ಖಾನ್ ಅವರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಅವರು ಈ ಸರಣಿಯಲ್ಲಿ ಆಡಿದ್ದ ಟೆಸ್ಟ್ ಪಂದ್ಯಗಳಿಂದ ಅವರು ಮೂರು ಅರ್ಧಶತಕಗಳನ್ನು ಗಳಿಸಿದ್ದರು.
ಇಎಸ್‌ಪಿಎನ್ ಕ್ರಿಕ್‌ಇನ್ಪೋ ಜೊತೆ ಮಾತನಾಡಿದ ಸಂಜಯ್ ಮಾಂಜ್ರೇಕರ್, “ಸರ್ಫರಾಝ್ ಖಾನ್ ಅವರ ಬದಲು ಕೆಎಲ್ ರಾಹುಲ್‌ಗೆ ನೇರವಾಗಿ ಅವಕಾಶ ನೀಡಬಾರದೆಂದು ನಾನು ಮೊದಲನೇ ಟೆಸ್ಟ್‌ಗೂ ಮುನ್ನ ನೇರವಾಗಿ ಹೇಳಿದ್ದೆ. ಅಭ್ಯಾಸ ಪಂದ್ಯದಲ್ಲಿ ಅಭಿಮನ್ಯು ಈಶ್ವರನ್ ಅವರ ಆಟವನ್ನು ನೋಡಿದ ಜನರು, ಇವರು ಟೆಸ್ಟ್ ಸರಣಿಯಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ ಎಂದು ಭಾವಿಸಿದ್ದರು. ಆದರೆ, ಕ್ರಿಕೆಟ್ ಯಾವಾಗಲೂ ನಿಮಗೆ ಅಚ್ಚರಿಯನ್ನು ಮೂಡಿಸುತ್ತದೆ ಹಾಗಾಗಿ ಈ ರೀತಿ ಸಂಗತಿಗಳನ್ನು ನೋಡಬಾರದು,” ಎಂದು ತಿಳಿಸಿದ್ದಾರೆ.
Yuvraj Singh: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬಗ್ಗೆ ಯುವರಾಜ್ ಸಿಂಗ್ ದೊಡ್ಡ ಹೇಳಿಕೆ
ಸರ್ಫರಾಝ್ ಖಾನ್‌ಗೆ ಸಂಜಯ್ ಮಾಂಜ್ರೇಕರ್ ಬೆಂಬಲ
ಕೆಎಲ್ ರಾಹುಲ್‌ಗೆ ಅವಕಾಶ ನೀಡುವ ಸಲುವಾಗಿ ಸರ್ಫರಾಝ್ ಖಾನ್ ಅವರನ್ನು ಕೈ ಬಿಡುವುದಕ್ಕೂ ಮುನ್ನ ಟೀಮ್ ಮ್ಯಾನೇಜ್‌ಮೆಂಟ್ ಇನ್ನಷ್ಟು ಕಾಯಬೇಕಾಗಿತ್ತು ಎಂದು ಸಂಜಯ್ ಮಾಂಜ್ರೇಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸರ್ಫರಾಝ್ ಖಾನ್ ಅದ್ಬುತ ದಾಖಲೆಯನ್ನು ಹೊಂದಿದ್ದಾರೆ. ಅವರು ಮೂರು ಅರ್ಧಶತಕಗಳು ಹಾಗೂ 150 ರನ್‌ಗಳನ್ನು ಗಳಿಸಿದ್ದಾರೆ. ಆದರೆ, ಮುಂದಿನ ಪಂದ್ಯದಲ್ಲಿಯೇ ಅವರನ್ನು ಕೂರಿಸಲಾಗಿತ್ತು. ಇದೀಗ ಅವರನ್ನು ಸಂಪೂರ್ಣವಾಗಿ ಹೊರಗಿಡಲಾಗಿದೆ. ಇದು ಸರಿಯಾದ ಹಾದಿ ಅಲ್ಲ,” ಎಂದು ಸಂಜಯ್ ಮಾಂಜ್ರೇಕರ್ ತಿಳಿಸಿದ್ದಾರೆ.
“ಸರ್ಫರಾಜ್ ಖಾನ್ ಈ ರೀತಿಯ ಪಿಚ್‌ಗಳಲ್ಲಿ ಯಶಸ್ವಿಯಾಗುವುದಿಲ್ಲ ಎಂದು ನೀವು ಭಾವಿಸಿದರೂ, ಅವರು ರನ್ ಗಳಿಸುವ ಮಾರ್ಗವನ್ನು ಕಂಡುಕೊಂಡಿದ್ದರೆ, ಥರ್ಡ್ ಮ್ಯಾನ್ ಕಡೆ ಅವರ ಪ್ರಮುಖ ಸ್ಕೋರಿಂಗ್ ಪ್ರದೇಶವಾಗಿದೆ? ಅಂದರೆ, ಅವರು ಇಂಗ್ಲೆಂಡ್ ವಿರುದ್ಧ ಹೇಗೆ ಆಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ನಾವು ದೇವರನ್ನು ಹೆಚ್ಚು ನಂಬುವ ಬದಲು ಆಡೋಣ. ಅಗ್ರ ದರ್ಜೆಯಲ್ಲಿ ಅವರು ಹೇಗೆ ರನ್ ಗಳಿಸುತ್ತಾರೆಂದು ನಾವು ಕುತೂಹಲದಿಂದ ನೋಡಬೇಕಾದ ಅಗತ್ಯವಿದೆ,” ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ: Mohammed Shami: ʻಈ ವೇಗಿ ಆಡಿದ್ದರೆ ಭಾರತದ ಕಥೆ ಬೇರೆ ರೀತಿ ಇರುತ್ತಿತ್ತುʼ-ರವಿ ಶಾಸ್ತ್ರಿ!