ಅಡಿಲೇಡ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಹಾಗೂ ಪಿಂಕ್ ಬಾಲ್ ಟೆಸ್ಟ್ (IND vs AUS) ಪಂದ್ಯದಲ್ಲಿ ಮಾತಿನ ಚಕಮಕಿ ನಡೆಸಿದ್ದ ಪ್ರವಾಸಿ ತಂಡದ ವೇಗಿ ಮೊಹಮ್ಮದ್ ಶಮಿ ಹಾಗೂ ಆತಥೇಯ ತಂಡದ ಟ್ರಾವಿಸ್ ಹೆಡ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಛೀಮಾರಿ ಹಾಕಿದೆ. ಟ್ರಾವಿಸ್ ಹೆಡ್ ಬಳಿ ಆಕ್ರಮಣಕಾರಿಯಾಗಿ ವರ್ತಿಸಿದ್ದ ಸಿರಾಜ್ಗೆ ಪಂದ್ಯದ ಸಂಭಾವನೆಯಲ್ಲಿ ಶೇ.20 ರಷ್ಟು ದಂಡವನ್ನು ವಿಧಿಸಲಾಗಿದೆ, ಆದರೆ ದಂಡದಿಂದ ತಪ್ಪಿಸಿಕೊಂಡರೂ ಟ್ರಾವಿಸ್ ಹೆಡ್ಗೆ ಡೀಮೆರಿಟ್ ಅಂಕವನ್ನು ನೀಡಲಾಗಿದೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಐಸಿಸಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದ ಮೊಹಮ್ಮದ್ ಸಿರಾಜ್ ಮತ್ತು ಟ್ರಾವಿಸ್ ಹೆಡ್ಗೆ ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ.
“ಆಟಗಾರರು, ಸಹಾಯಕ ಸಿಬ್ಬಂದಿಗೆ ಸಂಬಂಧಿಸಿದಂತೆ ಅನುಚಿತ ಭಾಷೆ ಅಥವಾ ಆಕ್ರಮಣಕಾರಿ ವರ್ತನೆ ತೋರುವ ಮೂಲಕ ಐಸಿಸಿಯ ನಿಯಮ 2.5 ಅನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮೊಹಮ್ಮದ್ ಸಿರಾಜ್ಗೆ ಪಂದ್ಯದ ಸಂಭಾವನೆಯಲ್ಲಿ ಶೇ. 20 ರಷ್ಟು ದಂಡವನ್ನು ವಿಧಿಸಲಾಗಿದೆ,” ಎಂದು ಐಸಿಸಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
Travis Head: "I swear I said well bowled."
— Sameer Allana (@HitmanCricket) December 8, 2024
Mohammed Siraj: "I also said well batted."
Travis Head: "Cool."pic.twitter.com/ODqRhHo2Eh
“ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಟಗಾರರು, ಸಹಾಯಕ ಸಿಬ್ಬಂದಿ, ಅಂಪೈರ್ಗಳಿಗೆ ಸಂಬಂಧಿಸಿದಂತೆ ನಿಂದನೆ, ಅನುಚಿತ ವರ್ತನೆ ತೋರುವ ಐಸಿಸಿ 2.13ರ ನಿಯಮವನ್ನು ಟ್ರಾವಿಸ್ ಹೆಡ್ ಉಲ್ಲಂಘಿಸಿದ್ದಾರೆ,” ಎಂದು ಐಸಿಸಿ ತಿಳಿಸಿದೆ.
“ಮೊಹಮ್ಮದ್ ಸಿರಾಜ್ ಮತ್ತು ಟ್ರಾವಿಸ್ ಹೆಡ್ ಅವರ ಪಾಲಿಗೆ ಕಳೆದ 24 ತಿಂಗಳುಗಳಲ್ಲಿ ಮೊಟ್ಟ ಮೊದಲ ಪ್ರಮಾದ ಇದಾಗಿದೆ. ಈ ಇಬ್ಬರೂ ಆಟಗಾರರ ಶಿಸ್ತಿನ ದಾಖಲೆಯಲ್ಲಿ ತಲಾ ಎರಡು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ,” ಎಂದು ಐಸಿಸಿ ತನ್ನ ಅಧಿಕೃತ ಹೇಳಿಕೆಯಲ್ಲಿ ಹೇಳಿದೆ.
ಮಾತಿನ ಚಕಮಕಿ ನಡೆಸಿದ್ದ ಸಿರಾಜ್ ಹೆಡ್
ಈ ಪಂದ್ಯದ ಎರಡನೇ ದಿನ ಮೊಹಮ್ಮದ್ ಸಿರಾಜ್ ಹಾಗೂ ಟ್ರಾವಿಸ್ ಹೆಡ್ ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಟ್ರಾವಿಸ್ ಹೆಡ್ 141 ಎಸೆತಗಳಲ್ಲಿ 140 ರನ್ ಸಿಡಿಸಿ ಬ್ಯಾಟಿಂಗ್ ಮುಂದುವರಿಸಿದ್ದರು. ಆದರೆ, 81ನೇ ಓವರ್ನಲ್ಲಿ ಮೊಹಮ್ಮದ್ ಸಿರಾಜ್ ಅವರ ಯಾರ್ಕರ್ ಎಸೆತದಲ್ಲಿ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್ ಆಗಿದ್ದರು. ಈ ವೇಳೆ ಟ್ರಾವಿಸ್ ಹೆಡ್ ಎದುರು ಟೀಮ್ ಇಂಡಿಯಾ ವೇಗಿ ಆಕ್ರಮಣಕಾರಿಯಾಗಿ ವರ್ತಿಸಿದ್ದರು. ಈ ವೇಳೆ ಸಿರಾಜ್ ಹಾಗೂ ಹೆಡ್ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
Abuse between Travis Head and Mohammed Siraj 🔥🔥
— आदित्य यादव (@YadavAditya01) December 7, 2024
Indian cricket team should also respond to Travis Head's gully in the second innings.#INDvsAUS#INDvAUS pic.twitter.com/1TWZNCwjJx
ಟ್ರಾವಿಸ್ ಹೆಡ್ ಮಾತು ಸುಳ್ಳು: ಸಿರಾಜ್
“ಟ್ರಾವಿಸ್ ಹೆಡ್ಗೆ ಬೌಲ್ ಮಾಡುವುದನ್ನು ಆನಂದಿಸಿದ್ದೇನೆ. ಅವರು ತುಂಬಾ ಚೆನ್ನಾಗಿ ಬ್ಯಾಟ್ ಮಾಡುತ್ತಿದ್ದರಿಂದ ನಮ್ಮ ನಡುವಣ ಸ್ಪರ್ಧೆ ಅತ್ಯುತ್ತಮವಾಗಿತ್ತು. ಆದರೆ, ಅವರು ನನ್ನ ಒಳ್ಳೆಯ ಎಸೆತಕ್ಕೆ ಸಿಕ್ಸರ್ ಹೊಡೆದಾಗ, ನನಗೆ ಬೇಸರವಾಯಿತು. ಇದು ನನ್ನ ಶಕ್ತಿಯನ್ನು ಹೆಚ್ಚಿಸಿತು. ಅವರನ್ನು ಔಟ್ ಮಾಡಿದ ಬಳಿಕ ಸಂಭ್ರಮಿಸಿದೆ. ನಂತರ ಅವರು ನನ್ನನ್ನು ನಿಂದಿಸಿದರು. ಟಿವಿಯಲ್ಲಿಯೂ ನೀವು ಇದನ್ನು ನೋಡಬಹುದು. ಆರಂಭದಲ್ಲಿ ನನ್ನದು ಸಂಭ್ರಮವಾಗಿತ್ತು ಹಾಗೂ ಅವರಿಗೆ ನಾನು ಏನನ್ನೂ ಹೇಳಲಿಲ್ಲ. ಆದರೆ, ಸುದ್ದಿಗೋಷ್ಠಿಯಲ್ಲಿ ಅವರು ತಪ್ಪಾಗಿ ಹೇಳಿದ್ದಾರೆ. ಅವರ ಮಾತು ಸುಳ್ಳು. ಬೌಲಿಂಗ್ ಚೆನ್ನಾಗಿ ಮಾಡಿದ್ದೇನೆಂದು ಅವರು ಹೇಳಿಯೇ ಇಲ್ಲ,” ಎಂದು ಮೊಹಮ್ಮದ್ ಸಿರಾಜ್ ಸ್ಪಷ್ಟನೆ ನೀಡಿದ್ದರು.
ಈ ಸುದ್ದಿಯನ್ನು ಓದಿ: IND vs AUS: ಮೊಹಮ್ಮದ್ ಸಿರಾಜ್-ಟ್ರಾವಿಸ್ ಹೆಡ್ ನಡುವೆ ಮಾತಿನ ಚಕಮಕಿ! ವಿಡಿಯೊ