ಅಡಿಲೇಡ್: ಪಿಂಕ್ ಬಾಲ್ ಟೆಸ್ಟ್ ಪಂದ್ಯದ (IND vs AUS) ಪ್ರಥಮ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ಆಸ್ಟ್ರೇಲಿಯಾ ತಂಡದ ಟ್ರಾವಿಸ್ ಹೆಡ್ ಅವರ ವಿರುದ್ಧ ಭಾರತ ತಂಡದ ಬೌಲರ್‌ಗಳು ರೂಪಿಸಿದ್ದ ರಣತಂತ್ರದ ಬಗ್ಗೆ ಬ್ಯಾಟಿಂಗ್ ದಿಗ್ಗಜ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗೆ ಒಂದೇ ಒಂದು ಶಾರ್ಟ್ ಎಸೆತವನ್ನು ಪ್ರಯತ್ನಿಸಲಿಲ್ಲ ಎಂದು ಮಾಜಿ ಆಟಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ ತಂಡದ ಪಾಲಿಗೆ ಟ್ರಾವಿಸ್ ಹೆಡ್ ವಿಲನ್ ಆಗಿದ್ದಾರೆ. 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಹಾಗೂ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಭಾರತ ತಂಡಕ್ಕೆ ಟ್ರಾವಿಸ್ ಹೆಡ್ ಅಪಾಯಕಾರಿಯಾಗಿದ್ದರು. ಬೇರೆ ಎಲ್ಲಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದ್ದ ಟೀಮ್ ಇಂಡಿಯಾ ಹೆಡ್ ಅವರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇದರಿಂದ ಎರಡು ಐಸಿಸಿ ಟ್ರೋಫಿಗಳನ್ನು ಗೆಲ್ಲುವಲ್ಲಿ ಭಾರತ ವಿಫಲವಾಗಿತ್ತು.
ಇದೀಗ ಅಡಿಲೇಡ್ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿಯೂ ಭಾರತ ತಂಡ ಇತರೆ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿತ್ತು. ಆದರೆ, ಟ್ರಾವಿಸ್ ಹೆಡ್‌ರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅವರು 141 ಎಸೆತಗಳಲ್ಲಿ 140 ರನ್‌ಗಳನ್ನು ಕಲೆ ಹಾಕಿ ಆಸ್ಟ್ರೇಲಿಯಾ ತಂಡ 337 ರನ್‌ಗಳನ್ನು ದಾಖಲಿಸಲು ನೆರೆವು ನೀಡಿದರು. ಸ್ಟಾರ್ ಸ್ಪೋಟ್ಸ್‌ನಲ್ಲಿ ಮಾತನಾಡಿದ ಸುನೀಲ್ ಗವಾಸ್ಕರ್, ಟ್ರಾವಿಸ್ ಹೆಡ್‌ಗೆ ಭಾರತೀಯ ಬೌಲರ್‌ಗಳು ರೂಪಿಸಿದ್ದ ಬೌಲಿಂಗ್ ಗೇಮ್ ಪ್ಲ್ಯಾನ್ ಸರಿ ಇಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಟ್ರಾವಿಸ್ ಹೆಡ್‌ಗೆ ಶಾರ್ಟ್ ಎಸೆತಗಳನ್ನೇ ಹಾಕಿಲ್ಲ: ಗವಾಸ್ಕರ್
“ಟ್ರಾವಿಸ್ ಹೆಡ್ ಅವರನ್ನು ಶಾರ್ಟ್ ಎಸೆತಗಳಿಂದ ಪರೀಕ್ಷೆ ಮಾಡಬೇಕೆಂದು ನಾವು ಸದಾ ಹೇಳುತ್ತಿರುತ್ತೇವೆ. ಆದರೆ, ಭಾರತ ತಂಡ ಇದನ್ನು ಎಂದಿಗೂ ಮಾಡುವುದಿಲ್ಲ. ಅವರು ಅಪರೂಪಕ್ಕೆ ಇದನ್ನು ಪ್ರಯತ್ನಿಸುತ್ತಾರೆ. ಇದು ದಿಗ್ಭ್ರಮೆಗೊಳಿಸುವಂತಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಅನ್ನು ನೀವು ನೆನೆಪು ಮಾಡಿಕೊಳ್ಳಬಹುದು, ಅಲ್ಲಿ ಬೌನ್ಸ್ ಇದ್ದಿದ್ದರಿಂದ ಅವರು ಕೆಲವು ಸಲ ಆರಾಮದಾಯಕವಲ್ಲದ ರೀತಿ ಕಂಡಿದ್ದರು,” ಎಂದು ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.
“ಅದೇ ರೀತಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿಯೂ ಅವರನ್ನು ಭಾರತೀಯ ಬೌಲರ್‌ಗಳು ಶಾರ್ಟ್ ಬಾಲ್‌ಗಳ ಮೂಲಕ ಪರೀಕ್ಷೆ ಮಾಡಿರಲಿಲ್ಲ. ಇಲ್ಲಿ ಕೂಡ ಅಷ್ಟೇ ಅಪರೂಪಕ್ಕೆ ಬೌನ್ಸರ್ ಮೂಲಕ ಅವರನ್ನು ಟೆಸ್ಟ್ ಮಾಡಲಾಗುತ್ತಿತ್ತು. ಅಡಿಲೇಡ್ ಪಿಚ್‌ನಲ್ಲಿ ನೀವು ಎಲ್ಲಿ ಪಿಚ್ ಮಾಡಿದರೂ ಹೆಚ್ಚಿನ ಚಲನೆಯನ್ನು ಹೊಂದಿರುವುದಿಲ್ಲ. ಹಾಗಾಗಿ ನೀವು ಬೌನ್ಸರ್ ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ಒತ್ತಡ ಹೇರಬೇಕು,” ಎಂದು ಮಾಜಿ ನಾಯಕ ತಿಳಿಸಿದ್ದಾರೆ.
“ಅರ್ಧ ಪಿಚ್‌ಗೆ ಚೆಂಡನ್ನು ಹಾಕಿ ಅವರನ್ನು ಔಟ್ ಮಾಡಬಹುದು ಅಥವಾ ಅವರ ಬ್ಯಾಟ್‌ನಿಂದ ಎಡ್ಜ್ ಮಾಡಿಸಿ ಬೇಕಾದರೂ ಔಟ್ ಮಾಡಬಹುದು. ಆ ಮೂಲಕ ನೀವು ಅವರನ್ನು ಒತ್ತಡಕ್ಕೆ ನೂಕಬಹುದು. ಆದರೆ ಭಾರತ ತಂಡದ ಬೌಲರ್‌ಗಳು ಟ್ರಾವಿಸ್ ಹೆಡ್‌ಗೆ ಒತ್ತಡ ಹಾಕಲು ಪ್ರಯತ್ನ ನಡೆಸಿಲ್ಲ,” ಎಂದು ಸುನೀಲ್ ಗವಾಸ್ಕರ್ ಬೇಸರ ಹೊರಹಾಕಿದ್ದಾರೆ.
ಈ ಸುದ್ದಿಯನ್ನು ಓದಿ: IND vs AUS 2nd Test: ಟ್ರಾವಿಸ್ ಹೆಡ್ ಶತಕ, ಎರಡನೇ ದಿನವೂ ಭಾರತಕ್ಕೆ ಹಿನ್ನಡೆ!