Sunday, 18th May 2025

IND vs AUS: ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಎದುರಾಗಿರುವ ಕಠಿಣ ಸವಾಲು ಬಹಿರಂಗಪಡಿಸಿದ ಇರ್ಫಾನ್‌ ಪಠಾಣ್‌!

Irfan Pathan explains challenges batters could face in pink-ball Test

ನವದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಹಾಗೂ ಪಿಂಕ್‌ ಬಾಲ್‌ ಟೆಸ್ಟ್‌ (IND vs AUS) ಪಂದ್ಯ ಶುಕ್ರವಾರ ಅಡಿಲೇಡ್‌ ಓವಲ್‌ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಡೇ-ನೈಟ್‌ ಟೆಸ್ಟ್‌ ಪಂದ್ಯಕ್ಕಾಗಿ ಉಭಯ ತಂಡಗಳು ಕಠಿಣ ತಾಲೀಮು ನಡೆಸುತ್ತಿವೆ. ಇದರ ನಡುವೆ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡಕ್ಕೆ ಎದುರಾಗಿರುವ ಕಠಿಣ ಸವಾಲೇನೆಂದು ಟೀಮ್‌ ಇಂಡಿಯಾ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಅವರು ಬಹಿರಂಗಪಡಿಸಿದ್ದಾರೆ.

ಪಿಂಕ್‌ ಬಾಲ್‌ ಹೆಚ್ಚಿನ ಸ್ವಿಂಗ್‌ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಇರ್ಫಾನ್‌ ಪಠಾಣ್‌, ದೀರ್ಘಾವಧಿ ಪಿಂಕ್‌ ಬಾಲ್‌ ಸ್ವಿಂಗ್‌ ಆಗಲಿದೆ. ಕಂಡೀಷನ್ಸ್‌ ತುಂಬಾ ತೇವವಾಗಿರುವ ವೇಳೆ ಪಿಂಕ್‌ ಬಾಲ್‌ ಪಂದ್ಯಗಳನ್ನು ಆಡಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದು ಚೆಂಡನ್ನು ಒರಟಾಗಲು ಅವಕಾಶ ನೀಡುವುದಿಲ್ಲ ಹಾಗೂ ಚೆಂಡು ರಿವರ್ಸ್‌ ಸ್ವಿಂಗ್‌ ಆಗಲಿದೆ. ಪಿಂಕ್‌ ಬಾಲ್‌ ಕಠಿಣವಾಗಿರುವ ಕಾರಣ ಫಾಸ್ಟ್‌ ಬೌಲರ್‌ಗಳಿಗೆ ಹೆಚ್ಚಿನ ಸ್ವಿಂಗ್‌ ಆಗಲು ನೆರವು ನೀಡುತ್ತದೆ ಎಂದು ಇರ್ಫಾನ್‌ ಪಠಾಣ್‌ ತಿಳಿಸಿದ್ದಾರೆ.

“ಚೆಂಡು ಕಠಿಣತೆಯನ್ನು ಹೊಂದಿರುವ ಕಾರಣ ಹಾಗೂ ಅದು ಚೆಂಡು ರಿವರ್ಸ್‌ ಸ್ವಿಂಗ್‌ ಆಗಲು ಅವಕಾಶ ನೀಡುವುದಿಲ್ಲ. ಪಿಂಕ್‌ ಬಾಲ್‌ ಅನ್ನು ಹೊನಲು ಬೆಳಕಿನ ಪಂದ್ಯಗಳಿಗೆ ಮಾತ್ರ ಬಳಸಲಾಗುತ್ತದೆ. ಪಿಚ್‌ ತೇವದಿಂದ ಕೂಡಿರುತ್ತದೆ ಹಾಗೂ ಚೆಂಡು ಒರಟಾಗಲು ಅವಕಾಶ ನೀಡುವುದಿಲ್ಲ. ಚೆಂಡು ಒರಟಾಗಿಲ್ಲವಾದರೆ, ರಿವರ್ಸ್‌ ಸ್ವಿಂಗ್‌ ಆಗಲು ಸಾಧ್ಯವೇ ಇಲ್ಲ. ಆದರೆ, ಚೆಂಡು ಕಠಿಣತೆಯಿಂದ ಇರುವುದು ಇಲ್ಲಿ ಒಳ್ಳೆಯ ಸಂಗತಿಯಾಗಿದೆ. ಈ ಕಾರಣದಿಂದಲೇ ಚೆಂಡು ಸಾಂಪ್ರದಾಯಿಕ ಸ್ವಿಂಗ್‌ ಆಗಲು ಕಾರಣ,” ಎಂದು ಇರ್ಫಾನ್‌ ಪಠಾಣ್‌ ಹೇಳಿದ್ದಾರೆ.

ಹೊನಲು ಬೆಳಕು ಬೌಲರ್‌ಗಳಿಗೆ ನೆರವಾಗಲಿದೆ: ಪಠಾಣ್‌

ಹೊನಲು ಬೆಳಕಿನಲ್ಲಿ ಆಡುವುದು ಬ್ಯಾಟ್ಸ್‌ಮನ್‌ಗಳಿಗೆ ತುಂಬಾ ಕಷ್ಟವಾಗಲು ಕಾರಣವೇನೆಂದು ಇರ್ಫಾನ್‌ ಪಠಾಣ್‌ಗೆ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಇರ್ಫಾನ್‌ ಪಠಾಣ್‌, ಸೂರ್ಯ ಮರೆಯಾದ ಬಳಿಕ ಕಂಡೀಷನ್ಸ್‌ ತಂಪಾಗಿ ಇರುತ್ತದೆ ಹಾಗೂ ಕಂಡೀಷನ್ಸ್‌ ತೇವವಾಗಿರುತ್ತದೆ. ಇದು ಬೌಲರ್‌ಗಳಿಗೆ ನೆರವು ನೀಡಲಿದೆ. ಇದಕ್ಕೆ ಹೊಂದಿಕೊಂಡು ಆಡುವುದು ಕೀ ಸಂಗತಿ ಎಂದು ಅವರು ತಿಳಿಸಿದ್ದಾರೆ.

“ಹೊನಲು ಬೆಳಕಿನ ಬ್ಯಾಟ್‌ ಮಾಡುವುದು ಬ್ಯಾಟ್ಸ್‌ಮನ್‌ಗಳಿಗೆ ತುಂಬಾ ಕಷ್ಟ. ಸೂರ್ಯ ಮರೆಯಾದ ಬಳಿಕ ಹೊನಲು ಬೆಳಲು ಕಂಡೀಷನ್ಸ್‌ ಮೇಲೆ ಪ್ರಭಾವ ಬೀರಲು ಆರಂಭಿಸುತ್ತದೆ. ಅದರಲ್ಲಿಯೂ ಲೈಟ್‌ಗಳು ಕಂಡೀಷನ್ಸ್‌ ಅನ್ನು ತೇವವಾಗಿಸುತ್ತದೆ. ಕಂಡೀಷನ್ಸ್‌ ತಂಪಾಗಿ ಇದ್ದಷ್ಟು ಇದು ಬೌಲರ್‌ಗಳಿಗೆ ನೆರವು ನೀಡಲಿದೆ. ಇದು ಬ್ಯಾಟ್ಸ್‌ಮನ್‌ಗಳಿಗೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಪಿಂಕ್‌ ಬಾಲ್‌ ಪಂದ್ಯದಲ್ಲಿ ಕಂಡೀಷನ್ಸ್‌ಗೆ ಹೊಂದಿಕೊಂಡು ಆಡುವುದು ಬ್ಯಾಟ್ಸ್‌ಮನ್‌ಗಳ ಪಾಲಿಗೆ ಕೀ ಸಂಗತಿಯಾಗುತ್ತದೆ,” ಎಂದು ಇರ್ಫಾನ್‌ ಪಠಾಣ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ಅಡಿಲೇಡ್‌ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XIನಲ್ಲಿ 3 ಬದಲಾವಣೆ ಸಾಧ್ಯತೆ!