Saturday, 17th May 2025

IND vs AUS: ʻಎಂಸಿಜೆಯಲ್ಲಿ ನಿಮ್ಮೊಂದಿಗೆ ಬ್ಯಾಟ್‌ ಮಾಡುತ್ತೇನೆʼ-ವಿರಾಟ್‌ ಕೊಹ್ಲಿ ಪೋಸ್ಟ್‌ಗೆ ಆರ್‌ ಅಶ್ವಿನ್‌ ಪ್ರತಿಕ್ರಿಯೆ!

ʻI will be walking out with you to bat at the MCGʼ-R Ashwin responds to Virat Kohli's tribute

ನವದೆಹಲಿ: ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನ ನಿವೃತ್ತಿಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್‌ ಹಾಕಿದ್ದ ಆಧುನಿಕ ಬ್ಯಾಟಿಂಗ್‌ ದಿಗ್ಗಜ ವಿರಾಟ್‌ ಕೊಹ್ಲಿಗೆ ಭಾರತದ ಮಾಜಿ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಪ್ರತಿಕ್ರಿಯಿಸಿದ್ದಾರೆ. ನಾನು ನಿಮ್ಮೊಂದಿಗೆ ಎಂಸಿಜೆ ಕ್ರೀಡಾಂಗಣದಲ್ಲಿ (IND vs AUS) ನಿಮ್ಮೊಂದಿಗೆ ಬ್ಯಾಟ್‌ ಮಾಡುತ್ತೇನೆಂದು ಆರ್‌ ಅಶ್ವಿನ್‌ ತಿಳಿಸಿದ್ದಾರೆ.

ಕಳೆದ ಬುಧವಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್‌ ಪಂದ್ಯ ಡ್ರಾನಲ್ಲಿ ಅಂತ್ಯವಾದ ಬಳಿಕ ಆರ್‌ ಅಶ್ವಿನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಈ ವೇಳೆ ಭಾರತ ತಂಡದ ಸಹ ಆಟಗಾರರು ಹಾಗೂ ಮಾಜಿ ಆಟಗಾರರು ಆರ್‌ ಅಶ್ವಿನ್‌ಗೆ ಶುಭ ಹಾರೈಸಿದ್ದರು ಹಾಗೂ ಭಾವನಾತ್ಮಕ ಸಂದೇಶವನ್ನು ಕಳುಹಿಸಿದ್ದಾರೆ. ಅದರಂತೆ ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಕೂಡ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಆರ್‌ ಅಶ್ವಿನ್‌ಗೆ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದರು.

ಆರ್‌ ಅಶ್ವಿನ್‌ಗೆ ಕೊಹ್ಲಿ ಭಾವನಾತ್ಮಕ ಸಂದೇಶ

“ನಾನು ನಿಮ್ಮೊಂದಿಗೆ 14 ವರ್ಷಗಳಿಂದ ಆಡಿದ್ದೇನೆ ಮತ್ತು ನೀವು ಇಂದು (ಬುಧವಾರ) ನಿವೃತ್ತರಾಗುತ್ತಿದ್ದೀರಿ ಎಂದು ನನಗೆ ಹೇಳಿದಾಗ, ಅದು ನನ್ನನ್ನು ಸ್ವಲ್ಪ ಭಾವುಕನನ್ನಾಗಿಸಿತು ಮತ್ತು ಹಲವು ವರ್ಷಗಳಲ್ಲಿ ಒಟ್ಟಿಗೆ ಆಡಿದ ನೆನಪುಗಳು ನನ್ನ ಮುಂದೆ ಹಾದು ಹೋದವು. ನಿಮ್ಮೊಂದಿಗಿನ ಪ್ರಯಾಣದ ಪ್ರತಿಯೊಂದು ಕ್ಷಣವನ್ನು ನಾನು ಆನಂದಿಸಿದ್ದೇನೆ. ಭಾರತೀಯ ಕ್ರಿಕೆಟ್‌ಗೆ ನಿಮ್ಮ ಕೌಶಲ ಮತ್ತು ಪಂದ್ಯವನ್ನು ಗೆದ್ದು ಕೊಡುವ ನಿಮ್ಮ ಕೊಡುಗೆಗಳು ಯಾವುದಕ್ಕೂ ಕಡಿಮೆ ಇಲ್ಲ. ನೀವು ಯಾವಾಗಲೂ ಭಾರತೀಯ ಕ್ರಿಕೆಟ್‌ನ ದಂತಕಥೆಯಾಗಿ ನೆನಪಿನಲ್ಲಿ ಉಳಿಯುತ್ತೀರಿ.”

“ನಿಮ್ಮ ಕುಟುಂಬದೊಂದಿಗೆ ನಿಮ್ಮ ಜೀವನ ಉತ್ತಮವಾಗಿರಲಿ ಹಾಗೂ ನೀವು ಮುಂದೆ ತೆಗೆದುಕೊಳ್ಳುವ ನಿರ್ಧಾರಗಳು ನಿಮಗೆ ಒಳ್ಳೆಯದು ಮಾಡಲಿ ಹಾಗೂ ಇದನ್ನು ಬಿಟ್ಟು ಬೇರೆ ಏನನ್ನೂ ನಾನು ಬಯಸುವುದಿಲ್ಲ. ನಿಮಗೆ ಮತ್ತು ನಿಮ್ಮ ಆಪ್ತರಿಗೆ ಅಪಾರವಾದ ಗೌರವ ಮತ್ತು ಪ್ರೀತಿಯಿಂದ. ಎಲ್ಲದಕ್ಕೂ ಧನ್ಯವಾದಗಳು ಗೆಳೆಯ. ನಿಮಗೆ ಹಾಗೂ ನಿಮ್ಮ ಆಪ್ತಬಳಗದ ಮೇಲೆ ಅಪಾರವಾದ ಗೌರವ ಹಾಗೂ ಪ್ರೀತಿ ಇದೆ. ನೀವು ನೀಡಿರುವ ಎಲ್ಲದಕ್ಕೂ ಧನ್ಯವಾದಗಳು,” ಎಂದು ತಾವು ಹಂಚಿಕೊಂಡಿರುವ ಅಶ್ವಿನ್‌ ಜತೆಗಿನ ಫೋಟೋಗೆ ಈ ರೀತಿಯ ಶೀರ್ಷಿಕೆ ನೀಡಿದ್ದರು.

ವಿರಾಟ್‌ ಕೊಹ್ಲಿಗೆ ಪೋಸ್ಟ್‌ಗೆ ಆರ್‌ ಅಶ್ವಿನ್‌ ಪ್ರತಿಕ್ರಿಯೆ

ವಿರಾಟ್‌ ಕೊಹ್ಲಿಯ ಭಾವನಾತ್ಮಕ ಸಂದೇಶಕ್ಕೆ ಆರ್‌ ಅಶ್ವಿನ್‌ ಪ್ರತಿಕ್ರಿಯಿಸಿದ್ದಾರೆ. “ಧನ್ಯವಾದಗಳು ಗೆಳೆಯ! ಎಂಸಿಜೆ ಕ್ರೀಡಾಂಗಣದಲ್ಲಿ ನಾನು ನಿಮ್ಮೊಂದು ಬ್ಯಾಟ್‌ ಮಾಡಲು ಬರುತ್ತೇನೆಂದು ನಿಮಗೆ ಈಗಾಗಲೇ ಹೇಳಿದ್ದೇನೆ,” ಎಂದು ಆರ್‌ ಅಶ್ವಿನ್‌ ತಿಳಿಸಿದ್ದಾರೆ.

ಕೊಹ್ಲಿ-ಅಶ್ವಿನ್‌ 2022ರ ಎಂಸಿಜೆ ನೆನೆಪು

2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ 160 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡದ ಕೊನೆಯ ಎರಡು ಎಸೆತಗಳು ಬಾಕಿ ಇರುವಾಗ ವಿರಾಟ್‌ ಕೊಹ್ಲಿ ಜತೆ ಆರ್‌ ಅಶ್ವಿನ್‌ ಕ್ರೀಸ್‌ನಲ್ಲಿ ಜೊತೆಯಾಗಿದ್ದರು. ಈ ವೇಳೆ ಭಾರತ ತಂಡಕ್ಕೆ ಕೊನೆಯ ಎರಡು ಎಸೆತಗಳಲ್ಲಿ ಎರಡು ರನ್‌ ಅಗತ್ಯವಿತ್ತು. ಈ ವೇಳೆ ಅಶ್ವಿನ್‌ ಅವರು ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಮತ್ತೊಂದು ತುದಿಯಲ್ಲಿ ಬ್ಯಾಟ್‌ ಮಾಡಿದ್ದ ವಿರಾಟ್‌ ಕೊಹ್ಲಿ ಅಜೇಯ 82 ರನ್‌ಗಳನ್ನು ಗಳಿಸಿದ್ದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಈ ಸುದ್ದಿಯನ್ನು ಓದಿ:R Ashwin Retirement: ಅನಿಲ್‌ ಕುಂಬ್ಳೆಯ ದಾಖಲೆ ಮುರಿಯಲ್ಲ ಎಂದಿದ್ದ ಆರ್‌ ಅಶ್ವಿನ್‌!