ಹೊಸದಿಲ್ಲಿ: ಬಿಸಿಸಿಐ ತನ್ನ ಸಕ್ರಿಯ ಆಟಗಾರರಿಗೆ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಮತ್ತು ಸದ್ಯಕ್ಕೆ ಭಾರತದ ಹೊರಗಿನ ಫ್ರಾಂಚೈಸಿ ಲೀಗ್‌ಗಳಲ್ಲಿ ಆಡುವ ಏಕೈಕ ಮಾರ್ಗವೆಂದರೆ ತವರು ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳುವುದು. ದಿನೇಶ್ ಕಾರ್ತಿಕ್ ದಕ್ಷಿಣ ಆಫ್ರಿಕಾ-20 ಟೂರ್ನಿಯಲ್ಲಿ (SA20) ಭಾಗವಹಿಸುವ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಆದರೆ ಕಳೆದ ವರ್ಷ ಅವರು ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.
ಜನವರಿ 9 ರಂದು ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ಟಿ20 ಮೂರನೇ ಸೀಸನ್ ನಿಮಿತ್ತ ಮಾಧ್ಯಮಗಳೊಂದಿಗೆ ಮಾತನಾಡಿದ ಎಬಿ ಡಿವಿಲಿಯರ್ಸ್, “ಇದರಲ್ಲಿ ಹೆಚ್ಚಿನ ಭಾರತೀಯ ಆಟಗಾರರು ಭಾಗಿಯಾಗುವುದನ್ನು ನೋಡಲು ನಾನು ಇಷ್ಟಪಡುತ್ತೇನೆ. ದಿನೇಶ್ ಕಾರ್ತಿಕ್ ಈ ವರ್ಷ ಇಲ್ಲಿಗೆ ಬರುತ್ತಾರೆ ಎಂದು ನಮಗೆ ತಿಳಿದಿದೆ, ಅದು ಅದ್ಭುತವಾಗಿದೆ ಮತ್ತು ಇದು ಟೂರ್ನಿಯ ಪಾಲಿಗೆ ಉತ್ತಮವಾಗಿದೆ. ಭವಿಷ್ಯದಲ್ಲಿ ಹೆಚ್ಚಿನ ಭಾರತೀಯ ಆಟಗಾರರು ದಕ್ಷಿಣ ಆಫ್ರಿಕಾ ಟಿ20ಗೆ ಸೇರಲು ಬಿಸಿಸಿಐ ಅವಕಾಶ ನೀಡಲಿದೆ ಎಂದು ಭಾವಿಸುತ್ತೇನೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿದೇಶಿ ಲೀಗ್‌ಗಳಿಗೆ ಸಕ್ರಿಯ ಭಾರತೀಯ ಆಟಗಾರರನ್ನು ಲಭ್ಯವಾಗುವಂತೆ ಬಿಸಿಸಿಐ ಮಾಡುವುದಿಲ್ಲ ಎಂದು ಡಿವಿಲಿಯರ್ಸ್ ಚೆನ್ನಾಗಿ ತಿಳಿದಿದೆ. ಆದರೆ ಅವರು ದಕ್ಷಿಣ ಆಫರಿಕಾ ಟಿ20ಯಲ್ಲಿ ವಿರಾಟ್ ಕೊಹ್ಲಿಯಂತಹ ಆಟಗಾರರನ್ನು ನೋಡಲು ಇಷ್ಟಪಡುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಕೆಲವು ಭಾರತೀಯ ಆಟಗಾರರು ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ಇಲ್ಲಿಗೆ ಬಂದು ಆಡುವುದನ್ನು ನೋಡುವುದು ಚೆನ್ನಾಗಿರುತ್ತದೆ. ಜಸ್‌ಪ್ರೀತ್ ಬುಮ್ರಾ, ರಿಷಭ್ ಪಂತ್, ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ನಾನು ಆಯ್ಕೆ ಮಾಡಲು ಬಯಸುತ್ತೇನೆ,” ಎಂದು ಹೇಳಿದ್ದಾರೆ.
‘ಸ್ಕೈ (ಸೂರ್ಯಕುಮಾರ್) ಇಲ್ಲಿ ಆಡುವುದನ್ನು ಊಹಿಸಿಕೊಳ್ಳಿ – ಇದು ಅದ್ಭುತವಾಗಿದೆ! ಆದರೆ ಹಿಂದಿನ ಆಟಗಾರರ ಬಗ್ಗೆ ಯೋಚಿಸಿದರೆ, ರಾಬಿನ್ ಉತ್ತಪ್ಪ, ದಿನೇಶ್ ಕಾರ್ತಿಕ್ ಅಥವಾ ಬಹುಶಃ ಇರ್ಫಾನ್ ಪಠಾಣ್ ನೆನಪಾಗುತ್ತಾರೆ. ಈ ಕೆಲವು ಆಟಗಾರರು ಈಗಾಗಲೇ ವಿಶ್ವದಾದ್ಯಂತ ಮಾಸ್ಟರ್ಸ್ ಲೀಗ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಯಾರಿಗೆ ಗೊತ್ತು, ಬಹುಶಃ ನಾನು ಮುಂದಿನ ದಿನಗಳಲ್ಲಿ ಅವರೊಂದಿಗೆ ಸೇರಿಕೊಳ್ಳುತ್ತೇನೆ,” ಎಂದು ತಿಳಿಸಿದ್ದಾರೆ.
ಐಪಿಎಲ್‌ನಲ್ಲಿ, ಇಂಪ್ಯಾಕ್ಟ್ ಪ್ಲೇಯರ್ ಆಟಗಾರ ನಿಯಮವನ್ನು 2027 ರವರೆಗೆ ವಿಸ್ತರಿಸಲಾಗಿದೆ. ಆದರೆ ಡಿವಿಲಿಯರ್ಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿಯಮವನ್ನು ದಕ್ಷಿಣ ಆಫ್ರಿಕಾ-ಟಿ20 ಟೂರ್ನಿಯಲ್ಲಿ ಜಾರಿಗೆ ತರಬೇಕೆ ಎಂದು ಕೇಳಿದಾಗ, “ನಿಜ ಹೇಳಬೇಕೆಂದರೆ, ನಾನು ಎಂದಿಗೂ ಅದರ ದೊಡ್ಡ ಅಭಿಮಾನಿಯಾಗಿರಲಿಲ್ಲ ಮತ್ತು ಕಳೆದ ಐಪಿಎಲ್‌ನಲ್ಲಿ ನಾನು ಅದರ ಬಗ್ಗೆ ಮಾತನಾಡಿದ್ದೇನೆ. ಇದು ಸ್ವಲ್ಪ ಗೊಂದಲಮಯವಾಗಿದೆ ಎಂದು ನಾನು ಭಾವಿಸುತ್ತೇನೆ, ಇದು ಆಲ್‌ರೌಂಡರ್ ಮತ್ತು ತಂಡದಲ್ಲಿ ಅವರ ಪಾತ್ರದ ಮೇಲೆ ಸ್ವಲ್ಪ ಒತ್ತಡವನ್ನು ಬೀರುತ್ತದೆ,” ಎಂದು ಎಬಿ ಡಿ ವಿಲಿಯರ್ಸ್ ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ: Virat Kohli: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಮಹತ್ವದ ಸಲಹೆ ನೀಡಿದ ರವಿ ಶಾಸ್ತ್ರಿ!