Saturday, 10th May 2025

Virat Kohli:’ಬುದ್ಧಿಹೀನ ವರ್ತನೆ ಬಿಡಿ’-ವಿರಾಟ್‌ ಕೊಹ್ಲಿಗೆ ಬುದ್ದಿ ಹೇಳಿದ ಇಯಾನ್‌ ಚಾಪೆಲ್‌!

'He has to stop his senseless antics': Ian Chappell Hits Out At Virat Kohli Over Sam Konstas Incident

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟಸ್ಟ್‌ ಸರಣಿಯಲ್ಲಿ ಯುವ ಬ್ಯಾಟ್ಸ್‌ಮನ್‌ ಸ್ಯಾಮ್‌ ಕೊನ್‌ಸ್ಟಸ್‌ ಅವರನ್ನು ಭುಜದಿಂದ ತಳ್ಳಿದ್ದ ವಿರಾಟ್‌ ಕೊಹ್ಲಿಯ (Virat Kohli) ವರ್ತನೆಯನ್ನು ಆಸೀಸ್‌ ಮಾಜಿ ನಾಯಕ ಇಯಾನ್‌ ಚಾಪೆಲ್‌ ಖಂಡಿಸಿದ್ದಾರೆ. ಸ್ಥಿರವಾಗಿ ರನ್‌ ಗಳಿಸಿ ಯುವ ಆಟಗಾರರಿಗೆ ಅಮೂಲ್ಯವಾದ ಸಲಹೆಗಳನ್ನು ನೀಡಬೇಕು. ಅದು ಬಿಟ್ಟು ಬುದ್ದಿಹೀನ ವರ್ತನೆಗಳನ್ನು ನಿಲ್ಲಿಸಬೇಕೆಂದು ಭಾರತೀಯ ಆಟಗಾರನಿಗೆ ಅವರು ಬುದ್ದಿ ಹೇಳಿದ್ದಾರೆ.

ಕಳೆದ ಒಂದು ವರ್ಷದಿಂದ ವಿರಾಟ್‌ ಕೊಹ್ಲಿ ಆಡಿದ್ದ 10 ಟೆಸ್ಟ್‌ ಪಂದ್ಯಗಳಿಂದ 24ರ ಸರಾಸರಿಯಲ್ಲಿ 417 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ವಿರಾಟ್‌ ಕೊಹ್ಲಿಯ ಟೆಸ್ಟ್‌ ವೃತ್ತಿ ಜೀವನ ಇನ್ನೂ ಕೆಲ ವರ್ಷಗಳು ಬಾಕಿ ಇರಬಹುದು. ಆದರೆ, ರೋಹಿತ್‌ ಶರ್ಮಾರ ದೀರ್ಘಾವಧಿ ಸ್ವರೂಪದ ವೃತ್ತಿ ಬದುಕು ಬಹುತೇಕ ಅಂತ್ಯವಾಗಿದೆ. ಬಿಸಿಸಿಐ ಕೊಹ್ಲಿಗೆ ಇನ್ನೂ ಟೆಸ್ಟ್‌ ಕ್ರಿಕೆಟ್‌ ಆಡಲು ಹೆಚ್ಚಿನ ಅವಕಾಶವನ್ನು ನೀಡಬಹುದು.

ಜೂನ್‌ನಲ್ಲಿ ಇಂಗ್ಲೆಂಡ್‌ ವಿರುದ್ದ ಭಾರತ ತಂಡ ತನ್ನ ಮುಂದಿನ ಟೆಸ್ಟ್‌ ಸರಣಿಯನ್ನು ಆಡಲಿದೆ. ಅಲ್ಲಿಯವರೆಗೂ ಟೀಮ್‌ ಇಂಡಿಯಾಗೆ ಯಾವುದೇ ಟೆಸ್ಟ್‌ ಪಂದ್ಯವಿಲ್ಲ. ಇದಕ್ಕೂ ಮುನ್ನ ಭಾರತ ತಂಡ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಬಳಿಕ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆಡಲಿದೆ. ಅಂದ ಹಾಗೆ ಇಂಗ್ಲೆಂಡ್‌ನಲ್ಲಿ 5 ಪಂದ್ಯಗಳ ಟೆಸ್ಟ್‌ ಸರಣಿಯ ಮೂಲಕ ಭಾರತದ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಪಯಣ ಆರಂಭವಾಗಲಿದೆ.

IND vs ENG: ನಿತೀಶ್‌ ರೆಡ್ಡಿ ಇನ್‌, ಮೊದಲನೇ ಟಿ20ಐಗೆ ಭಾರತದ ಬಲಿಷ್ಠ ಪ್ಲೇಯಿಂಗ್‌ XI ವಿವರ!

ಇಎಸ್‌ಪಿಎನ್‌ ಕ್ರಿಕ್‌ಇನ್ಪೋಗೆ ಬರೆದಿರುವ ಅಂಕಣದಲ್ಲಿ ಇಯಾನ್‌ ಚಾಪೆಲ್‌, “ಇಂಗ್ಲೆಂಡ್‌ನಲ್ಲಿ ವಿರಾಟ್‌ ಕೊಹ್ಲಿಯ ಅನುಭವವು ಅಮೂಲ್ಯವಾಗಿದೆ. ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರ ಪೈಕಿ ವಿರಾಟ್‌ ಕಮ್‌ಬ್ಯಾಕ್‌ ಮಾಡುವ ಸಾಧ್ಯತೆ ಹೆಚ್ಚು. ಕಿರಿಯ ಆಟಗಾರರಿಗೆ ಮೌಲ್ಯಯುತ ಸಲಹೆಗಳನ್ನು ನೀಡುವ ಮೂಲಕ ಅವರು ಸ್ಥಿರ ಪ್ರದರ್ಶನ ತೋರುವ ಕಡೆಗೆ ಗಮನ ಹರಿಸಬೇಕು,” ಎಂದು ಅವರು ಸಲಹೆ ನೀಡಿದ್ದಾರೆ.

ಬುದ್ದಿಹೀನ ವರ್ತನೆಗಳನ್ನು ನಿಲ್ಲಿಸಬೇಕು

“ಎಂಸಿಜೆ ಟೆಸ್ಟ್‌ನಲ್ಲಿ ಸ್ಯಾಮ್‌ ಕೊನ್‌ಸ್ಟಸ್‌ ಅವರನ್ನು ಭುಜದಿಂದ ತಳ್ಳಿದ್ದ ರೀತಿಯ ಬುದ್ದಿಹೀನ ವರ್ತನೆಗಳನ್ನು ಅವರು ನಿಲ್ಲಿಸಬೇಕು. ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿಯನ್ನು ಬಯಸಿದರೆ, ಅದು ಭಾರತ ತಂಡಕ್ಕೆ ದೊಡ್ಡ ನಷ್ಟ ಉಂಟಾಗಲಿದೆ. ಅಲ್ಲದೆ ಇದು ಇಂಗ್ಲೆಂಡ್‌ ಸರಣಿಗೂ ಮುನ್ನ ದೊಡ್ಡ ಅಂತರವನ್ನು ಉಂಟು ಮಾಡಲಿದೆ,” ಎಂದು ಆಸೀಸ್‌ ಮಾಜಿ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೋಹಿತ್‌ ಶರ್ಮಾ ಟೆಸ್ಟ್‌ ವೃತ್ತಿ ಜೀವನ ಅಂತ್ಯ?

ರೋಹಿತ್‌ ಶರ್ಮಾ ಅವರು ಟೆಸ್ಟ್‌ ತಂಡದಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳುವುದು ಬಹುತೇಕ ಅನುಮಾನ ಎಂದು ಆಸೀಸ್‌ ದಿಗ್ಗಜ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ಆಯ್ಕೆಯ ಬಗ್ಗೆ ಭಾರತೀಯ ಆಯ್ಕೆದಾರರು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಮುಂದಿನ ಟೆಸ್ಟ್‌ ಸರಣಿಗೂ ಮುನ್ನ ರೋಹಿತ್‌ ಶರ್ಮಾ ಅವರ ಟೆಸ್ಟ್‌ ವೃತ್ತಿ ಜೀವನದ ಭವಿಷ್ಯ ತಿಳಿಯಲಿದೆ. ಆದರೆ, ವಿರಾಟ್‌ ಕೊಹ್ಲಿ ಮುಂದುವರಿಯಬಹುದು,” ಎಂದು ಇಯಾನ್‌ ಚಾಪೆಲ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: ರಾಹುಲ್‌, ಜಡೇಜಾ ಔಟ್‌! Champions Trophyಗೆ ಭಾರತ ತಂಡವನ್ನು ಆರಿಸಿದ ಹರ್ಭಜನ್‌ ಸಿಂಗ್‌!

Leave a Reply

Your email address will not be published. Required fields are marked *