Tuesday, 13th May 2025

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ’ಗೆ 12 ಲಕ್ಷ ರೂಪಾಯಿ ದಂಡ

ವದೆಹಲಿ: ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ನೀತಿ ಸಂಹಿತೆ ಉಲ್ಲಂಘಿಸಿದ್ದು, 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಸಮಯದಲ್ಲಿ ತಮ್ಮ ತಂಡದ ನಿಧಾನಗತಿಯ ಓವರ್ ದರವನ್ನ ಕಾಯ್ದುಕೊಂಡಿದ್ದಕ್ಕಾಗಿ, ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ ದಂಡ ವಿಧಿಸಲಾಗಿದೆ.

ಕೊನೆಯ ಓವರಿನಲ್ಲಿ ಗುಜರಾತ್ ಟೈಟಾನ್ಸ್ ಪಂಜಾಬ್ ಕಿಂಗ್ಸ್ ತಂಡವನ್ನ 6 ವಿಕೆಟ್’ಗಳಿಂದ ಸೋಲಿಸಿತು. ಪಂದ್ಯವು ಕೊನೆಯವರೆಗೂ ರೋಮಾಂಚನಕಾರಿಯಾಗಿತ್ತು. ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ತಂಡವು ಆರಂಭಿಕ ಹಿನ್ನಡೆ ಅನುಭವಿಸಿದ್ದು, ಗುಜರಾತ್ ಟೈಟಾನ್ಸ್’ನ ಅದ್ಭುತ ಬೌಲಿಂಗ್ ಮುಂದೆ ತವರು ನೆಲದಲ್ಲಿ ಎಂಟು ವಿಕೆಟ್ ನಷ್ಟಕ್ಕೆ 153 ರನ್ ಗಳಿಸಲಷ್ಟೇ ಶಕ್ತವಾಯಿತು.