Saturday, 10th May 2025

Hardik Pandya: ಹಾರ್ದಿಕ್‌ ಹಿಂದೆ ಬಿದ್ದ ಮತ್ತೊಬ್ಬ ಬಾಲಿವುಡ್‌ ನಟಿ

Hardik Pandya

ಮುಂಬಯಿ: ಹಾರ್ದಿಕ್​ ಪಾಂಡ್ಯ(Hardik Pandya) ಅವರು ನತಾಶಾ ಸ್ಟಾಂಕೋವಿಕ್(Natasa Stankovic) ಅವರಿಗೆ ವಿಚ್ಛೇದನ(Hardik-Natasa Divorce) ನೀಡಿದ ಬಳಿಕ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇದ್ದಾರೆ. ನತಾಶಗೆ ವಿಚ್ಛೇದನ ನೀಡಿ ಒಂದು ವಾರ ಕಳೆಯುವಷ್ಟರಲ್ಲಿ ಪಾಂಡ್ಯ ಬಾಲಿವುಡ್​ನ ಖ್ಯಾತ ನಟಿ ಅನನ್ಯ ಪಾಂಡೆ(Ananya Panday) ಜತೆ ಚಾಟಿಂಗ್​, ಡೇಟಿಂಗ್​ ಆರಂಭಿಸಿದ್ದಾರೆ ಎನ್ನಲಾಗಿತ್ತು. ಇದಾದ ಬಳಿಕ ಪಾಂಡ್ಯ ಬ್ರಿಟಿಷ್​ ಗಾಯಕಿ ಮತ್ತು ನಟಿ ಜಾಸ್ಮಿನ್​ ವಾಲಿಯಾ(Jasmin Walia) ಜತೆ ಡೇಟಿಂಗ್​(Hardik Pandya And Jasmin Walia Dating) ಮಾಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು. ಈ ಬಾರಿ ಪಾಂಡ್ಯ ಸುದ್ದಿಯಾಗಿರುವುದು ನಟಿಯೊಬ್ಬರ ಹೇಳಿಕೆಯಿಂದ.ಹೌದು,
ಬಾಲಿವುಡ್‌  ನಟಿ ಇಶಿತಾ ರಾಜ್ ಅವರು ಪಾಂಡ್ಯ ಎಂದರೆ ನನಗೆ ತುಂಬ ಇಷ್ಟ, ಅವರನ್ನು ನಾನು ಇಷ್ಟಪಡುತ್ತೇನೆ ಎಂದು ಹೇಳಿರುವ ವಿಡಿಯೊವೊಂದು ಇದೀಗ ಭಾರೀ ವೈರಲ್‌ ಆಗಿದೆ.

ಸಿನೆಮಾ ಒಂದರ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇಶಿತಾಗೆ ಸಂದರ್ಶಕಿ ಹಾರ್ದಿಕ್‌ ಬಗ್ಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಇಶಿತಾ, ನಾನು ಹಾರ್ದಿಕ್ ಪಾಂಡ್ಯರನ್ನು ತುಂಬ ಇಷ್ಟಪಡುತ್ತೇನೆ. ಅವರ ಬ್ಯಾಟಿಂಗ್‌ ನೋಡಲು ಕಾದು ಕುಳಿತಿರುತ್ತೇನೆ. ಏಕೆಂದರೆ ಪಾಂಡ್ಯ ತಂಡ ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗಿಳಿದು ಅಸಾಮಾನ್ಯ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ಪಂದ್ಯವನ್ನು ಗೆಲ್ಲಿಸುತ್ತಾರೆ. ಅವರನ್ನು ನಾನು ಪ್ರೀತಿಸುತ್ತೇನೆ” ಎಂದು ಹೇಳಿದ್ದಾರೆ. ನಟಿಯ ಈ ಹೇಳಿಕೆ ವೈರಲ್‌ ಆಗುತ್ತಿದೆ. ದೆಹಲಿ ಮೂಲದ 34 ವರ್ಷದ ನಟಿ ಇಶಿತಾ ರಾಜ್  2011ರಲ್ಲಿ ‘ಪ್ಯಾರ್ ಕಾ ಪಂಚ್ ನಾಮಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಇದುವರೆಗೆ 9 ಸಿನಿಮಾಗಳಲ್ಲಿ ನಟಿಸಿದ್ದಾರೆ.

https://x.com/hardikxchhavi_/status/1829157996808810862

ಪಾಂಡ್ಯ ಮತ್ತು ನತಾಶ ವಿಚ್ಛೇದನ ಪಡೆದರೂ ಕೂಡ ತಮ್ಮ ಪುತ್ರ ಅಗಸ್ತ್ಯನನ್ನು(Agastya) ಸಹ-ಪೋಷಕರಾಗಿ ನೋಡಿಕೊಳ್ಳುತ್ತೇವೆ. ಅವನಿಗೆ ಯಾವುದೇ ಕಾರಣಕ್ಕೂ ಯಾವ ಕೊರತೆಯೂ ಆಗದಂತೆ ನಾವಿಬ್ಬರೂ ಸಮನಾಗಿ ಅವನ ಜವಾಬ್ದಾರಿ ಹಂಚಿಕೊಳ್ಳಲಿದ್ದೇವೆ ಎಂದು ಈಗಾಗಲೇ ಖಚಿತಪಡಿಸಿದ್ದಾರೆ. ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇದಕ್ಕೂ ಮುನ್ನ ಈ ಜೋಡಿ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು. ಸದ್ಯ ನತಾಶ ಮಗನೊಂದಿಗೆ ಲಂಡನ್‌ನಲ್ಲಿ ನೆಲೆಸಿದ್ದಾರೆ. ಪಾಂಡ್ಯ ಯಾವುದೇ ಕ್ರಿಕೆಟ್‌ ಸರಣಿ ಇಲ್ಲದ ಕಾರಣ ವಿದೇಶ ಪ್ರವಾಸ ಮಾಡುತ್ತ ಎಂಜಾಯ್‌ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *