Tuesday, 13th May 2025

ಲಂಕಾ ಆಟಗಾರರ ಕಳಪೆ ಆಟಕ್ಕೆ ಅಭಿಮಾನಿಗಳ ಟ್ವಿಟರ್‌’ನಲ್ಲಿ ಆಕ್ರೋಶ

ಲಂಡನ್/ ಕೊಲಂಬೋ: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದಕ್ಕೆ ಶ್ರೀಲಂಕಾ ಆಟಗಾರರ ವಿರುದ್ಧ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿ ದ್ದಾರೆ.

#unfollowcricketers ಎಂಬ ಹ್ಯಾಷ್ ಟ್ಯಾಗ್ ನಡಿಯಲ್ಲಿ ಲಂಕಾ ಅಭಿಮಾನಿಗಳು ಉಪನಾಯಕ ಕುಸಲ್ ಮೆಂಡಿಸ್ ಮತ್ತು ಆರಂಭಿಕ ಆಟಗಾರ ಧನುಷ್ಕಾ ಗುಣತಿಲಕ ಅವರ ಫೇಸ್‌ಬುಕ್ ಪುಟವನ್ನು ಸಾವಿರಾರು ಅಭಿಮಾನಿಗಳು ಬಹಿಷ್ಕರಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿರುವ ಲಂಕಾ ಆಟಗಾರರು ಸರಣಿಯ ಮೂರು ಟಿ20 ಪಂದ್ಯಗಳಲ್ಲಿ ಸೋಲನ ಭವಿಸಿದ್ದಾರೆ. ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸು ತ್ತಿರುವ ಲಂಕಾ ತಂಡ ಮೂರನೇ ಪಂದ್ಯದಲ್ಲಿ 89 ರನ್ ಅಂತರದ ಸೋಲನುಭವಿಸಿದೆ. ಇಂಗ್ಲೆಂಡ್ ಸರಣಿಯಲ್ಲಿ ವಿಫಲರಾದ ಆಟಗಾರರ ಫೇಸ್ ಬುಕ್, ಇನ್ಸ್ಟಾಗ್ರಾಮ ಮತ್ತು ಟ್ವಿಟ್ಟರ್ ನ ಅಧಿಕೃತ ಖಾತೆಗಳನ್ನು ಅನ್ ಫಾಲೋ ಮಾಡುವುದು ಈ ಅಭಿಯಾನದ ಉದ್ದೇಶ ಎನ್ನಲಾಗಿದೆ.

Leave a Reply

Your email address will not be published. Required fields are marked *