Tuesday, 13th May 2025

ಐಪಿಎಲ್‌ 2020: ಸೋಲುಗಳಿಂದ ಕಂಗೆಟ್ಟವರ ಹಣಾಹಣಿ ಇಂದು

ದುಬೈ: ಮೂರು ಸೋಲುಗಳಿಂದ ಕಂಗೆಟ್ಟಿರುವ ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದ ಕಿಂಗ್ಸ್‌ ಇಲೆವೆನ್ ಪಂಜಾಬ್ ಮತ್ತು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಭಾನುವಾರ ಮುಖಾಮುಖಿಯಾಗಲಿವೆ.

ಭಾರತ ಕ್ರಿಕೆಟ್ ತಂಡದಲ್ಲಿ ಧೋನಿ ನಿವೃತ್ತಿಯಿಂದ ತೆರವಾಗಿರುವ ವಿಕೆಟ್‌ಕೀಪರ್ ಸ್ಥಾನದ ‘ಉತ್ತರಾಧಿಕಾರಿ’ ಎಂದೇ ಬಿಂಬಿತ ವಾಗಿರುವ ರಾಹುಲ್, ಇದೇ ಮೊದಲ ಸಲ ಐಪಿಎಲ್‌ನಲ್ಲಿ ತಂಡದ ನಾಯಕತ್ವ ವಹಿಸಿದ್ದಾರೆ. ಧೋನಿಯ ಅನುಭವದ ಮುಂದೆ ರಾಹುಲ್ ಕಿರಿಯರು. ಆದರೆ ಟೂರ್ನಿಯನ್ನೇ ನೋಡುವುದಾದರೆ ಉಭಯ ತಂಡಗಳೂ ತಲಾ ನಾಲ್ಕು ಪಂದ್ಯಗಳನ್ನು ಆಡಿ, ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿಸಿವೆ.

ಆದರೆ ರನ್‌ಗಳ ಪ್ರವಾಹ ಹರಿಸುವುದರಲ್ಲಿ ಕಿಂಗ್ಸ್‌ ತಂಡವು ಮುಂಚೂಣಿ ಯಲ್ಲಿದೆ. ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್ ಅವರು ಈಗಾಗಲೇ ತಲಾ ಒಂದು ಶತಕ ಹೊಡೆ ದಿದ್ದಾರೆ. ನಿಕೋಲಸ್ ಪೂರನ್ ಕೂಡ ಕಳೆದ ಪಂದ್ಯದಲ್ಲಿ ಮಿಂಚಿದ್ದರು. ಆದರೆ ಕ್ರಿಸ್‌ ಗೇಲ್ ಅವರನ್ನು ಇದುವರೆಗೆ ಕಣಕ್ಕಿಳಿಸದ ತಂಡವು ಈ ಪಂದ್ಯದಲ್ಲಿ ಏನು ನಿರ್ಧಾರ ಮಾಡಲಿದೆ ಎಂಬ ಕುತೂಹಲ ಮೂಡಿದೆ. ಸತತ ವೈಫಲ್ಯ ಅನುಭವಿಸುತ್ತಿರುವ ಕರುಣ್ ನಾಯರ್, ಸರ್ಫರಾಜ್ ಖಾನ್ ಅವರ ಬಗ್ಗೆಯೂ ತಂಡವು ಗಂಭೀರವಾಗಿ ಯೋಚಿಸಬಹುದು.

ಏಕೆಂದರೆ, ಚೆನ್ನೈ ತಂಡದಲ್ಲಿ ಬೌಲಿಂಗ್ ಪಡೆ ಉತ್ತಮವಾಗಿದೆ. ದೀಪಕ್ ಚಾಹರ್, ಪೀಯೂಷ್ ಚಾವ್ಲಾ ಅವರು ಜೊತೆಯಾಟ ಗಳನ್ನು ಮುರಿಯುವಲ್ಲಿ ನಿಷ್ಣಾತರು. ಚೆನ್ನೈ ತಂಡದ ವಾಟ್ಸನ್, ಅಂಬಟಿ ರಾಯುಡು ಅವರು ತಮ್ಮ ನೈಜ ಆಟಕ್ಕೆ ಮರಳ ಬೇಕಷ್ಟೇ. ಫಾಫ್ ಡು ಪ್ಲೆಸಿ ಉತ್ತಮ ಲಯದಲ್ಲಿದ್ದಾರೆ. ಆದರೆ ಕೇದಾರ್ ಜಾಧವ್ ಸತತ ವೈಫಲ್ಯ ಅನುಭವಿಸುತ್ತಿರುವುದು ಚಿಂತೆಯ ವಿಷಯ. ಕಳೆದ ಪಂದ್ಯದಲ್ಲಿ ಅರ್ಧಶತಕ ಗಳಿಸಿರುವ ರವೀಂದ್ರ ಜಡೇಜ ಬೌಲಿಂಗ್‌ನಲ್ಲಿಯೂ ಜಾದೂ ಮಾಡಬಲ್ಲರು.

ಸತತ ಮೂರು ಪಂದ್ಯಗಳಲ್ಲಿ ಸೋತು ಗಾಯಗೊಂಡ ಹುಲಿಯಂತಾಗಿರುವ ಧೋನಿ, ಪಂಜಾಬ್ ಬಳಗಕ್ಕೆ ಪೆಟ್ಟು ನೀಡಲು ವಿಶೇಷ ತಂತ್ರಗಾರಿಕೆಯಿಂದ ಕಣಕ್ಕಿಳಿಯುವುದ ಖಚಿತ. ಅದನ್ನು ರಾಹುಲ್ ಹೇಗೆ ಎದುರಿಸುತ್ತಾರೆ ಎಂಬ ಕುತೂಹಲ ಗರಿಗೆದ ರಿದೆ.

 

Leave a Reply

Your email address will not be published. Required fields are marked *