Tuesday, 13th May 2025

ಸಂಘಟಿತ ಬೌಲಿಂಗ್ ದಾಳಿ: ಡೆಲ್ಲಿ ಕ್ಯಾಪಿಟಲ್ಸ್’ಗೆ ಮಣಿದ ರಾಯಲ್ಸ್

ಅಬುಧಾಬಿ: ಶನಿವಾರ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ 36ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು 33 ರನ್ ಗಳ ಅಂತರದಿಂದ ಮಣಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ, 6 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. ಗೆಲ್ಲಲು 155 ರನ್ ಬೆನ್ನಟ್ಟಿದ ರಾಜಸ್ಥಾನ ತಂಡವು 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿ ಸೋಲೊ ಪ್ಪಿಕೊಂಡಿತು.

ನಾಯಕ ಸಂಜು ಸ್ಯಾಮ್ಸನ್(ಔಟಾಗದೆ 70) ಏಕಾಂಗಿ ಹೋರಾಟ ನೀಡಿದರು. ಮಹಿಪಾಲ್ ಲೊಮ್ರೊರ್ 19 ರನ್ ಗಳಿಸಿದರು. ಆರಂಭಿಕ ಬ್ಯಾಟ್ಸ್ ಮನ್ ಗಳಾದ ಲಿಯಾಮ್ ಲಿವಿಂಗ್ ಸ್ಟೋನ್(1), ಯಶಸ್ವಿ ಜೈಸ್ವಾಲ್(5), ಡೇವಿಡ್ ಮಿಲ್ಲರ್(7), ರಿಯಾನ್ ಪರಾಗ್(2) ಹಾಗೂ ರಾಹುಲ್ ಟೆವಾಟಿಯ(9)ವಿಫಲರಾದರು.

ಡೆಲ್ಲಿ ಪರವಾಗಿ ಅನ್ರಿಚ್ ನೋಟ್ಜೆ(2-18) ಯಶಸ್ವಿ ಬೌಲರ್ ಎನಿಸಿಕೊಂಡರು. ಆವೇಶ್ ಖಾನ್, ಆರ್.ಅಶ್ವಿನ್, ಕಾಗಿಸೊ ರಬಾಡ ಹಾಗೂ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

ಡೆಲ್ಲಿ ತಂಡ 21 ರನ್ ಗೆ 2 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ಆಸರೆಯಾದವರು ಶ್ರೇಯಸ್ ಅಯ್ಯರ್(43) ಹಾಗೂ ನಾಯಕ ರಿಷಭ್ ಪಂತ್ (24). ಇಬ್ಬರೂ 3ನೇ ವಿಕೆಟ್ ಗೆ 62 ರನ್ ಜೊತೆಯಾಟ ನಡೆಸಿದರು. ಅಯ್ಯರ್ ತಂಡದ ಪರ ಸರ್ವಾಧಿಕ ಸ್ಕೋರ್ ಗಳಿಸಿದರು. ಈ ಸಾಧನೆಗೆ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಶಿಮ್ರಾನ್ ಹೆಟ್ಮೆಯರ್ 28, ಲಲಿತ್ ಯಾದವ್ ಔಟಾಗದೆ 14 ರನ್ ಗಳಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ಈ ಮೂಲಕ ಪ್ಲೇ-ಆಫ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿದೆ. ಈ ಗೆಲುವಿ ನೊಂದಿಗೆ ಆಡಿರುವ 10 ಪಂದ್ಯಗಳಲ್ಲಿ ಎಂಟನೇ ಗೆಲುವು ದಾಖಲಿಸಿರುವ ರಿಷಭ್ ಪಂತ್ ಬಳಗವು 16 ಅಂಕಗಳೊಂದಿಗೆ ಮಗದೊಮ್ಮೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅತ್ತ ರಾಜಸ್ಥಾನ್ ತಂಡವು ಎಂಟು ಅಂಕ ಗಳೊಂದಿಗೆ ಆರನೇ ಸ್ಥಾನಕ್ಕೆ ಕುಸಿದಿದೆ.

ಸವಾಲಿನ ಗುರಿ ಬೆನ್ನತ್ತಿದ ರಾಜಸ್ಥಾನ್ ಆರಂಭ ಉತ್ತಮವಾಗಿರಲಿಲ್ಲ. 11.5 ಓವರ್‌ಗಳಲ್ಲಿ 55 ರನ್ ಗಳಿಸುವುದರಲ್ಲಿ ಅರ್ಧ ತಂಡವು ಪೆವಿಲಿಯನ್‌ಗೆ ಮರಳಿತು. ಲಿಯಮ್ ಲಿವಿಂಗ್‌ಸ್ಟೋನ್ (1), ಯಶಸ್ವಿ ಜೈಸ್ವಾಲ್ (5), ಡೇವಿಡ್ ಮಿಲ್ಲರ್ (7), ಮಹಿಪಾಲ್ ಲೊಮ್ರೊರ್ (19) ಹಾಗೂ ರಿಯನ್ ಪರಾಗ್ (2) ನಿರಾಸೆ ಮೂಡಿಸಿದರು.

ಕೊನೆಯ ಹಂತದಲ್ಲಿ ನಾಯಕ ಸಂಜು ಸ್ಯಾಮ್ಸನ್ ದಿಟ್ಟ ಹೋರಾಟ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಆರು ವಿಕೆಟ್ ನಷ್ಟಕ್ಕೆ 121 ರನ್ ಗಳಿಸಲಷ್ಟೇ ಶಕ್ತವಾಗಿತ್ತು. 53 ಎಸೆತಗಳನ್ನು ಎದುರಿಸಿದ ಸಂಜು ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 70 ರನ್ ಗಳಿಸಿ ಅಜೇಯರಾಗುಳಿದರು.

ಬಳಿಕ ಕ್ರೀಸಿಗಿಳಿದ ಶಿಮ್ರೊನ್ ಹೆಟ್ಮೆಯೆರ್ ಬಿರುಸಿನ ಬ್ಯಾಟಿಂಗ್ ಮೂಲಕ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಿದರು. 16 ಎಸೆತಗಳನ್ನು ಎದುರಿಸಿದ ಹೆಟ್ಮೆಯೆರ್ ಐದು ಬೌಂಡರಿಗಳ ನೆರವಿನಿಂದ 28 ರನ್ ಗಳಿಸಿದರು.

Leave a Reply

Your email address will not be published. Required fields are marked *