Tuesday, 13th May 2025

ಡೆಲ್ಲಿಯೆದುರು ಸನ್‌ರೈಸರ‍್ಸ್ ಮಂಕು

ನವದೆಹಲಿ: ಡೇವಿಡ್ ವಾರ್ನರ್ ಹಾಗೂ ರೋವ್ಮನ್ ಪೊವೆಲ್ ಭರ್ಜರಿ ಆಟವು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸನ್ ರೈಸರ್ಸ್ ಹೈದರಾ ಬಾದ್ ತಂಡದ ವಿರುದ್ದ 21 ರನ್ ಗಳ ಜಯ ತಂದಿತ್ತಿತು.

ವಾರ್ನರ್ ಗರಿಷ್ಠ ಸ್ಕೋರ್ (58 ಎಸೆತಗಳಲ್ಲಿ 92 ರನ್) ಗಳಿಸಿದ್ದಾರೆ. ರೋವ್ಮನ್ ಪೊವೆಲ್ (35 ಎಸೆತಗಳಲ್ಲಿ 67 ರನ್ ಗಳಿಸಿದ್ದು, ವಾರ್ನರ್-ಪೋವೆಲ್ 122 ರನ್ ಗಳ ಜೊತೆಯಾಟ ತಂಡಕ್ಕೆ ನೀಡಿದ್ದರು.

10 ಪಂದ್ಯಗಳಿಂದ ಡೆಲ್ಲಿ ಕ್ಯಾಪಿಟಲ್ಸ್ 10 ಪಾಯಿಂಟ್ ಗಳನ್ನು ಗಳಿಸಿದೆ. 208 ರನ್ ಗಳ ಕಠಿಣ ಸನ್ ರೈಸರ್ಸ್ ಆರಂಭದಲ್ಲೇ, ಅಭಿ ಷೇಕ್ ಶರ್ಮಾ (6 ಎಸೆತಗಳಲ್ಲಿ 7 ರನ್), ಕೇನ್ ವಿಲಿಯಮ್ಸ್ (11 ಎಸೆತಗಳಲ್ಲಿ 4 ರನ್) ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತ ಎದುರಿಸಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಡೆಲ್ಲಿ ತಂಡದ ಬೌಲರ್ ಗಳ ಎದುರು ಮಂಕಾದರು. ಪರಿಣಾಮ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟ ಎದುರಿಸಿ 186 ರನ್ ಗಳಿಸಲಷ್ಟೇ ಸಾಧ್ಯವಾಯಿತು.