Monday, 12th May 2025

ಪ್ರಾಯೋಜಕ ಸಂಸ್ಥೆ ಎಂಪಿಎಲ್ ಸ್ಪೋರ್ಟ್ಸ್ ಜತೆ ಬಿಸಿಸಿಐ ಒಪ್ಪಂದ

ನವದೆಹಲಿ: ಎಂಪಿಎಲ್ ಸ್ಪೋರ್ಟ್ಸ್ ಸಂಸ್ಥೆ ಟೀಮ್ ಇಂಡಿಯಾದ ಅಧಿಕೃತ ಕಿಟ್ ಪ್ರಾಯೋಜಕ ಸಂಸ್ಥೆ ಎಂದು ಬಿಸಿಸಿಐ ಪ್ರಕಟಿಸಿದೆ. ಮೂರು ವರ್ಷಗಳ ಒಪ್ಪಂದದ ಭಾಗವಾಗಿ, ಎಂಪಿಎಲ್ ಸ್ಪೋರ್ಟ್ಸ್ ವಿನ್ಯಾಸಗೊಳಿಸಿ ತಯಾರಿಸಿದ ಜರ್ಸಿಯನ್ನು ಪುರುಷ, ಮಹಿಳಾ ಮತ್ತು 19 ವರ್ಷದೊಳಗಿನವರ ಭಾರತೀಯ ಕ್ರಿಕೆಟ್ ಟೀಮ್ ಗಳು ಧರಿಸುತ್ತವೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿದೆ.

ಭಾರತದ ಅತಿದೊಡ್ಡ ಕ್ರೀಡಾ ವೇದಿಕೆಯಾಗಿರುವ ಮೊಬೈಲ್ ಪ್ರೀಮಿಯರ್ ಲೀಗ್‌(ಎಂಪಿಎಲ್) ಕ್ರೀಡಾಪಟುಗಳ ಉಡುಗೆ ಮತ್ತು ಕ್ರೀಡಾ ಸರಕುಗಳ ಬ್ರಾಂಡ್ ಸ್ಪೋರ್ಟ್ಸ್‌ನ ಸಹಭಾಗಿತ್ವವನ್ನು ಭಾರತ ಕ್ರಿಕೆಟ್‌ನ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಘೋಷಿಸಿದೆ. ಭಾರತೀಯ ಕ್ರಿಕೆಟ್‌ನ ಹೊಸ ಕಿಟ್ ಪ್ರಾಯೋಜಕರು ಮತ್ತು ಅಧಿಕೃತ ವಾಣಿಜ್ಯ ಪಾಲುದಾರ ಸಂಸ್ಥೆ ಎಂದು ಬಿಸಿಸಿಐ ಎಂಪಿಎಲ್ ಅನ್ನು ಹೆಸರಿಸಿದೆ.

ಬಿಸಿಸಿಐನೊಂದಿಗೆ ಎಂಪಿಎಲ್ ಸ್ಪೋರ್ಟ್ಸ್ ನವೆಂಬರ್ 2020 ರಿಂದ ಡಿಸೆಂಬರ್ 2023 ರವರೆಗೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದ ಮುಂಬರುವ ಭಾರತದ ಆಸ್ಟ್ರೇಲಿಯಾ ಪ್ರವಾಸ, 2020-21ರಿಂದ ಪ್ರಾರಂಭವಾಗಲಿದೆ. ಇದು ಟೀಂ ಇಂಡಿಯಾ ಹೊಸ ಜರ್ಸಿ ಧರಿಸಿ ಆಡಲಿರುವ ಮೊದಲ ಟೂರ್ನಿಯಾಗಿರಲಿದೆ.

ಸೀನಿಯರ್ ಪುರುಷ ಹಾಗೂ ಮಹಿಳಾ ತಂಡ ಹಾಗೂ 9 ವರ್ಷದೊಳಗಿನ ತಂಡಗಳು ಸಹ ಹೊಸ ಕಿಟ್‌ಗಳ ಒಪ್ಪಂದದ ಒಂದು ಭಾಗವಾಗಿದೆ. ಟೀಮ್ ಇಂಡಿಯಾ ಜರ್ಸಿಗಳಲ್ಲದೆ, ಎಂಪಿಎಲ್ ಸ್ಪೋರ್ಟ್ಸ್ ಪರವಾನಗಿ ಪಡೆದ ಟೀಮ್ ಇಂಡಿಯಾ ಉತ್ಪನ್ನಗಳನ್ನು ಸಹ ಮಾರಾಟ ಮಾಡುತ್ತದೆ. ಎಂಪಿಎಲ್ ಸ್ಪೋರ್ಟ್ಸ್ ಜರ್ಸಿ ಮತ್ತು ಅದರ ವ್ಯಾಪಕ ಶ್ರೇಣಿಯ ಟೀಮ್ ಇಂಡಿಯಾ ಉತ್ಪನ್ನಗಳನ್ನು ಅಭಿಮಾನಿಗಳಿಗೆ ಕೈಗೆಟುಕುವ ಬೆಲೆಯಲ್ಲಿ ನೀಡಲಿದೆ. “ಈ ಸಹಭಾಗಿತ್ವವು ಟೀಮ್ ಇಂಡಿಯಾ ಮತ್ತು ದೇಶದಲ್ಲಿ ಕ್ರೀಡಾ ವ್ಯಾಪಾರ, ವ್ಯವಹಾರದಲ್ಲಿ ಹೊಸ ಮಜಲಿನೆಡೆ ನಮ್ಮನ್ನು ಕರೆದೊಯ್ಯುತ್ತದೆಈ ಸಹಭಾಗಿತ್ವವು ದೇಶದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಕ್ರಿಕೆಟ್ ಅಭಿಮಾನಿಗಳಿಗೆ ಅಪೇಕ್ಷಿತ ಭಾರತೀಯ ಕ್ರಿಕೆಟ್ ತಂಡದ ಜರ್ಸಿ ಸೇರಿದಂತೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪಡೆಯಲು ಅನುಕೂಲವಾಗಿದೆ ‘ಎಂದು ಬಿಸಿಸಿಐನ ಗೌರವ ಕಾರ್ಯದರ್ಶಿ ಜೈ ಶಾ ಹೇಳಿದರು.

Leave a Reply

Your email address will not be published. Required fields are marked *