ಹ್ಯಾಮಿಲ್ಟನ್‌ನ ಸೆಡಾನ್ ಪಾರ್ಕ್‌ನಲ್ಲಿ ಬಾಂಗ್ಲಾದೇಶದ ಆಟಗಾರ್ತಿಯರು ಇತಿಹಾಸ ನಿರ್ಮಿಸಿದರು. ಬಾಂಗ್ಲಾದೇಶವು ಪಾಕಿ ಸ್ತಾನವನ್ನು 9 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 234 ರನ್ ಗಳಿಸಿತು. ಒಂದು ಹಂತದಲ್ಲಿ ಗೆಲುವಿಗೆ ಸನಿಹದಲ್ಲಿದ್ದ ಪಾಕಿಸ್ತಾನ ಅಂತಿಮವಾಗಿ 50 ಓವರ್‌ಗಳಲ್ಲಿ 225 ರನ್ ಗಳಿಸಲಷ್ಟೇ ಶಕ್ತವಾ ಯಿತು.
ಬಾಂಗ್ಲಾದೇಶದ ಗೆಲುವಿನಲ್ಲಿ ಫಾತಿಮಾ ಖಾತೂನ್ ಪ್ರಮುಖ ಪಾತ್ರ ವಹಿಸಿ ದ್ದರು. ಫಾತಿಮಾ ಬೌಲಿಂಗ್‌ನಲ್ಲಿ 38 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಬಾಂಗ್ಲಾದೇಶಕ್ಕೆ ಐತಿಹಾಸಿಕ ಗೆಲುವು ನೀಡಿದರು.
ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡವು ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿದ್ದು, ಈ ಪಂದ್ಯಾವಳಿಯಲ್ಲಿ ಮೊದಲ ಗೆಲುವು ಸಾಧಿಸಿದೆ.
ಬಾಂಗ್ಲಾದೇಶದ ಪುರುಷರ ತಂಡವು 1999 ರಲ್ಲಿ ತಮ್ಮ ಮೊದಲ ವಿಶ್ವಕಪ್ ಆಡಿತ್ತು. ತಮ್ಮ ಮೊದಲ ಗೆಲುವನ್ನು ತಂಡವು ಮೂರನೇ ಪಂದ್ಯದಲ್ಲಿ ದಾಖಲಿಸಿತ್ತು. ಪುರುಷರ ತಂಡ 1999ರಲ್ಲಿ ಸ್ಕಾಟ್ಲೆಂಡ್ ತಂಡವನ್ನು 22 ರನ್‌ಗಳಿಂದ ಸೋಲಿಸಿತ್ತು. ಮಹಿಳಾ ತಂಡವು ತನ್ನ ಮೊದಲ ವಿಶ್ವಕಪ್‌ನ ಮೂರನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಮೊದಲ ಗೆಲುವು ದಾಖಲಿಸಿದೆ.
ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡ ಪಾಕಿಸ್ತಾನವನ್ನು ಸೋಲಿಸಿದ ತಕ್ಷಣ ಅಂಕಪಟ್ಟಿಯಲ್ಲಿ ಇಂಗ್ಲೆಂಡ್‌ಗಿಂತ ಮೇಲಕ್ಕೆ ಏರಿದೆ. ಇಂಗ್ಲೆಂಡ್ ಇದುವರೆಗೆ 3 ಪಂದ್ಯಗಳಲ್ಲಿ ಸೋಲು ಕಂಡಿದ್ದು, ಬಾಂಗ್ಲಾದೇಶ ತನ್ನ ಖಾತೆ ತೆರೆದು ಆರನೇ ಸ್ಥಾನ ಪಡೆದುಕೊಂಡಿದೆ.