Wednesday, 14th May 2025

ಮರಳಿದ ಅಕ್ಷರ್ ಪಟೇಲ್, ಕುಲದೀಪ್‌ ಹೊರಕ್ಕೆ

ನವದೆಹಲಿ : ಆಲ್ರೌಂಡರ್ ಅಕ್ಸರ್ ಪಟೇಲ್ ಫಿಟ್ನೆಸ್ʼಗೆ ಮರಳಿದ್ದು, ಶ್ರೀಲಂಕಾ ಸರಣಿಗಾಗಿ ಭಾರತೀಯ ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಶನಿವಾರದಿಂದ ಬೆಂಗಳೂರಿನಲ್ಲಿ ಆರಂಭವಾಗಲಿರುವ ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ʼಗೆ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಸ್ಥಾನವನ್ನ ಅಕ್ಸರ್ ತುಂಬಿದ್ದಾರೆ. ಭಾರತ ತಂಡದ ಆಡಳಿತ ಮಂಡಳಿ ಕುಲದೀಪ್ ಅವರನ್ನ ತಂಡದಿಂದ ಬಿಡುಗಡೆ ಮಾಡಿದೆ.

ಅಕ್ಸರ್ ಪಟೇಲ್‌, ಗಾಯದಿಂದ ಬಳಲುತ್ತಿದ್ದು, ದಕ್ಷಿಣ ಆಫ್ರಿಕಾ ಪ್ರವಾಸ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಮುಂದಿನ ಟಿ20 ಸರಣಿಯನ್ನು ತಪ್ಪಿಸಿಕೊಂಡರು. ಇದಲ್ಲದೆ, ಕೋವಿಡ್-19 ಗೆ ಪಾಸಿಟಿವ್ ಪರೀಕ್ಷೆ ನಡೆಸಿದ್ದರು.

‘ಅಕ್ಸರ್ ಮೊದಲ ಆಯ್ಕೆಯಾಗಿದ್ದರೂ ಗಾಯದಿಂದ ಹೊರ ಉಳಿದಿದರು. ಸಧ್ಯ ಗುಣಮುಖರಾಗಿದ್ದು, ಕುಲದೀಪ್ ಬ್ಯಾಕ್ ಅಪ್ ಆಗಿದ್ದರು’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.