Wednesday, 14th May 2025

ಬಾಕ್ಸಿಂಡ್ ಡೇ ಟೆಸ್ಟ್’ನಲ್ಲಿ ಆಸೀಸ್‌ 195ಕ್ಕೆ ಪತನ

ಮೆಲ್ಬರ್ನ್: ಭಾರತದ ಎದುರು ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 72.3 ಓವರ್‌ಗಳಲ್ಲಿ 195 ರನ್‌ ಗಳಿಸಿ ಆಲೌಟ್‌ ಆಗಿದೆ. ಉತ್ತರ ನೀಡಲಾರಭಿಸಿದ ಭಾರತಕ್ಕೆ ಮಯಾಂಕ್ ಅಗರ್ವಾಲ್‌ ಈ ಬಾರಿ ಶೂನ್ಯಕ್ಕೆ ಔಟಾಗುವ ಮೂಲಕ ಮತ್ತೊಮ್ಮೆ ಅವಕಾಶ ಕೈಚೆಲ್ಲಿದರು.

ಇತ್ತೀಚಿನ ವರದಿ ಬಂದಾಗ, ಶುಬ್ಮನ್‌ ಗಿಲ್‌ ಮತ್ತು ಉಪನಾಯಕ ಚೇತೇಶ್ವರ ಪೂಜಾರ ಬ್ಯಾಟಿಂಗ್‌ ಮುಂದುವರಿಸಿದ್ದಾರೆ. ಈ ಪೈಕಿ ಗಿಲ್‌ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸುತ್ತಿದ್ದು, ಈಗಾಗಲೇ ನಾಲ್ಕು ಬೌಂಡರಿ ಚಚ್ಚಿದ್ದಾರೆ.

ಶನಿವಾರ ಆರಂಭವಾಗಿರುವ ಆಸ್ಟ್ರೇಲಿಯಾ ಎದುರಿನ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತದ ಸ್ಪಿನ್ನರ್ ಆರ್‌. ಅಶ್ವಿನ್‌ ಮೂರು, ವೇಗಿ ಜಸ್‌ಪ್ರೀತ್ ಬೂಮ್ರಾ ನಾಲ್ಕು ವಿಕೆಟ್‌ ಪಡೆದು ಮಿಂಚಿದರು.

ಆಸ್ಟ್ರೇಲಿಯಾ ಪರ ಆರಂಭಿಕ ಜೋ ಬರ್ನ್ಸ್ ಅವರನ್ನು ರನ್‌ ಖಾತೆ ತೆರೆಯುವ ಮುನ್ನ ಬೂಮ್ರಾ ಪೆವಿಲಿಯನ್‌ ಹಾದಿ ತೊರಿಸಿದರು. ಮ್ಯಾಥ್ಯೂ ವೇಡ್ 30, ಮಾರ್ನಸ್ ಲಾಬು ಷೇನ್ 48, ಟ್ರಾವಿಸ್ ಹೆಡ್ 38, ಟ್ರಾವಿಸ್ ಹೆಡ್ 38 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ವೇಡ್‌ ಹಾಗೂ ಸ್ಟೀವ್‌ ಸ್ಮಿತ್‌ (00) ವಿಕೆಟ್‌ ಪಡೆಯುವಲ್ಲಿ ಅಶ್ವಿನ್‌ ಯಶಸ್ವಿಯಾದರು. ಭಾರತದ ಪರ ಮೊಹಮ್ಮದ್ ಸಿರಾಜ್ 2 ರವೀಂದ್ರ ಜಡೇಜ 1 ವಿಕೆಟ್‌ ಪಡೆದಿದ್ದಾರೆ.

ನಾಲ್ಕು ಪಂದ್ಯಗಳ ಬಾರ್ಡರ್‌-ಗಾವಸ್ಕರ್ ಸರಣಿಯಲ್ಲಿ ಆತಿಥೇಯರು 1-0 ಮುನ್ನಡೆ ಸಾಧಿಸಿದ್ದಾರೆ.

Leave a Reply

Your email address will not be published. Required fields are marked *