Monday, 12th May 2025

ಟೆಸ್ಟ್ ಶ್ರೇಯಾಂಕ: ಅಶ್ವಿನ್, ಮಯಾಂಕ್, ಅಜಾಜ್‌’ಗೆ ಬಡ್ತಿ

ನವದೆಹಲಿ : ಟೆಸ್ಟ್ ಶ್ರೇಯಾಂಕ ಐಸಿಸಿ ಬುಧವಾರ ಹೊರಡಿಸಿದ್ದು, ಭಾರತದ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್  ಎರಡನೇ ಸ್ಥಾನಕ್ಕೆ ಏರಿದರೆ, ಆರಂಭಿಕ ಮಯಾಂಕ್ ಅಗರ್ವಾಲ್, ನ್ಯೂಜಿಲ್ಯಾಂಡ್ ಸ್ಪಿನ್ನರ್ ಅಜಾಜ್ ಪಟೇಲ್ ಅವರೊಂದಿಗೆ ಶ್ರೇಯಾಂಕದಲ್ಲಿ ಭಾರಿ ಪ್ರಗತಿ ಸಾಧಿಸಿದ್ದಾರೆ.

ಮುಂಬೈನ ಎರಡನೇ ಟೆಸ್ಟ್ʼನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಯತ್ನದಲ್ಲಿ ಅಗರ್ವಾಲ್, 150 ಮತ್ತು 62 ರನ್ ಗಳಿಸಿದ್ದಾರೆ. ಈ ಮೂಲಕ ಪುರುಷರ ಶ್ರೇಯಾಂಕ ದಲ್ಲಿ 11ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಮೊದಲ ಬಾರಿಗೆ ವೃತ್ತಿ ಜೀವನದ ಅತ್ಯುತ್ತಮ 10ನೇ ಸ್ಥಾನಕ್ಕಿಂತ ಕೇವಲ ಒಂದು ಸ್ಥಾನ ಕೆಳಗಿದ್ದಾರೆ.

ಟೆಸ್ಟ್‌ನಲ್ಲಿ ಮ್ಯಾಜಿಕ್‌ ಮಾಡಿದ ಎಜಾಜ್‌ ಪಟೇಲ್, ಜಿಮ್ ಲೇಕರ್ ಮತ್ತು ಅನಿಲ್ ಕುಂಬ್ಳೆ ಅವರನ್ನ ಅನುಕರಿಸಿ ಟೆಸ್ಟ್ ಇನ್ನಿಂಗ್ಸ್ʼ ನಲ್ಲಿ ಎಲ್ಲಾ 10 ವಿಕೆಟ್ʼಗಳನ್ನ ಪಡೆದ ಮೂರನೇ ಆಟಗಾರ ಅನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ 38ನೇ ಸ್ಥಾನದಿಂದ 23ನೇ ಸ್ಥಾಕ್ಕೇರಿದ್ದಾರೆ.