Monday, 12th May 2025

ವೇಟ್‌ಲಿಫ್ಟರ್ ʻಅಚಿಂತಾ ಶೆಯುಲಿʼಗೆ ಚಿನ್ನದ ಪದಕ: ಮೋದಿ ಶ್ಲಾಘನೆ

ನವದೆಹಲಿ: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022 ರ ಪುರುಷರ 73 ಕೆಜಿ ವಿಭಾಗದ ಫೈನಲ್‌ ನಲ್ಲಿ ಚಿನ್ನದ ಪದಕವನ್ನು ಗೆದ್ದ ವೇಟ್‌ಲಿಫ್ಟರ್ ʻಅಚಿಂತಾ ಶೆಯುಲಿʼಗೆ ಪ್ರಧಾನಿ ನರೇಂದ್ರ ಮೋದಿ ಯುವ ಅಥ್ಲೀಟ್‌ಅನ್ನು ಶ್ಲಾಘಿಸಿದ್ದಾರೆ.

ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ʻಪ್ರತಿಭಾವಂತ ಅಚಿಂತಾ ಶೆಯುಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿ ರುವುದು ಸಂತಸ ತಂದಿದೆ. ಅವರ ಶಾಂತ ಸ್ವಭಾವ ಮತ್ತು ಸ್ಥಿರತೆಗೆ ಹೆಸರುವಾಸಿಯಾಗಿದ್ದಾರೆ.

ಈ ವಿಶೇಷ ಸಾಧನೆಗಾಗಿ ತುಂಬಾ ಶ್ರಮಿಸಿದ್ದಾರೆ. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳುʼ ಎಂದಿದ್ದಾರೆ.