Thursday, 15th May 2025

179 ರನ್ನಿಗೆ ಮಕಾಡೆ ಮಲಗಿದ ನೆದರ್ಲೆಂಡ್ಸ್

ಲಖನೌ: ಐಸಿಸಿ ವಿಶ್ವಕಪ್ ಕ್ರಿಕೆಟ್ 2023ರ 34ನೇ ಪಂದ್ಯದಲ್ಲಿ ಟಾಸ್​ ಗೆದ್ದ ನೆದರ್ಲೆಂಡ್ಸ್ ಬ್ಯಾಟಿಂಗ್​ ಆಯ್ದುಕೊಂಡಿತು.

ಇತ್ತೀಚಿನ ವರದಿ ಪ್ರಕಾರ, ನೆದರಲ್ಯಾಂಡ್ ತಂಡ 46.3 ಓವರಿನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 179 ಗಳಿಸಿ, ಅಫ್ಘಾನಿಸ್ತಾನಕ್ಕೆ ಸುಲಭದ ಗುರಿ ನೀಡಿದೆ. ಅಫ್ಘಾನಿಸ್ತಾನದ ಕ್ಷೇತ್ರ ರಕ್ಷಣೆಗೆ ನಾಲ್ಕು ವಿಕೆಟ್ ರನೌಟ್ ರೂಪದಲ್ಲಿ ಉರುಳಿದೆ.  ಮೊಹಮ್ಮದ್ ನಬಿ ಮೂರು ವಿಕೆಟ್ ಕಿತ್ತರು. ನೆದರಲ್ಯಾಂಡ್ ಪರ ಸೈಬ್ರಂಡ್ ಏಕೈಕ ಅರ್ಧಶತಕ (58) ಬಾರಿಸಿದರೆ, ಆರು ಮಂದಿ ಸಿಂಗಲ್ ಡಿಜಿಟ್ ಗೆ ಸಾಕೆಂದರು.

ನೆದರ್ಲೆಂಡ್ಸ್ ತಂಡದಲ್ಲಿ ಬದಲಾವಣೆ ಮಾಡಲಾಗಿತ್ತು. ವಿಕ್ರಮಜೀತ್ ಬದಲಿಗೆ ಬ್ಯಾರೆಸಿ ಸ್ಥಾನ ಪಡೆದಿದ್ದಾರೆ. ನಾಲ್ವರು ಸ್ಪಿನ್ನರ್‌ಗಳೊಂದಿಗೆ ಅಫ್ಘಾನಿಸ್ತಾನ ಮೈದಾನಕ್ಕಿಳಿಯಲಿದೆ.

ಹಶ್ಮತುಲ್ಲಾ ಶಾಹಿದಿ ನೇತೃತ್ವದ ಟೀಂ ಇದುವರೆಗೆ ಮೂರು ಪಂದ್ಯ ಗೆದ್ದಿದ್ದು, ನಾಲ್ಕನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಅಫ್ಘಾನಿಸ್ತಾನವು ಹಾಲಿ ಚಾಂಪಿಯನ್ ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾವನ್ನೂ ಸೋಲಿಸಿ ಗಮನ ಸೆಳೆದಿದೆ.

ಪಾಯಿಂಟ್ ಪಟ್ಟಿಯಲ್ಲಿ ಅಫ್ಘಾನಿಸ್ತಾನ ಆರನೇ ಸ್ಥಾನದಲ್ಲಿದ್ದು, ಸೆಮಿಫೈನಲ್ ರೇಸ್‌ನಲ್ಲಿದೆ. ಈ ತಂಡದ ಖಾತೆಯಲ್ಲಿ 6 ಅಂಕಗಳಿವೆ. ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ನೆದರ್ಲೆಂಡ್ಸ್‌ ನಾಲ್ಕು ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.

ಅಫ್ಘಾನಿಸ್ತಾನ 11ರ ಬಳಗ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ರಹಮತ್ ಷಾ, ನಾಯಕ ಹಶ್ಮತುಲ್ಲಾ ಶಾಹಿದಿ, ಅಜ್ಮತುಲ್ಲಾ ಒಮರ್ಜಾಯ್, ವಿಕೆಟ್​ ಕೀಪರ್​ ಇಕ್ರಮ್ ಅಲಿಖಿಲ್, ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ, ನೂರ್ ಅಹ್ಮದ್..

ನೆದರ್ಲೆಂಡ್ಸ್ 11ರ ಬಳಗ: ವೆಸ್ಲಿ ಬ್ಯಾರೆಸಿ, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಸೈಬ್ರಾಂಡ್ ಎಂಗಲ್ಬ್ರೆಕ್ಟ್, ವಿಕೆಟ್​ ಕೀಪರ್​ ಮತ್ತು ನಾಯಕ ಸ್ಕಾಟ್ ಎಡ್ವರ್ಡ್ಸ್, ಬಾಸ್ ಡಿ ಲೀಡೆ, ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್..

Leave a Reply

Your email address will not be published. Required fields are marked *