Thursday, 15th May 2025

ಕನ್ನಡಿಗನಿಗೆ 11ನೇ ಶ್ರೇಯಾಂಕ

ಐಸಿಸಿ ಟೆಸ್‌ಟ್‌ ರ್ಯಾಾಂಕಿಂಗ್: ವೃತ್ತಿ ಜೀವನದ ಶ್ರೇಷ್ಠ ರ್ಯಾಾಂಕಿಂಗ್ ಪಡೆದ ಶಮಿ, ಅಗರ್ವಾಲ್ ಜಡೇಜಾಗೆ ಬಂಪರ್ ಅಶ್ವಿನ್‌ಗೆ 10ನೇ ಸ್ಥಾನ

ದುಬೈ:
ಬಾಂಗ್ಲಾಾದೇಶ ವಿರುದ್ಧ ಮೊದಲನೇ ಟೆಸ್‌ಟ್‌ ಪಂದ್ಯದಲ್ಲಿ ಭಾರತ, ಇನಿಂಗ್‌ಸ್‌ ಹಾಗೂ 130 ರನ್ ಜಯ ಸಾಧಿಸುವಲ್ಲಿ ನೆರವಾಗಿದ್ದ ಆರಂಭಿಕ ಮಯಾಂಕ್ ಅಗರ್ವಾಲ್ ಹಾಗೂ ವೇಗಿ ಮೊಹಮ್ಮದ್ ಶಮಿ ಅವರು ಭಾನುವಾರ ಬಿಡುಗಡೆಯಾಗಿರುವ ಐಸಿಸಿ ಶ್ರೇಯಾಂಕದಲ್ಲಿ ವೃತ್ತಿಿ ಜೀವನದ ಶ್ರೇಷ್ಠ ರ್ಯಾಾಂಕಿಂಗ್ ಪಡೆದಿದ್ದಾಾರೆ. ಬ್ಯಾಾಟಿಂಗ್ ವಿಭಾಗದಲ್ಲಿ ಸ್ಟೀವನ್ ಸ್ಮಿಿತ್ ಅಗ್ರ ಸ್ಥಾಾನವನ್ನು ಕಾಪಾಡಿಕೊಂಡಿದ್ದರೆ, ಟೀಮ್ ಇಂಡಿಯಾ ನಾಯಕ ಎರಡನೇ ಸ್ಥಾಾನದಲ್ಲಿ ಮುಂದುವರಿದಿದ್ದಾಾರೆ.

ಮಿಂಚಿನ ದಾಳಿ ನಡೆಸಿದ್ದ ಮೊಹಮ್ಮದ್ ಶಮಿ ಮೊದಲನೇ ಇನಿಂಗ್‌ಸ್‌‌ನಲ್ಲಿ 37 ಕ್ಕೆೆ 3 ಹಾಗೂ ಎರಡನೇ ಇನಿಂಗ್‌ಸ್‌ ನಲ್ಲಿ 31 ಕ್ಕೆೆ 4 ವಿಕೆಟ್ ಪಡೆದುಕೊಂಡಿದ್ದರು. ರ್ಯಾಾಂಕಿಂಗ್‌ನಲ್ಲಿ ಎಂಟು ಸ್ಥಾಾನ ಏರಿಕೆ ಕಂಡಿರುವ ಶಮಿ ಏಳನೇ ಶ್ರೇಯಾಂಕ ಪಡೆದಿದ್ದಾಾರೆ. ಅಲ್ಲದೇ, ಕಪಿಲ್ ದೇವ್ (877), ಜಸ್ಪ್ರಿತ್ ಬುಮ್ರಾಾ (832) ಬಳಿಕ ಮೊಹಮ್ಮದ್ ಶಮಿ(790) ಅತಿ ಹೆಚ್ಚು ಅಂಕ ಪಡೆದ ಭಾರತದ ಮೂರನೇ ಬೌಲರ್ ಎಂಬ ಗೌರವಕ್ಕೆೆ ಭಾಜನರಾದರು.

ಪ್ರಥಮ ಇನಿಂಗ್‌ಸ್‌ ದೀರ್ಘ ಕಾಲ ಬ್ಯಾಾಟಿಂಗ್ ಮಾಡಿದ್ದ ಕರ್ನಾಟಕದ ಮಾಯಾಂಕ್ ಅಗರ್ವಾಲ್ 243 ರನ್ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಿಗೆ ಪಾತ್ರರಾಗಿದ್ದರು. 28ರ ಪ್ರಾಾಯದ ಬಲಗೈ ಬ್ಯಾಾಟ್‌ಸ್‌‌ಮನ್ ಎಂಟು ಟೆಸ್‌ಟ್‌ ಪಂದ್ಯಗಳಿಂದ 858 ರನ್ ಕಲೆ ಹಾಕಿದ್ದಾಾರೆ. ಶ್ರೇಯಾಂಕದಲ್ಲಿ 691 ಅಂಕಗಳನ್ನು ಪಡೆಯುವ ಮೂಲಕ 11ನೇ ಸ್ಥಾಾನಕ್ಕೇರಿದ್ದಾಾರೆ.

ವೃತ್ತಿಿ ಜೀವನದಲ್ಲಿ ಆಡಿದ ಮೊದಲ ಎಂಟು ಪಂದ್ಯಗಳಿಂದ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಏಳನೇ ಬ್ಯಾಾಟ್‌ಸ್‌‌ಮನ್ ಆಗಿ ಮಯಾಂಕ್ ಅಗರ್ವಾಲ್ ಹೊರಹೊಮ್ಮಿಿದ್ದಾಾರೆ. ಡಾನ್ ಬ್ರಾಾಡ್ಮನ್ (1210) ಅಗ್ರ ಸ್ಥಾಾನದಲ್ಲಿದ್ದಾಾರೆ. ನಂತರದ ಸ್ಥಾಾನಗಳಲ್ಲಿ ಕ್ರಮವಾಗಿ ಎವೆರ್ಟನ್ ವೀಕ್‌ಸ್‌ (968), ಸುನೀಲ್ ಗವಾಸ್ಕರ್ (938), ಮಾರ್ಕ್ ಟೇಲರ್ (906), ಜಾರ್ಜ್ ಹೆಡ್ಲಿಿ (904), ಫ್ರಾಾಂಕ್ ವೊರೆಲ್ (890) ಹಾಗೂ ಹೆಬರ್ಟ್ (872 ) ಇದ್ದಾಾರೆ.

ಐಸಿಸಿ ಶ್ರೇಯಾಂಕದಲ್ಲಿ ಭಾರತದ ಪಾಲಿಗೆ ಮತ್ತೊೊಂದು ಮಹತ್ತರ ಬದಲಾವಣೆ ಎಂದರೆ ರವೀಂದ್ರ ಜಡೇಜಾ ಬ್ಯಾಾಟಿಂಗ್ ವಿಭಾಗದಲ್ಲಿ ನಾಲ್ಕು ಸ್ಥಾಾನ ಜಿಗಿದು ಲಬುಸ್‌ಚಗ್ನೆೆ ಅವರೊಂದಿಗೆ 35ನೇ ಸ್ಥಾಾನವನ್ನು ಹಂಚಿಕೊಂಡಿದ್ದಾಾರೆ. ವೇಗಿಗಳಾದ ಇಶಾಂತ್ ಶರ್ಮಾ (20) ಹಾಗೂ ಉಮೇಶ್ ಯಾದವ್ (22) ಅವರು ಒಂದೊಂದು ಸ್ಥಾಾನ ಏರಿಕೆ ಕಂಡಿದ್ದಾಾರೆ.

ಆಫ್ ಸ್ಪಿಿನ್ನರ್ ರವೀಂದ್ರ ಜಡೇಜಾ ಅವರು ಬೌಲಿಂಗ್ ವಿಭಾಗದಲ್ಲಿ ಅಗ್ರ 10ರೊಳಗೆ ಸ್ಥಾಾನ ಪಡೆದಿದ್ದಾಾರೆ. ಆಲ್‌ರೌಂಡರ್ ವಿಭಾಗದಲ್ಲಿ ಮತ್ತೇ ನಾಲ್ಕನೇ ಸ್ಥಾಾನಕ್ಕೆೆ ಮರಳಿದ್ದಾಾರೆ.
ಬಾಂಗ್ಲಾಾದೇಶದ ಮುಷ್ಫಿಿಕರ್ ರಹೀಮ್ ಅವರು 43 ಹಾಗೂ 64 ರನ್ ಸಿಡಿಸಿದ ಫಲವಾಗಿ ಐದು ಸ್ಥಾಾನಗಳಲ್ಲಿ ಜಿಗಿದು 30ನೇ ಶ್ರೇಯಾಂಕ ಪಡೆದಿದ್ದಾಾರೆ. ಲಿಟನ್ ದಾಸ್ 92 ರಿಂದ 86ನೇ ಸ್ಥಾಾನಕ್ಕೆೆ ಜಿಗಿದಿದ್ದಾಾರೆ.
ನಾಲ್ಕು ವಿಕೆಟ್ ಕಿತ್ತ ಅಬು ಝಾಯೆದ್ 18 ಸ್ಥಾಾನಗಳಲ್ಲಿ ಏರಿಕೆ ಕಂಡು 62ನೇ ಶ್ರೇಯಾಂಕ ಪಡೆದರು. ಇದು ಕೇವಲ ಆರು ಟೆಸ್‌ಟ್‌ ಪಂದ್ಯಗಳಿಂದ ಎನ್ನವುದು ವಿಶೇಷ.

ಭಾರತಕ್ಕೆೆ 300 ಅಂಕ
ಭಾರತ ತಂಡ ವಿಶ್ವ ಟೆಸ್‌ಟ್‌ ಚಾಂಪಿಯನ್‌ಶಿಪ್ ಅಂಕಪಟ್ಟಿಿಯಲ್ಲಿ 300 ಅಂಕ ಕಲೆ ಹಾಕಿದ ವಿಶ್ವದ ಮೊದಲ ತಂಡವಾಗಿ ಶನಿವಾರ ಹೊರಹೊಮ್ಮಿಿದೆ. ಅಂಕಪಟ್ಟಿಿಯಲ್ಲಿ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ 60 ಅಂಕಗಳೊಂದಿಗೆ ಎರಡು ಮತ್ತು ಮೂರನೇ ಸ್ಥಾಾನದಲ್ಲಿವೆ. ನಂತರದ ಸ್ಥಾಾನಗಳಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆೆಂಡ್ ತಂಡಗಳಿವೆ.

ಮಯಾಂಕ್ ಅಗರ್ವಾಲ್
ಅಂಕಗಳು: 691
ರ್ಯಾಾಂಕಿಂಗ್: 11

ಮೊಹಮ್ಮದ್ ಶಮಿ
ಅಂಕಗಳು: 790
ರ್ಯಾಾಂಕಿಂಗ್: 7

Leave a Reply

Your email address will not be published. Required fields are marked *