Thursday, 15th May 2025

ಇಂದೋರ್‌ನಲ್ಲಿ ಕನ್ನಡಿಗನ ಪರಾಕ್ರಮ

ಮೊದಲನೇ ಟೆಸ್‌ಟ್‌ ಪಂದ್ಯ: ಭಾರತಕ್ಕೆೆ 343 ರನ್ ಮುನ್ನಡೆ ಪೂಜಾರ, ರಹಾನೆ, ಜಡೇಜಾ ಅರ್ಧಶತಕ ಬಾಂಗ್ಲಾಗೆ

ಇಂದೋರ್:
ಕರ್ನಾಟಕದ ಮಯಾಂಕ್ ಅಗರ್ವಾಲ್ ವೃತ್ತಿ ಜೀವನದ ಎರಡನೇ ದ್ವಿಿಶತಕ ಹಾಗೂ ಅಜಿಂಕ್ಯ ರಹಾನೆ ಮತ್ತು ರವೀಂದ್ರ ಜಡೇಜಾ ಅವರ ಅರ್ಧ ಶತಕಗಳ ಬಲದಿಂದ ಭಾರತ ತಂಡ ಮೊದಲನೇ ಟೆಸ್‌ಟ್‌ ಪಂದ್ಯದ ಪ್ರಥಮ ಇನಿಂಗ್‌ಸ್‌‌ನಲ್ಲಿ ಬೃಹತ್ ಮುನ್ನಡೆ ಸಾಧಿಸಿದೆ.

ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಗ್ಗೆೆ ಒಂದು ವಿಕೆಟ್ ಕಳೆದುಕೊಂಡು 86 ರನ್ ಗಳಿಂದ ಪ್ರಥಮ ಇನಿಂಗ್‌ಸ್‌ ಮುಂದುವರಿಸಿದ ಭಾರತ ತಂಡ, ಎರಡನೇ ದಿನದಾಟ ಮುಕ್ತಾಾಯಕ್ಕೆೆ 114 ಓವರ್‌ಗಳಿಗೆ ವಿಕೆಟ್ ನಷ್ಟಕ್ಕೆೆ 493 ರನ್ ದಾಖಲಿಸಿದೆ. ಇದರೊಂದಿಗೆ 343 ರನ್ ಮುನ್ನಡೆ ಸಾಧಿಸಿತು.

ಎರಡನೇ ದಿನವಾದ ಶುಕ್ರವಾರ ಬೆಳಗ್ಗೆೆ ಬ್ಯಾಾಟಿಂಗ್ ಮುಂದುವರಿಸಿದ ಮಯಾಂಕ್ ಅಗರ್ವಾಲ್ ಹಾಗೂ ಚೇತೇಶ್ವರ ಪೂಜಾರ ಜೋಡಿ ಹೆಚ್ಚು ಹೊತ್ತು ಉಳಿಯಲಿಲ್ಲ. 72 ಎಸೆತಗಳಲ್ಲಿ 9 ಬೌಂಡರಿಯೊಂದಿಗೆ ಅರ್ಧ ಶತಕ ಪೂರೈಸಿದ ಪೂಜಾರ ಇಂದು ಬಹುಬೇಗ ಅಬು ಝಾಯೆದ್ ಗೆ ವಿಕೆಟ್ ಒಪ್ಪಿಿಸಿದರು. ನಂತರ, ಕ್ರೀಸ್‌ಗೆ ಬಂದ ನಾಯಕ ವಿರಾಟ್ ಕೊಹ್ಲಿಿ ಝಾಯೆದ್ ಗೆ ಶೂನ್ಯಕ್ಕೆೆ ಆದರು.

ಎರಡನೇ ದಿನ ಅಂಗಳದಲ್ಲಿ ಹೆಚ್ಚು ಆಕರ್ಷಿತರಾಗಿದ್ದು ದ್ವಿಿಶತಕ ದಾಖಲಿಸಿದ ಮಯಾಂಕ್ ಅಗರ್ವಾಲ್. ಅದ್ಭುತ ಬ್ಯಾಾಟಿಂಗ್ ಮಾಡಿದ ಅವರು, ಬಾಂಗ್ಲಾಾ ಬೌಲರ್‌ಗಳಿಗೆ ಬೆವರಿಳಿಸಿದರು. ಯಾವುದೇ ತಪ್ಪುು ಹೊಡೆತಗಳಿಗೆ ಕೈ ಹಾಕದೆ ಸಮಯೋಜಿತವಾಗಿ ಎದುರಿಸಿದರು. 330 ಎಸೆತಗಳನ್ನು ಆಡಿದ ಅವರು, 243 ರನ್ ಗಳಿಸಿ ವೃತ್ತಿಿ ಜೀವನದ ಎರಡನೇ ದ್ವಿಿಶತಕ ಸಿಡಿಸಿದರು. ಇದರೊಂದಿಗೆ ಕೇವಲ ಎರಡು ತಿಂಗಳು ಅಂತರದಲ್ಲೇ ಎರಡನೇ ದ್ವಿಿಶತಕ ಇದಾಯಿತು.

ಇವರ ಅದ್ಭುತ ಇನಿಂಗ್‌ಸ್‌‌ನಲ್ಲಿ ಎಂಟು ಸಿಕ್ಸರ್ 28 ಬೌಂಡರಿಗಳಿದ್ದವು. ಇದು ಎಂಟನೇ ಪಂದ್ಯವಾಗಿರುವ ಮಯಾಂಕ್ ಅಗರ್ವಾಲ್, ಕೇವಲ 12 ಇನಿಂಗ್‌ಸ್‌ ಗಳಲ್ಲಿ 71.50 ರ ಸರಾಸರಿಯಲ್ಲಿ 858 ರನ್ ಗಳಿಸಿದ್ದಾಾರೆ. ಇವರು ಕಳೆದ ತಿಂಗಳು ವಿಶಾಖಪಟ್ಟಣಂನಲ್ಲಿ ದಕ್ಷಿಿಣ ಆಫ್ರಿಿಕಾ ವಿರುದ್ಧ ವೃತ್ತಿಿ ಜೀವನದ ಚೊಚ್ಚಲ ದ್ವಿಿಶತಕ ಸಿಡಿಸಿದ್ದರು. ಬಾಂಗ್ಲಾಾದೇಶ ವಿರುದ್ಧ ಒಂದೇ ಇನಿಂಗ್‌ಸ್‌‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಾಟ್‌ಸ್‌‌ಮನ್ ಆದರು. ಸಚಿನ್ ತೆಂಡೂಲ್ಕರ್ 2004/05ರ ಆವೃತ್ತಿಿಯಲ್ಲಿ ಬಾಂಗ್ಲಾಾ ವಿರುದ್ಧ 248 ರನ್

ಅಗರ್ವಾಲ್-ರಹಾನೆ ಜುಗಲ್‌ಬಂದಿ:
ನಾಲ್ಕನೇ ವಿಕೆಟ್‌ಗೆ ಜತೆಯಾದ ಮಯಾಂಕ್ ಅಗರ್ವಾಲ್ ಹಾಗೂ ಅಜಿಂಕ್ಯ ರಹಾನೆ ಜೋಡಿ ಅಮೋಘ ಬ್ಯಾಾಟಿಂಗ್ ಪ್ರದರ್ಶನ ನೀಡಿತು. ಎರಡನೇ ದಿನ ಬಹುತೇಕ ಸಮಯ ಕ್ರೀಸ್‌ನಲ್ಲಿ ಕಳೆದ ಈ ಜೋಡಿ ಜವಾಬ್ದಾಾರಿಯುತ ಬ್ಯಾಾಟಿಂಗ್ ಪ್ರದರ್ಶನ ತೋರಿತು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 190 ರನ್ ಗಳಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿತು.
ಎರಡನೇ ದಿನ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿಿ ಅವರ ವಿಕೆಟ್ ಬೇಗ ಮಯಾಂಕ್ ಅಗರ್ವಾಲ್‌ಗೆ ಹೆಚ್ಚು ಸಮಯ ಅಜಿಂಕ್ಯ ರಹಾನೆ ಸಾಥ್ ನೀಡಿದರು. 172 ಎಸೆತಗಳನ್ನು ಎದುರಿಸಿದ ಅವರು, 9 ಬೌಂಡರಿಗಳೊಂದಿಗೆ 86ರನ್ ಗಳಿಸಿದರು. ಅಲ್ಲದೇ, ಟೆಸ್‌ಟ್‌ ಕ್ರಿಿಕೆಟ್‌ನಲ್ಲಿ 4061ರನ್ ಪೂರೈಸಿದರು.

ರಹಾನೆ ಔಟ್ ಆದ ಬಳಿಕ ಮಯಾಂಕ್‌ಗೆ ಮತ್ತೊೊಂದು ತುದಿಯಲ್ಲಿ ರವೀಂದ್ರ ಜಡೇಜಾ ಅತ್ಯುತ್ತಮ ಸಾಥ್ ನೀಡಿದರು. ಈ ಜೋಡಿ ಐದನೇ ವಿಕೆಟ್‌ಗೆ 123 ರನ್ ಕಲೆ ಹಾಕಿತು. ಇತ್ತೀಚೆಗೆ ಬೌಲಿಂಗ್ ಜತೆಗೆ ಬ್ಯಾಾಟಿಂಗ್‌ನಲ್ಲೂ ಮಿಂಚುತ್ತಿಿರುವ ರವೀಂದ್ರ ಜಡೇಜಾ ಶುಕ್ರವಾರ ಸಿಡಿಸಿದರು. ಮಯಾಂಕ್ ಅಗರ್ವಾಲ್‌ಗೆ ಒಂದು ತುದಿಯಲ್ಲಿ ಸಾಥ್ ನೀಡುತ್ತಿಿದ್ದ ಅವರು 76 ಎಸೆತಗಳಲ್ಲಿ ಅಜೇಯ 60 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾಾರೆ. ಮತ್ತೊೊಂದು ತುದಿಯಲ್ಲಿ ಉಮೇಶ್ ಯಾದವ್(25) ಇದ್ದಾಾರೆ.
ಬಾಂಗ್ಲಾಾದೇಶ ಪರ ಅಬು ಝಾಯೆದ್ ನಾಲ್ಕು ವಿಕೆಟ್ ಪಡೆದರೆ, ಎಬಾದತ್ ಹುಸೇನ್ ಹಾಗೂ ಮೆಹಡಿ ಹಸನ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾಾರೆ.

ಸಂಕ್ಷಿಪ್ತ ಸ್ಕೋರ್
ಬಾಂಗ್ಲಾಾದೇಶ
ಪ್ರಥಮ ಇನಿಂಗ್‌ಸ್‌: 150
ಭಾರತ
ಪ್ರಥಮ ಇನಿಂಗ್‌ಸ್‌: 114 ಓವರ್ 493/6 (ಮಯಾಂಕ್ ಅಗರ್ವಾಲ್ 243, ಅಜಿಂಕ್ಯಾಾ ರಹಾನೆ 86, ರವೀಂದ್ರ ಜಡೇಜಾ ಔಟಾಗದೆ 60, ಚೇತೇಶ್ವರ ಪೂಜಾರ 54; ಅಬು ಝಾಯೆದ್ 108 ಕ್ಕೆೆ 4, ಎಬಾದತ್ ಹುಸೇನ್ 115 ಕ್ಕೆೆ 1, ಮೆಹಡಿ ಹಸನ್ 125 ಕ್ಕೆೆ 1)

ಹಿಟ್‌ಮನ್ ದಾಖಲೆ ಸರಿಗಟ್ಟಿಿದ ಮಯಾಂಕ್
ಬಾಂಗ್ಲಾಾದೇಶ ವಿರುದ್ಧ ಮೊದಲ ಟೆಸ್‌ಟ್‌ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮಯಾಂಕ್ ಸರಿಗಟ್ಟಿಿದ್ದಾರೆ. ಸಿಕ್ಸರ್ ಬಾರಿಸಿ ಟೆಸ್‌ಟ್‌ ದಾಖಲಿಸಿದ ಭಾರತದ ಮೊತ್ತ ಮೊದಲ ಬ್ಯಾಾಟ್‌ಸ್‌‌ಮನ್ ಎಂಬ ದಾಖಲೆ ರೋಹಿತ್ ಅವರ ಹೆಸರಲ್ಲಿತ್ತು. ಇದೀಗ ಈ ಸಾಲಿಗೆ ಮಯಾಂಕ್ ಕೂಡ ಸೇರ್ಪಡೆಯಾಗಿದ್ದಾರೆ. ಇನ್ನು ಟೆಸ್‌ಟ್‌ ಇನಿಂಗ್‌ಸ್‌ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ದಾಖಲಿಸಿದ ಭಾರತೀಯರ ಪೈಕಿ ರೋಹಿತ್ ಶರ್ಮಾಗೆ ಸೆಡ್ಡು ಹೊಡೆದು ಮಯಾಂಕ್ ಎರಡನೇ ಸ್ಥಾಾನಕ್ಕೇರಿದ್ದಾರೆ. ಬಾಂಗ್ಲಾಾ ಎದುರು ಮಯಾಂಕ್ ಒಟ್ಟು 8 ಸಿಕ್ಸರ್ ಬಾರಿಸಿದ್ದು, ದಕ್ಷಿಣ ಆಫ್ರಿಿಕಾ ವಿರುದ್ಧ ವಿಶಾಖಪಟ್ಟಣದಲ್ಲಿ ಶತಕ ಬಾರಿಸಿದ್ದ ವೇಳೆ ರೋಹಿತ್ ಒಟ್ಟು ಸಿಕ್ಸರ್ ಸಿಡಿಸಿದ್ದರು. ಇನ್ನೂ ಈ ಪಟ್ಟಿಿಯಲ್ಲಿ ಮಾಜಿ ಆರಂಭಿಕ ಬ್ಯಾಾಟ್‌ಸ್‌‌ಮನ್ ನವಜೋತ್ ಸಿಂಗ್ ಸಿಧು ಅಗ್ರಸ್ಥಾಾನದಲ್ಲಿದ್ದಾರೆ.

ಮುಖ್ಯಾಾಂಶಗಳು
-ಎರಡನೇ ದಿನದಾಟ ಮುಕ್ತಾಾಯಕ್ಕೆೆ ಭಾರತ 493/6
-ವೃತ್ತಿಿ ಜೀವನದ ಎರಡನೇ ದ್ವಿಿಶತಕ ಸಿಡಿಸಿದ ಮಯಾಂಕ್ ಅಗರ್ವಾಲ್
-ಪೂಜಾರ, ರಹಾನೆ ಹಾಗೂ ರವೀಂದ್ರ ಜಡೇಜಾ ತಲಾ ಅರ್ಧ ಶತಕ ಸಿಡಿಸಿದರು.
-ಟೆಸ್‌ಟ್‌ ಇನಿಂಗ್‌ಸ್‌‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತದ ಎರಡನೇ ಬ್ಯಾಾಟ್‌ಸ್‌‌ಮನ್ ಮಯಾಂಕ್.
-ಎರಡನೇ ದಿನ ಟೆಸ್‌ಟ್‌ ವೃತ್ತಿಿ 4000 ರನ್ ಪೂರೈಸಿದ ಅಜಿಂಕ್ಯ ರಹಾನೆ.

ಆಟಗಾರ ಸಿಕ್ಸರ್ ರನ್ ವಿರುದ್ಧ ವರ್ಷ
ನವಜೋತ್ ಸಿಧು 8 124 ಶ್ರೀಲಂಕಾ 1994
ಮಯಾಂಕ್ ಅಗರ್ವಾಲ್ 8 243 ಬಾಂಗ್ಲಾಾದೇಶ 2019
ವಿರೇಂದ್ರ ಸೆಹ್ವಾಾಗ್ 7 293 ಶ್ರೀಲಂಕಾ 2009
ಹರಭಜನ್ ಸಿಂಗ್ 7 111* ನ್ಯೂಜಿಲೆಂಡ್ 2010
ಹಾರ್ದಿಕ್ ಪಾಂಡ್ಯ 7 127 ದ.ಆಫ್ರಿಿಕಾ 2019
ರೋಹಿತ್ ಶರ್ಮಾ 7 127 ದ.ಆಫ್ರಿಿಕಾ 2019

Leave a Reply

Your email address will not be published. Required fields are marked *