Saturday, 10th May 2025

ಝೆನ್ ಕಥೆ

ಸಂಸ್ಕೃತದಲ್ಲಿ ಪ್ರಕಾಂಡ ಪಂಡಿತ ಎನಿಸಿದ್ದ ಝೆನ್ ಗುರು ಜ್ಯೂನ್, ಬಾಲ್ಯಕಾಲದಲ್ಲಿ ಪ್ರವಚನ ನೀಡುವುದರಲ್ಲಿ ಎತ್ತಿದ ಕೈ. ತನ್ನ ಸಹಪಾಠಿಗಳನ್ನೂ ಎದುರು ಕೂರಿಸಿಕೊಂಡು, ನಿರರ್ಗಳವಾಗಿ ಪ್ರವಚನ ನೀಡುತ್ತಾ, ಬಹು ಜನಪ್ರಿಯ ಎನಿಸಿದ್ದರು.

ತನ್ನ ಸ್ವಂತ ಪ್ರಗತಿಯನ್ನು ಬಿಟ್ಟು, ಇತರ ವಿದ್ಯಾರ್ಥಿಗಳಿಗೆ ಗಂಟೆಗಟ್ಟಲೆ ಜ್ಯೂನ್ ಅವರು ಪಾಠ ಮಾಡುತ್ತಿದ್ದು ದನ್ನು ಕಂಡ ಅವರ ತಾಯಿಯು ಹೀಗೆ ಹೇಳಿದರು : ‘ಮಗೂ, ನೀನು ಚಲಿಸುವ ವಿಶ್ವಕೋಶ ಎನಿಸಿ, ಸಹಪಾಠಿ ಗಳಿಗೆ ನಿರಂತರವಾಗಿ ಪಾಠ ಹೇಳುವುದರಿಂದ ನೀನು ಬುದ್ಧನ ನಿಜವಾದ ಭಕ್ತ ಎನಿಸುವುದು ಕಷ್ಟ ಎಂದೇ ನನ್ನ ಭಾವನೆ. ಸಂಸ್ಕೃತ ಗ್ರಂಥಗಳಲ್ಲಿರುವ ಮಾಹಿತಿಯ ಸಾಗರಕ್ಕೆ ಕೊನೆಯೇ ಇಲ್ಲ, ಅವುಗಳನ್ನು ಬಾಯಿಪಾಠ ಮಾಡುವುದು ಒಳ್ಳೆಯ ವಿಚಾರ. ಆದರೆ ಅದಕ್ಕೊಂದು ಮಿತಿ ಬೇಕು. ನೀನು ನಿರಂತರವಾಗಿ ಪ್ರವಚನ ಮತ್ತು ಪಾಠ ಮಾಡುವುದನ್ನು ನಿಲ್ಲಿಸು.

ನಿನ್ನ ಪಾಡಿಗೆ ಯೋಚಿಸುತ್ತಾ, ಬೆಟ್ಟದ ಮೂಲೆಯಲ್ಲಿರುವ ದೇಗುಲವೊಂದರ ಏಕಾಂತದಲ್ಲಿ ಕುಳಿತುಕೋ. ದಿನದ ಹೆಚ್ಚಿನ ಭಾಗದಲ್ಲಿ ದೇವರ ಕುರಿತು ಧ್ಯಾನ ಮಾಡು ಮತ್ತು ಚಿಂತಿಸು. ಇದರಿಂದ ಮೋಕ್ಷಮಾರ್ಗ ಗೋಚರಿಸುವುದು.’ ಆ ನಂತರ, ಜ್ಯುನ್ ಧ್ಯಾನದಲ್ಲಿ ತೊಡಗಿಕೊಂಡು, ಮುಂದೆ ದೊಡ್ಡ ಝೆನ್ ಗುರು
ಎಂದು ಹೆಸರಾದರು.

Leave a Reply

Your email address will not be published. Required fields are marked *