ರಂಗನಾಥ ಎನ್ ವಾಲ್ಮೀಕಿ
ಇದು ಸ್ಪರ್ಧಾತ್ಮಕ ಯುಗ. ಇಲ್ಲಿ ನಾವೂ ಬದುಕಬೇಕಾದರೆ ಸ್ಪರ್ಧೆಯಲ್ಲಿ ಭಾಗಿಯಾಗುವುದು ಅಗತ್ಯ. ಸ್ಪರ್ಧೆ ಅಂದ ಮೇಲೆ ಸೋಲು ಗೆಲುವು ಸಹಜ. ಸೋಲಿನ ಅನುಭವ ಪಡೆದವರೂ ಮಾತ್ರ ಗೆಲುವಿನ ಮಹತ್ವ ತಿಳಿಯಲು ಸಾಧ್ಯ. ಸೋಲಿಗೆ ಅಳುಕ ಬಾರದು, ಅಂಜಬಾರದು, ಕುಗ್ಗಬಾರದು ಸೋಲೆ ಗೆಲುವಿಗೆ ಮೆಟ್ಟಿಲು ಎಂಬ ಭಾವ ತಾಳಬೇಕು.
ಗೆಲುವು ಮರಿಚೀಕೆ ಎನಿಸಬಹುದು.ಆದರೂ ಪ್ರಯತ್ನ ಬಿಡಬಾರದು. ಆಶಾವಾದಿಗಳಾಗಿ ಯಾವುದೋ ನಿರ್ದಿಷ್ಟ ಗುರಿಯಿಟ್ಟು ಕೊಂಡು ಅದನ್ನು ಸಾಧಿಸುವದರಲ್ಲಿಯೆ ಬದುಕಿನ ಥ್ರಿಲ್ ಅಡಗಿರುತ್ತದೆ. ಅಲ್ಲಿ ಗೆಲುವು ಎಲ್ಲರಿಗೂ ಸಿಗುವುದು ಒಂದು ಓಟದ ಸ್ಪರ್ಧೆಯಲ್ಲಿ ಅದೆಷ್ಟೂ ಜನ ಭಾಗವಹಿಸಿದರು. ಪ್ರಥಮ ಸ್ಥಾನ ಪಡೆಯುವನು ಒಬ್ಬನೇ. ಈ ಬದುಕಿನಲ್ಲಿ ಯಾವುದು ಶಾಶ್ವತ ವಲ್ಲ . ಹೀಗಿರುವಾಗ ಜಯ, ಗೆಲುವು ಅದು ಹೇಗೆ ಶಾಶ್ವತ ಆಗಲು ಸಾಧ್ಯ.
ಎಲ್ಲಾ ಕ್ಷೇತ್ರಗಳಲ್ಲಿ ಅಸಾಧ್ಯ ಎನ್ನುವಂತಹ ದಾಖಲೆಗಳು ಪುಡಿ ಪುಡಿಯಾಗುತ್ತವೆ. ಈ ಸತ್ಯ ಅರಿಯಬೇಕು. ಸೋಲು ಒಂದು ಅನುಭವವಾದರೆ, ಗೆಲುವು ಅದೊಂದು ಅನುಭವ. ಸೋಲು ಬದುಕಿನಲ್ಲಿ ಅನುಭವ, ಸ್ಥಿತಪ್ರಜ್ಞೆ ತಂದರೆ ಗೆಲುವು ಆನಂದ ಸಂಭ್ರಮ ತರುವುದು. ಎರಡೂ ಬದುಕಿಗೆ ಅಗತ್ಯ ಅನಿವಾರ್ಯ…ಎರಡನ್ನೂ ಮುಕ್ತವಾಗಿ ಸ್ವೀಕರಿಸಿರುವ ಗುಣ ನಮ್ಮಲ್ಲಿ ಬೆಳೆದರೆ ಜೀವನ ಆನಂದಮಯ. ಗೆಲುವಿನ ಅಮಲು ಏರಿಸಿಕೊಂಡರೆ ಅದು ನಮ್ಮಿಂದ ದೂರವಾದಾಗ ಜೀವನ ಅಯೋಮಯ.ನಮ್ಮ
ಸಾಮರ್ಥ್ಯ ದ ಇತಿ ಮಿತಿ ಅರಿತು ನಾವೂ ಸ್ಪರ್ಧೆಗೆ ಇಳಿಯಬೇಕು.
ಅದು ಆರೋಗ್ಯಕರ ಸ್ಪರ್ಧೆ ಆಗಿರಬೇಕು. ಅಲ್ಲಿ ಯಾವುದೇ ಸ್ವಾರ್ಥ, ದ್ವೇಷ, ಅಸೂಯೆ, ಮತ್ಸರಕ್ಕೆ ಅವಕಾಶ ಇರಬಾರದು. ಸ್ಪರ್ಧೆ ಬದುಕಿನ ಒಂದು ಭಾಗವಷ್ಟೇ, ಸ್ಪರ್ಧೆಯೇ ಬದುಕಲ್ಲ. ಸ್ಪಷ್ಟವಾಗಿ ಇದನ್ನು ಅರಿತು ಮುನ್ನಡೆಯಬೇಕು. ಸೋಲು ಯಾರಿಗಿಲ್ಲ? ನೋವು , ಅವಮಾನ , ಸನ್ಮಾನ ಸಹಜ. ಇವೆಲ್ಲಗಳನ್ನು ಮುಕ್ತವಾಗಿ ಸ್ವಿಕರಿಸಿ ನಮ್ಮ ಸಾಮರ್ಥ್ಯ ದ ಮೇಲೆ ನಂಬಿಕೆ ಇಟ್ಟು ಮುನ್ನಡೆಬೇಕು. ನಮ್ಮ ಹೋರಾಟ ಜನಪರ ಕಾಳಜಿ ಹೊಂದಿರಬೇಕು.
ಸೋಲೆ ಗೆಲುವಿನ ಸೋಪಾನ ಎಂಬ ಮಾತು ವಾಸ್ತವ ಸತ್ಯ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಈ ಸೋಲು ಗೆಲುವು ಚಕ್ರಗಳಂತೆ ಸದಾ ತಿರುಗುತ್ತಿರುತ್ತವೆ. ಹಗಲು ರಾತ್ರಿಗಳಂತೆ ಬಂದು ಹೋಗುತ್ತಿರುವೆ. ನನ್ನ ಬದುಕಿನ ಉದ್ದಕ್ಕೂ ಗೆಲುವೇ ಕಂಡಿರುವೆ ನಾನೆಂದೂ ಸೋತೆ ಇಲ್ಲ ಎನ್ನುವ ಯಾವ ಒಬ್ಬ ವ್ಯಕ್ತಿ ಯನ್ನು ನಾವೂ ಕಾಣಲಾರೆವು.