Sunday, 11th May 2025

ಮರಳಿ ಬಂದ ಹಕ್ಕಿಗಳು

ಲಂಡನ್ ನಗರದಲ್ಲಿರುವ ನದಿಗಳನ್ನು, ತೊರೆಗಳನ್ನು ಪುನರುಜ್ಜೀವನಗೊಳಿಸುವ ಕೆಲಸವನ್ನು ಅಲ್ಲಿನ ಸರಕಾರ ಶಿಸ್ತಿನಿಂದ ಮಾಡುತ್ತಿದೆ. ಅದಕ್ಕೆ ಪ್ರತಿಫಲವಾಗಿ, ಆ ನಗರದ ತುಂಬಾ ಹಕ್ಕಿಗಳ ಸಂಖ್ಯೆ ಹೆಚ್ಚಳಗೊಂಡಿದೆ!

ಈ ಶತಮಾನದ ಆರಂಭದ ಹೊತ್ತಿಗೆ ಅಲ್ಲಿ ಮಿಂಚುಳ್ಳಿ ಹಕ್ಕಿಗಳು ವಿರಳ ಎನಿಸಿದ್ದವು. 2000ಕ್ಕೆ ಹೋಲಿಸಿದರೆ, ಈ ವರ್ಷ ಲಂಡನ್ ‌ನಲ್ಲಿರುವ ಮಿಂಚುಳ್ಳಿಗಳ ಸಂಖ್ಯೆ ಶೇ.450 ರಷ್ಟು ಹೆಚ್ಚಳಗೊಂಡಿದೆ! ಅಲ್ಲಿನ ಹಲವು ಜಲಮೂಲಗಳನ್ನು  ಪರಿಶುದ್ಧ ಗೊಳಿಸುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. ಲಂಡನ್ ನಗರದಲ್ಲಿ ಸುಮಾರು 400 ಮೈಲಿ ಉದ್ದದ ನದಿ, ಉಪನದಿ ಮತ್ತು ಕಾಲುವೆಗಳಿವೆ. ಇದರ ಪೈಕಿ 20 ಮೈಲಿಗಳಷ್ಟು ಉದ್ದದ ಜಲಮೂಲಗಳನ್ನು ಪುನರುಜ್ಜೀವನಗೊಳಿಸಿ, ವನ್ಯಜೀವಿಗಳು ವಾಸಿಸಲು ಅವಕಾಶ ಮಾಡಿಕೊಡಲಾಗಿದೆ.

ಇದರ ಫಲವೇ, ಹೆಚ್ಚು ಹೆಚ್ಚು ಮಿಂಚುಳ್ಳಿಗಳ ದರ್ಶನ! ಅತಿಯಾದ ನಗರೀಕರಣದಿಂದ ನಾಶಗೊಂಡ ನದಿ, ಉಪನದಿ, ಕಾಲುವೆ
ಮತ್ತು ಜಲಮೂಲಗಳನ್ನು ಪುನರುಜ್ಜೀವನಗೊಳಿಸುತ್ತಿರುವ ಲಂಡನ್ ನಗರದ ಕಾರ್ಯ ಅನುಕರಣೀಯ. ಬೆಂಗಳೂರಿನ
ಉದ್ದಗಲಕ್ಕೂ ಹರಿಯುತ್ತಿರುವ ವೃಷಭಾವತಿ ಮತ್ತು ಇತರ ಜಲಮೂಲಗಳನ್ನೂ ಇದೇ ರೀತಿ ಪುನರುಜ್ಜೀವನ ಗೊಳಿಸ ಬಹುದಲ್ಲವೆ!

ಅದರಿಂದ ಲಾಭ ಇಲ್ಲಿರುವ ಜನರಿಗೇ ಹೊರತು ಬೇರಾರಿಗೂ ಅಲ್ಲ.

Leave a Reply

Your email address will not be published. Required fields are marked *